Recent Posts

Sunday, January 19, 2025
ಸುದ್ದಿ

ಹಲೋ ಮಂಚಕ್ಕೆ ಬಾ…. ಅಂತ್ತಿದ್ದ ಕಾಮುಕ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡನಿಗೆ‌ ಮಹಿಳೆಯಿಂದಲೇ ಸಿಕ್ಕಿತ್ತು ಬಿಸಿ ಬಿಸಿ ಕಜ್ಜಾಯ – ಕಹಳೆ ನ್ಯೂಸ್

ಉಡುಪಿ : ಪ್ರತೀ ನಿತ್ಯ ಕರೆ ಮಾಡಿ ಮಂಚಕ್ಕೆ ಕರೆಯುವ ಮೂಲಕ ಕಿರುಕುಳ ನೀಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷನಿಗೆ ಆ ಮಹಿಳೆ ಪತಿಯೊಂದಿಗೆ ಸೇರಿಕೊಂಡು ಸಖತ್ ಪಾಠ ಕಲಿಸಿದ್ದಾಳೆ. ಉಡುಪಿ ತಾಲೂಕು ಶಿರ್ವ ಗ್ರಾಮದ ಪಂಜಿಮಾರಿನಲ್ಲಿ ಈ ಘಟನೆ ನಡೆದಿದೆ‌. ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್ ನನ್ನು ದೌರ್ಜನ್ಯ ಪ್ರಕರಣದಡಿ ಇದೀಗ ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಂಜಿಮಾರಿನಲ್ಲಿ‌ ಫ್ಯಾನ್ಸಿ‌ ಸ್ಟೋರ್‌ ಮಳಿಗೆ ಇಟ್ಟುಕೊಂಡಿರುವ ಮಮತಾ ಎಂಬ ಈ ಮಹಿಳೆಯಿಂದ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದ ಆರೋಪಿ ಸಂತೋಷ್ ಶೆಟ್ಟಿ, ಪ್ರತೀ ನಿತ್ಯ ಆಕೆಯ ಮೊಬೈಲ್ ಗೆ ಕರೆ ಮಾಡಿ‌ ಅಶ್ಲೀಲವಾಗಿ‌ ಮಾತನಾಡುವ ಜೊತೆಗೆ‌ ಸುತ್ತಾಡಲೂ ಕರೆಯುತ್ತಿದ್ದ ಅಲ್ಲದೆ ಈ‌ ಸಂತೋಷ್ ಶೆಟ್ಟಿ ಎಂಬ ಕಾಮಾಂದ ಹೊಟೇಲ್ ರೂಂ ಬುಕ್ ಮಾಡಿ ಮಂಚಕ್ಕೂ ಹಲವು ಬಾರಿ‌ ಆಹ್ವಾನಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ರೋಸಿಹೋಗಿದ್ದ‌ ಈ ಮಹಿಳ
ಪತಿ ರಾಜಗೋಪಾಲ್ ಅವರೊಂದಿಗೆ‌ ಸೇರಿಕೊಂಡು ಸಂತೋಷ್ ಗೆ ಬಲೆ ಬೀಸಿದ ನೊಂದ ಮಹಿಳೆ, ಹೋಟೆಲ್‌ ರೂಂಗೆ ಗ್ರೀನ್‌ ಸಿಗ್ನಲ್‌ ನೀಡುವ ನಾಟಕವಾಡಿ ತನ್ನ ಫ್ಯಾನ್ಸಿ ಸ್ಟೋರ್ ಗೆ ಕರೆಸಿಕೊಂಡು ಪತಿ‌ ಜೊತೆ ಸಂತೋಷ್ ಶೆಟ್ಟಿ ಎಂಬ ಕಾಮುಖನಿಗೆ ಗೂಸಾ ನೀಡಿದ್ದಾಳೆ.ಅಲ್ಲದೆ‌ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾಳೆ. ಇದೀಗ ಸಂತೋಷ್ ಶೆಟ್ಟಿ‌ ಎಂಬ ಕಾಮುಖ ಕರ್ನಾಟಕ ರಕ್ಷಣಾವೇದಿಕೆ ಮುಖಂಡನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.