Recent Posts

Tuesday, November 26, 2024
ಸುದ್ದಿ

ಮೂಡುಬಿದಿರೆ ಎಕ್ಸಲೆ0ಟ್ ಪದವಿಪೂರ್ವ ಕಾಲೇಜಿನಲ್ಲಿ ‘ಆಹಾರ ಮೇಳ’ – ಕಹಳೆ ನ್ಯೂಸ್

ಮೂಡುಬಿದಿರೆ: ಇಲ್ಲಿನ ಎಕ್ಸಲೆ0ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಡುಗೆ ಸ್ಪರ್ದೆ ಏರ್ಪಡಿಸಲಾಯಿತು. ತೀರ್ಪುಗಾರರಾಗಿ ಸಿ0ಚನ ಸೌಹಾರ್ದ ಬ್ಯಾ0ಕಿನ ಸಿಇಒ ಸ0ಗೀತ ಪ್ರಭು, ಮೂಡುಬಿದಿರೆ ಜೆಸಿಐ ತ್ರಿಭುವನ್ ಇದರ ಅಧ್ಯಕ್ಷೆ ಶಾ0ತಲಾ, ರಶ್ಮಿತಾ ಹೆಗ್ಗಡೆ ಆಗಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ0ದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಆಹಾರ ಮತ್ತು ಅದರ ಪ್ರಸ್ತುತಿಯನ್ನು ವೀಕ್ಷಿಸಿ ಮಾತನಾಡಿದ ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಇಲ್ಲಿನ ವಿದ್ಯಾರ್ಥಿಗಳು ತಯಾರಿಸಿದ ಖಾದ್ಯವನ್ನು ಕ0ಡಾಗ ಅವರ ವೈವಾಹಿಕ ಜೀವನ ಸುಖವಾಗಿರುತ್ತದೆ ಎ0ದೆನಿಸುತ್ತದೆ ಎ0ದರು. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಆಹಾರ ಪಾನೀಯಗಳನ್ನು ನೋಡಿದರೆ ನಿಮ್ಮ ತಾಯ0ದಿರು ನಿಮ್ಮ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ ಎ0ದರು. ಸ್ಪರ್ದಾ ಕಾರ್ಯಕ್ರಮವನ್ನು ಆಯೋಜಿಸಿದ ತ0ಡಕ್ಕೆ ಅಭಿನ0ದಿಸಿದರು.

ಸ0ಸ್ಥೆಯ ಉಪನ್ಯಾಸಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ತಯಾರಿಸಿದ ಆಹಾರಗಳ ರುಚಿಯನ್ನು ಸವಿದರು. ದ್ವಿತೀಯ ವಿಜ್ಞಾನ ವಿಭಾಗದ ಹೇಮ0ತ್ ತ0ಡ ಪ್ರಥಮ ಸ್ಥಾನವನ್ನು, ದ್ವಿತೀಯ ವಿಜ್ಞಾನ ವಿಭಾಗದ ಸ್ಪೂರ್ತಿ ತ0ಡ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಖುಷಿ ತ0ಡ ದ್ವಿತೀಯ ಸ್ಥಾನವನ್ನು, ದ್ವಿತೀಯ ವಿಜ್ಞಾನ ವಿಭಾಗದ ಸಮೃದ್ಧ್ ಎಸ್ ರೈ ತ0ಡ ಮತು ಪ್ರಥಮ ವಾಣಿಜ್ಯ ವಿಭಾಗದ ರೋಚನ ಮಲ್ಯ ತ0ಡ ತೃತೀಯ ಸ್ಥಾನವನ್ನು, ಪ್ರಥಮ ವಿಜ್ಞಾನ ವಿಭಾಗದ ಶರಣೇಶ್ ತ0ಡ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಮೋನಿಕಾ ತ0ಡ ಸಮಾಧಾನಕರವಾದ ಬಹುಮಾನವನ್ನು ಪಡೆದಿರುತ್ತಾರೆ.

ಸ0ಸ್ಥೆಯ ಅಧ್ಯಕ್ಷ ಶ್ರೀ ಯುವರಾಜ ಜೈನ್, ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಆ0ಗ್ಲ ಮಾಧ್ಯವi ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಕಾರ್ಯಕ್ರಮದ ಸ0ಯೋಜಕ ಪ್ರಶಾ0ತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪನ್ನಗ ಜೈನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾಲಕ್ಷಿ÷್ಮÃ ರೈ ವ0ದಿಸಿದರು.