ಸ.ಹಿ.ಪ್ರಾ ಶಾಲೆ ಮೈರೋಳ್ತಡ್ಕದಲ್ಲಿ ನಡೆದ ಆಯುಷ್ಮಾನ್ ಕಾರ್ಡ್ ಹಾಗೂ ಮಾಹಿತಿ ಕಾರ್ಡ್ ಕಾರ್ಯಾಗಾರ –ಕಹಳೆ ನ್ಯೂಸ್
ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿ ಮೈರೋಳ್ತಡ್ಕ ಬಂದಾರು ಗ್ರಾಮ. ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಗುರುವಾಯನಕೆರೆ & ಸೇವಾ ಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವೀಸ್ ಸೆಂಟರ್ ಮೈರೋಳ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಮಾಹಿತಿ ಕಾರ್ಡ್ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕದಲ್ಲಿ ನಡೆದಿದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.ಗಂಟೆಯವರೆಗೆ ಕಾರ್ಯಾಗಾರ ನಡೆದಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪ್ರಯೋಜನ ಪಡೆದುಕೊಂಡಿದ್ದಾರೆ.
ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ನ ಪ್ರಯೋಜನಗಳು.
1.ಬಿ.ಪಿ.ಎಲ್. ಕಾರ್ಡುದಾರರಿಗೆ 5 ಲಕ್ಷದವರೆಗಿನ ಉಚಿತ ಚಿಕಿತ್ಸೆ.
2.ಎ.ಪಿ.ಎಲ್. ಕಾರ್ಡುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ 30 ಶೇಕಡಾ ರಿಯಾಯಿತಿ.
ಇನ್ನು ಇದೇ ವೇಳೆ ಮತದಾರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಗಾರವೂ ನಡೆದಿದೆ.