ಕೊರಟಗೆರೆ : ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದ ಮಾಜಿ ಸೈನಿಕ ಗಿರಿಯಪ್ಪ ಸುಮಾರು 75 ವರ್ಷ ವಯಸ್ಸಾಗಿದ್ದು ಇವರು ಸುಮಾರು 20ವರ್ಷಗಳ ಕಾಲ ದೇಶದ ನಾನಾ ಗಡಿಭಾಗಗಳಲ್ಲಿ ತಮ್ಮ ಸೈನಿಕ ಸೇವೆಯನ್ನು ಸಲ್ಲಿಸಿದ್ದರು.
ತದನಂತರ ಸ್ವಗ್ರಾಮಕ್ಕೆ ಹಿಂತಿರುಗಿದ್ದರು ಕೆಲವು ತಿಂಗಳ ಹಿಂದೆಯಷ್ಟೆ ವಯಸ್ಸಾದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ದೈವಾಧೀನರಾಗಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕು ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೇರಿದಂತೆ ತಾಲ್ಲೂಕಿನ ಮಾಜಿ ಸೈನಿಕರು ಹಾಗೂ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು,ಹಾಗೂ ಗ್ರಾಮಸ್ಥರು ಸೇರಿ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು..
ಇದೇ ಸಂದರ್ಭದಲ್ಲಿ ತಾಲೂಕಿನ ಮಾಜಿ ಸೈನಿಕರುಗಳು ದೇಶದ ಸೇವೆಯನ್ನು ಮಾಡಿದ ನಮ್ಮಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ನೀಡದೆ ಅವಮಾನಿಸುತ್ತಿರುವುದು ನಮಗೆ ಬೇಸರ ತಂದಿದ್ದೆ ಆದ್ದರಿಂದ ಇನ್ನು ಮುಂದೆಯಾದರೂ ನಮಗೆ ಸಲ್ಲಬೇಕಾದ ಗೌರವ ಮತ್ತು ಮೂಲಭೂತ ಸೌಕರ್ಯಗಳನ್ನ ಸರ್ಕಾರ ನೀಡಬೇಕೆಂದು ಆಗ್ರಹಿಸಿದರು.