Recent Posts

Sunday, January 19, 2025
ಸುದ್ದಿ

Exclusive : ಇಂದು ಶಿರಾಡಿ ಘಾಟ್ ರಸ್ತೆ ಉದ್ಘಾಟನೆ ; ಘಾಟ್ ಮೂಲಕ ಪ್ರಯಾಣಿಸುವರ ಪ್ರಾಣಗಳಿಗೆ ಪ್ರಯಾಣಿಕರೇ ಹೊಣೆ. ಯಾಕೆ ಅಂತ್ತೀರಾ ? ಈ ವರದಿ ಒಮ್ಮೆ ನೋಡಿ – ಕಹಳೆ ನ್ಯೂಸ್

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯನ್ನು ಕಳೆದ 6 ತಿಂಗಳಿನಿಂದ ಕಾಂಕ್ರೀಟ್ ರಸ್ತೆ ನಿರ್ಮಾಣದ ಉದ್ದೇಶದಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಇಂದು ಮತ್ತೆ ವಾಹನ ಸಂಚಾರ ಆರಂಭವಾಗಲಿದೆ.

7 ತಿಂಗಳ ಈ ಸಂಚಾರ ವ್ಯತ್ಯಯಕ್ಕೆ ಇಂದು ಕೊನೆಯಾಗಲಿದೆ. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಡಳಿವು ಮಾಹಿತಿಯನ್ನು ನೀಡಿದೆ. ಸುಮಾರು ಏಳು ತಿಂಗಳ ಬಳಿಕ ಪುನಾರಂಭಗೊಳ್ಳುತ್ತಿರುವ ಈ ರಸ್ತೆ ನಿರ್ಮಾಣ ಕಾರ್ಯ  ಹಲವಾರು ಲೋಪದೋಷಗಳನ್ನು ಹೊಂದಿದೆ. ಹಲವು ಕಡೆ ರಸ್ತೆ ನಿರ್ಮಾಣ ಕಾರ್ಯ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಎಷ್ಟೋ ಕಡೇ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಲಾಗಿದೆ .ಇದರ ಸಂಪೂರ್ಣ ವಿವರ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಸಚಿವರಿಂದ ಮರಣಕೂಪದ ಉದ್ಘಾಟನೆ :

ಹೌದು, ಇಂದು ಬೆಳಗ್ಗೆ 11.30 ಕ್ಕೆ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರವರು ನೂತನವಾಗಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಅಪಾಯಕಾರಿ ಸ್ಥಿತಿಯಲ್ಲಿರು, ಪ್ರಯಾಣಿಕರ ಮರಣಕೂಪವನ್ನು ಗುಂಡ್ಯದಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ಜರಿದು ಬಿದ್ದ ಗೋಡೆಗಳು ,ಕುಸಿದ ಧರೆಗಳು, ಅಲ್ಲಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿರುವ ಹೊಸ ಕಾಂಪೌಂಡ್ ಉದ್ಘಾಟನೆಗಿಂತ ಮೊದಲೇ ಗೋಡೆ ಜರಿದು ಬಿದ್ದಿದೆ. ಒಂದಷ್ಟು ಕಡೇ ಮಾತ್ರ  ಮಣ್ಣು ಸುರಿದಿದ್ದಾರೆ.  ತುಂಬಾ ಕಡೆ ಕಬ್ಬಿಣದ  ಸರಳು ಹೊರ ಕಾಣುತ್ತಿದೆ .ಏತನ್ಮಧ್ಯೆ ಸಕಲೇಶಪುರದ ಗಿರಿಗದ್ದೆ, ಮಾರನಹಳ್ಳಿಯಲ್ಲಿ ಧರೆ ರಾಷ್ಟ್ರೀಯ ಹೆದ್ದಾರಿಗೆ ಕುಸಿದಿದೆ.

ಅಲ್ಲದೆ ಕಾಂಕ್ರೀಟ್ ರಸ್ತೆಯು ನೆಲದ ಮಟ್ಟದಿಂದ 1 ಫೀಟ್ ನಷ್ಟು ಮೇಲ್ಭಾಗದಲ್ಲಿದ್ದು, ರಸ್ತೆಯನ್ನು ನೆಲಕ್ಕೆ ಸರಿಸಮವಾಗಿ ಮಾಡಲು ಇಕ್ಕೆಲಗಳಲ್ಲೂ ಮಣ್ಣನ್ನು ಹಾಕುವ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕೆಲವು ಕಡೆಗಳಲ್ಲಿ ವಾಹನಗಳು ಕೊಂಚ ಆಯ ತಪ್ಪಿದರೂ ಪಾತಾಳಕ್ಕೆ ಬೀಳ ಬೇಕಾದಂತಹ ಸ್ಥಿತಿಯಿದೆ. ಸಂಪೂರ್ಣ ಸುರಕ್ಷತಾ ಕ್ರಮವನ್ನು ಕೈಗೊಳ್ಳುವ ಮೊದಲೇ ಘಾಟ್ ರಸ್ತೆಯಲ್ಲಿ ವಾಹನಗಳನ್ನು ಬಿಟ್ಟಲ್ಲಿ ಅನಾಹುತವಾಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.

ರಸ್ತೆಯ ಕಾಮಗಾರಿಯಿಂದ ಸುಮಾರು 6 ತಿಂಗಳು ಕಾಲ ತಮ್ಮ ವ್ಯವಹಾರಗಳನ್ನು ನಿಲ್ಲಿಸಿದ್ದ ಸ್ಥಳೀಯ ನಿವಾಸಿಗಳೂ ರಸ್ತೆಯ ಸುರಕ್ಷತೆಯ ಬಗ್ಗೆ ಇದೀಗ ಚಿಂತಿತರಾಗಿದ್ದಾರೆ. ರಸ್ತೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡಬೇಕೆನ್ನುವ ಸ್ಥಳೀಯರ ಒತ್ತಡದಿಂದಾಗಿ ಕಾಮಗಾರಿಯನ್ನು ಸಂಪೂರ್ಣ ಮುಗಿಸುವ ಮೊದಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳಲಾಗುತ್ತಿದೆಯೋ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.

ಏನೇ ಇರಲಿ ಈ ಎಲ್ಲಾ ಕುಂದು ಕೊರತೆಗಳ ನಡುವೆಯೂ ಈ ರಸ್ತೆ ಇಂದು ಉದ್ಘಾಟನೆಯಾಗಿದೆ ಇನ್ನು ಇದರ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಜೀವಕ್ಕೆ ಪ್ರಯಾಣಿಕರೇ ಹೊಣೆ ಎಂಬೂದಂತ್ತೂ ನೂರಕ್ಕೆ ನೂರರಷ್ಟು ಸತ್ಯ.

Photo : Apul Alva Ira

Report : Ganesh Padmunja