Sunday, November 24, 2024
ಸುದ್ದಿ

ಮಂಗಳೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ರಾಷ್ಟ್ರ ಪ್ರತಿಜ್ಞಾವಿಧಿ ಸಂಪನ್ನ ! -ಕಹಳೆ ನ್ಯೂಸ್

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ನಿರಂತರವಾಗಿ ಕಾರ್ಯವನ್ನು ಮಾಡುತ್ತಿದೆ. ಈ ವರ್ಷ 26 ಸೆಪ್ಟೆಂಬರ್ 2022 ರಂದು ಅಂದರೆ ಘಟಸ್ಥಾಪನೆಯ ದಿನ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ 20 ವರ್ಷಗಳು ಪೂರ್ಣವಾಗುತ್ತಿದೆ. ಈ ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ, ಸಮಿತಿಯ ವತಿಯಿಂದ ದೇಶಾದ್ಯಂತ ‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನವು 31 ಆಗಸ್ಟ್ನಿಂದ 8 ನವೆಂಬರ್ 2022 ರವರೆಗೆ ನಡೆಯುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಭಿಯಾನದ ಅಂತರ್ಗತ ಮಂಗಳೂರಿನ ತಳಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದುರ್ಗಾಪುರದಲ್ಲಿ ಹಿಂದೂ ರಾಷ್ಟ್ರ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಸೌ. ಪವಿತ್ರಾ ಕುಡ್ವ ಇವರು ನೆರೆದಿದ್ದ ಧರ್ಮಪ್ರೇಮಿಗಳಿಗೆ ಹಿಂದೂ ಧರ್ಮ ಎಂದರೇನು, ಹಿಂದೂ ರಾಷ್ಟ್ರದ ಅಗತ್ಯತೆಯನ್ನು ಸವಿಸ್ತಾರವಾಗಿ ತಿಳಿಸಿದರು. ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಹಿಂದೂ ರಾಷ್ಟ್ರಕ್ಕಾಗಿ ಪ್ರತಿಜ್ಞೆ ಮಾಡಿದರು.

ಪ್ರವಚನವನ್ನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಸಂಚಾಲಕರಾದ ಶ್ರೀ. ನಾರಾಯಣ ಕಜೆ ಇವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಮತ್ತೆ ಮಾತನಾಡಿದ ಅವರು ಕೇವಲ ದೇವಸ್ಥಾನಕ್ಕೆ ಬರುವುದು ಪೂಜೆ ಮಾಡುವುದು ಇಷ್ಟು ಮಾತ್ರವಲ್ಲ, ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಎಲ್ಲರೂ ಸಹಭಾಗಿ ಆಗಬೇಕೆಂದು ತಿಳಿಸಿದರು