Recent Posts

Monday, November 25, 2024
ಸುದ್ದಿ

ಉಡುಪಿ: ಉಚ್ಚಿಲ ದಸರಾ ಸಂಭ್ರಮ: ಇಂದು ಲಲಿತಾ ಪಂಚಮಿ, “ಶತ ವೀಣಾವಲ್ಲರಿ’ – ಕಹಳೆ ನ್ಯೂಸ್

ಉಚ್ಚಿಲ : ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವ ಮತ್ತು ಉಚ್ಚಿಲ ದಸರಾ ಪ್ರಯುಕ್ತ ಸೆ. 30ರಂದು ಲಲಿತಾ ಪಂಚಮಿ ಸಂಭ್ರಮ ಹಾಗೂ ಶತ ವೀಣಾವಲ್ಲರಿ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 9ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ನವದುರ್ಗೆಯರಿಗೆ ಮಹಾಮಂಗಳಾರತಿ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಬೆಳಗ್ಗೆ 10ರಿಂದ 4ರ ವರೆಗೆ ಭಜನೆ, 5ಕ್ಕೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆ, ರಾತ್ರಿ 7.30ಕ್ಕೆ ನವದುರ್ಗೆಯರಿಗೆ ಮಹಾಪೂಜೆ, 8.30ಕ್ಕೆ ಶ್ರೀ ಅಂಬಿಕಾ ಕಲೊಕ್ತ ಪೂಜೆ ನಡೆಯಲಿದೆ.

101 ವೀಣಾ ವಾದನ :

ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಸಂಜೆ 4ರಿಂದ 5ರ ವರೆಗೆ ವಿದ್ವಾನ್‌ ಪವನ ಬಿ. ಆಚಾರ್‌ ಮಣಿಪಾಲ ಅವರ ನಿರ್ದೇಶನ ಮತ್ತು ನಿರ್ವಹಣೆಯಲ್ಲಿ ಏಕಕಾಲಲ್ಲಿ 101 ಮಂದಿ ವೀಣಾ ವಾದಕರಿಂದ “ಶತ ವೀಣಾವಲ್ಲರಿ’ ಕಾರ್ಯಕ್ರಮ ನಡೆಯಲಿದೆ. ಬಳಿಕ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ನೇತೃತ್ವದಲ್ಲಿ ಉಡುಪಿ ಕಿದಿಯೂರು ಹೊಟೇಲ್‌ ಪ್ರೈ.ಲಿ.ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಉಪಸ್ಥಿತಿಯಲ್ಲಿ ವಿ| ಪವನ ಬಿ. ಆಚಾರ್‌ ಅವರಿಗೆ “ವೀಣಾ ವಿನೋದಿನಿ’ ಬಿರುದು ಪ್ರದಾನಿಸಲಾಗುವುದು.

ಸಂಜೆ 5ರಿಂದ 6ರ ವರೆಗೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆಯಲಿದ್ದು ಲಲಿತಾ ಪಂಚಮಿ ಪ್ರಯುಕ್ತ ಅವರಿಗೆ ವಿಶೇಷ ಪ್ರಸಾದ ಸಹಿತ ಗೌರವಾರ್ಪಣೆ ನಡೆಯಲಿದೆ. ಸಂಜೆ 6ರಿಂದ 8ರ ವರೆಗೆ ಭರತನಾಟ್ಯ, ಜಾನಪದ ನೃತ್ಯ ನಡೆಯಲಿದೆ.

ಇಸ್ಕಾನ್‌ ಉಪಾಹಾರ :

ದಸರಾ ಸಂಭ್ರಮದಲ್ಲಿ ಪ್ರತೀ ದಿನ ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಿದ್ದು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಅನ್ನಸಂತರ್ಪಣೆ ಹಾಗೂ ರಾತ್ರಿ ಇಸ್ಕಾನ್‌ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಲಾಗುವ ಉಪಾಹಾರ ರೂಪದ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಮತ್ತು ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್‌. ಸಾಲ್ಯಾನ್‌ ತಿಳಿಸಿದ್ದಾರೆ.

101 ವೀಣಾ ವಾದನ :

ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಸಂಜೆ 4ರಿಂದ 5ರ ವರೆಗೆ ವಿದ್ವಾನ್‌ ಪವನ ಬಿ. ಆಚಾರ್‌ ಮಣಿಪಾಲ ಅವರ ನಿರ್ದೇಶನ ಮತ್ತು ನಿರ್ವಹಣೆಯಲ್ಲಿ ಏಕಕಾಲಲ್ಲಿ 101 ಮಂದಿ ವೀಣಾ ವಾದಕರಿಂದ “ಶತ ವೀಣಾವಲ್ಲರಿ’ ಕಾರ್ಯಕ್ರಮ ನಡೆಯಲಿದೆ. ಬಳಿಕ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ನೇತೃತ್ವದಲ್ಲಿ ಉಡುಪಿ ಕಿದಿಯೂರು ಹೊಟೇಲ್‌ ಪ್ರೈ.ಲಿ.ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಉಪಸ್ಥಿತಿಯಲ್ಲಿ ವಿ| ಪವನ ಬಿ. ಆಚಾರ್‌ ಅವರಿಗೆ “ವೀಣಾ ವಿನೋದಿನಿ’ ಬಿರುದು ಪ್ರದಾನಿಸಲಾಗುವುದು.

ಸಂಜೆ 5ರಿಂದ 6ರ ವರೆಗೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆಯಲಿದ್ದು ಲಲಿತಾ ಪಂಚಮಿ ಪ್ರಯುಕ್ತ ಅವರಿಗೆ ವಿಶೇಷ ಪ್ರಸಾದ ಸಹಿತ ಗೌರವಾರ್ಪಣೆ ನಡೆಯಲಿದೆ. ಸಂಜೆ 6ರಿಂದ 8ರ ವರೆಗೆ ಭರತನಾಟ್ಯ, ಜಾನಪದ ನೃತ್ಯ ನಡೆಯಲಿದೆ.

ಇಸ್ಕಾನ್‌ ಉಪಾಹಾರ :

ದಸರಾ ಸಂಭ್ರಮದಲ್ಲಿ ಪ್ರತೀ ದಿನ ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಿದ್ದು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಅನ್ನಸಂತರ್ಪಣೆ ಹಾಗೂ ರಾತ್ರಿ ಇಸ್ಕಾನ್‌ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಲಾಗುವ ಉಪಾಹಾರ ರೂಪದ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಮತ್ತು ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್‌. ಸಾಲ್ಯಾನ್‌ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.