Wednesday, January 22, 2025
ಸುದ್ದಿ

ಉಡುಪಿಯಲ್ಲಿ we are with ಸಿಎಂ ಅಭಿಯಾನ ಶುರು – ಕಹಳೆ ನ್ಯೂಸ್

ಉಡುಪಿ : ರಾಜ್ಯದಲ್ಲಿ ಪೇಸಿಎಂ ಅಭಿಯಾನ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಇದಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಉಡುಪಿಯಲ್ಲಿ ಅಭಿಯಾನ ಪ್ರಾರಂಭಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಿ ನಗರದಲ್ಲಿ ಪೋಸ್ಟರ್ ಅಭಿಯಾನ ನಡೆಸಲಾಯಿತು. ವಿ ಆರ್ ವಿತ್ ಕಾಮನ್ ಸಿಎಂ ಎಂಬ ಅಭಿಯಾನ ಇದಾಗಿದ್ದು, ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಕಾರ್ಯಕರ್ತರು ಪೋಸ್ಟರ್ ಅಂಟಿಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಇದನ್ನು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಹಮ್ಮಿಕೊಳ್ಳಲು ಯುವ ಮೋರ್ಚಾ ಮತ್ತು ಯೂತ್ ಫಾರ್ ಡೆವೆಲಪ್ಮೆಂಟ್ ಸಂಘಟನೆ ನಿರ್ಧರಿಸಿದೆ.

ಪೋಸ್ಟರ್ ಅಭಿಯಾನದ ನೇತೃತ್ವವನ್ನು ಜಿಲ್ಲಾ ಬಿಜೆಪಿ ಯುವಮೋರ್ಚ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಪ್ರಮುಖರಾದ ಅಭಿರಾಜ್ ಸುವರ್ಣ, ಶ್ರೀವತ್ಸ, ಸಚಿನ್, ಸಂದೇಶ್ ಪ್ರಭು, ಪ್ರಣವ್ ಮೊದಲಾದವರು ವಹಿಸಿಕೊಂಡಿದ್ದಾರೆ.