Monday, April 7, 2025
ಬಂಟ್ವಾಳರಾಜಕೀಯ

ಮಂಚಿ ಬಿಜೆಪಿ ಬೂತ್ ಸಂಖ್ಯೆ 193ರಲ್ಲಿ ನೂಜಿಪ್ಪಾಡಿ ಕೇಶವ ರಾಯರ ಮನೆಯಲ್ಲಿ, ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜನ್ಮದಿನಾಚರಣೆ – ಕಹಳೆ ನ್ಯೂಸ್

ಮಂಚಿ ಬಿಜೆಪಿ ಬೂತ್ ಸಂಖ್ಯೆ 193ರಲ್ಲಿ ನೂಜಿಪ್ಪಾಡಿ ಕೇಶವ ರಾಯರ ಮನೆಯಲ್ಲಿ, ಏಕಾತ್ಮತಾ ಮಾನವತಾವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.
ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಬಂಗೇರ ಧ್ವಜಾರೋಹಣ ನೆರವೇರಿಸಿದರು.ಕೊಳ್ನಾಡು ಮಹಾಶಕ್ತಿಕೇಂದ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿಜಯ ನಾಯಕ್ ರವರು ವಂದೇ ಮಾತರಂ ಹಾಡಿ ದೀನದಯಾಳ್ ಉಪಾಧ್ಯಾಯ ರವರ ಜೀವನದ ಬಗ್ಗೆ ಮಾತನಾಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲ ಹಾಲು ಉತ್ಪಾದಕರ ಪ್ರಕೋಷ್ಠದ ಕೇಶವರಾವ್ ನೂಜಿಪ್ಪಾಡಿ, ಬಂಟ್ವಾಳ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರಮೋದ್ ನೂಜಿಪ್ಪಾಡಿ, ಬೂತ್ ಸಮಿತಿ ಅಧ್ಯಕ್ಷರಾದ ರಾಜೇಶ್ ನೂಜಿಪ್ಪಾಡಿ, ಬೂತ್ ಸಮಿತಿ ಕಾರ್ಯದರ್ಶಿ ಕಿಶೋರ್ ಪತ್ತುಮುಡಿ, ಪಂಚಾಯತ್ ಸದಸ್ಯರಾದ ಶ್ರೀಮತಿ ವನಜಾಕ್ಷಿ, ಪ್ರಮುಖರಾದ ಮನೋಜ್ ಕಂಚಿಲ, ಯತಿರಾಜ್ ಚೌಕದಪಾಲು, ಶ್ರೀಮತಿ ಸೀತಾರತ್ನ,, ಶ್ರೀಮತಿ ದೂಮಕ್ಕ,ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ