Recent Posts

Tuesday, November 26, 2024
ಸುದ್ದಿ

ಉಡುಪಿ : ಮತ್ತೆ “ ಲುಂಪಿ ’ ಚರ್ಮ ಸೋಂಕಿನ ಆತಂಕ : ಕರಾವಳಿಯಲ್ಲಿ ಮುನ್ನೆಚ್ಚರಿಕೆ ಲಸಿಕೆ ದಾಸ್ತಾನು – ಕಹಳೆ ನ್ಯೂಸ್

ಉಡುಪಿ : ಚರ್ಮ ಗಂಟು ರೋಗ (ಲುಂಪಿ) ಸೋಂಕಿಗೆ ದೇಶದ ವಿವಿಧ ಕಡೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಾನುವಾರುಗಳು ಅಸುನೀಗಿವೆ. ಕರಾವಳಿಯಲ್ಲಿ ಇದುವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲವಾದರೂ ಪಶು ಸಂಗೋಪನೆ ಇಲಾಖೆ ಮುಂಜಾಗ್ರತೆ ವಹಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲೆಯಲ್ಲಿ 2.58 ಲಕ್ಷ ಜಾನುವಾರುಗಳಿದ್ದು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ. ಬೇರೆ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದು ಆತಂಕಕ್ಕೆ ಕಾರಣ ವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಅಲ್ಪಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿತ್ತಾದರೂ ಸಕಾಲಿಕ ಚಿಕಿತ್ಸೆಯಿಂದ ಜಾನುವಾರುಗಳು ಶೀಘ್ರ ಗುಣಮುಖವಾಗಿದ್ದವು.

ರೋಗ ಲಕ್ಷಣಗಳು :

ರೋಗಗ್ರಸ್ಥ ಜಾನುವಾರುಗಳಿಂದ ನೊಣ, ಸೊಳ್ಳೆ, ಉಣ್ಣಿಗಳ ಮೂಲಕ ಆರೋಗ್ಯಕರ ಜಾನುವಾರುಗಳಿಗೆ ಸೋಂಕು ಹರಡುತ್ತದೆ. ಜ್ವರ, ಶರೀರದಲ್ಲಿ ಅಲ್ಲಲ್ಲಿ ಸಿಡುಬಿನಂತಹ ಗುಳ್ಳೆಗಳು, ಗುಳ್ಳೆಗಳು ಒಡೆದ ಜಾಗದಲ್ಲಿ ಗುಳಿಗಳು, ಗಂತಿಗಳು ಕಂಡುಬರುವುದು, ಹಲವು ದಿನಗಳ ವರೆಗೆ ವಾಸಿಯಾಗದ ಗಾಯಗಳು, ದೇಹದ ಹಲವು ಭಾಗಗಳಿಗೆ ಸೋಂಕು ವ್ಯಾಪಿಸಿ ದೇಹ ಕುಂದುವುದು, ಹಾಲಿನ ಉತ್ಪಾದನೆ ಕಡಿಮೆಯಾಗುವುದು ಪ್ರಮುಖ ಲಕ್ಷಣಗಳು. ಸೂಕ್ತ ಚಿಕಿತ್ಸೆ ದೊರೆತಲ್ಲಿ ಎರಡು ವಾರದೊಳಗೆ ರೋಗ ಹತೋಟಿಗೆ ಬರುತ್ತದೆ ಎನ್ನುತ್ತಾರೆ ತಜ್ಞ ಪಶು ವೈದ್ಯರು.

ರೋಗ ಲಕ್ಷಣಗಳು