Saturday, November 23, 2024
ಬೆಂಗಳೂರುರಾಜಕೀಯರಾಜ್ಯಸುದ್ದಿ

ಪಿಎಫ್‌ಐ ವಿರುದ್ಧ ದಾಖಲಾಗಿದ್ದ ಬರೋಬ್ಬರಿ 176 ಪ್ರಕರಣ ರದ್ದುಪಡಿಸಿತ್ತು ಸಿದ್ದರಾಮಯ್ಯ ಸರ್ಕಾರ.! – ಕಹಳೆ ನ್ಯೂಸ್

ರಾಜ್ಯದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಎಫ್‌ಐ ವಿರುದ್ಧ ದಾಖಲಾಗಿದ್ದ ಒಟ್ಟು 176 ಅಪರಾಧ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿರುವುದು ಈಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾಜದಲ್ಲಿ ಕೋಮು ಪ್ರಚೋದನೆಗೆ ಕುಮ್ಮಕ್ಕು ನೀಡುವುದಲ್ಲದೆ ಇಸ್ಲಾಮಿಕ್ ಉಗ್ರ ಸಂಘಟನೆಗಳ ಜೊತೆ ಪಿಎಫ್‌ಐ ನಿಕಟ ಸಂಪರ್ಕ ಹೊಂದಿರುವ ನಿಖರ ದಾಖಲೆಗಳನ್ನು ಕೇರಳ ಸರ್ಕಾರ ಅಲ್ಲಿನ ಹೈಕೋರ್ಟ್‌ಗೆ ಒದಗಿಸಿದ್ದರೂ, 2016ರಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣಗಳನ್ನು ಸಾರಾಸಗಟಾಗಿ ರದ್ದುಪಡಿಸಿದ್ದು ಸರಿಯೇ ಎಂಬ ಪ್ರಶ್ನೆಯೂ ಈಗ ತಲೆಯೆತ್ತಿದೆ.

ಜೈಲಲ್ಲಿಲ್ಲ, ಶಿಕ್ಷೆಯೂ ಆಗಲಿಲ್ಲ!

2008 ರಿಂದ 2013 ರವರೆಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಕಾರವಾರದಲ್ಲಿ ಪಿಎಫ್‌ಐ ವಿರುದ್ಧ ಒಟ್ಟು 126 ಕ್ರಿಮಿನಲ್ ಪ್ರಕರಣ ದಾಖಲಾಗಿ 1600 ಕ್ಕೂ ಅಧಿಕ ಮಂದಿ ಬಂಧನಕ್ಕೊಳಗಾಗಿದ್ದರು. ಆದರೆ ಸಿದ್ದು ಸರ್ಕಾರವಂದು ಕೈಗೊಂಡ ತೀರ್ಮಾನದ ಫಲವಾಗಿ ನಾಡಿನ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ಪೂರ್ಣವಾಗುವ ಮುನ್ನವೇ ಆರೋಪಿಗಳು ನಿರಪರಾಧಿಗಳಾಗಿ ಜೈಲಿನಿಂದ

ಹೊರಗೆ ಬಂದಂತಾಗಿದೆ !
ಕೋಮು ಪ್ರಚೋದನೆ, ದೊಂಬಿ, ಕೊಲೆ ಸಂಚು ಮತ್ತು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಜಾಮೀನು ರಹಿತ ಪ್ರಕರಣಗಳು ಕೆಲವರ ಮೇಲೆ ದಾಖಲಾಗಿತ್ತು. ಆದರೆ ಈ ಪ್ರಕರಣಗಳ ವಿಚಾರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಅಂದಿನ ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಇಂದು ರಾಜ್ಯದ ಜನತೆ ಪ್ರಶ್ನಿಸುವಂತಾಗಿದೆ.