ಎಕ್ಸಲೆಂಟ್ ವಿದ್ಯಾಸಂಸ್ಥೆ – “ಸರ್ವ ಧರ್ಮ ಅರಿವು” ಕಾರ್ಯಕ್ರಮ : ಜಗತ್ತಿನ ಎಲ್ಲಾ ಧರ್ಮಗಳ ಕೇಂದ್ರಬಿ0ದು ಭಾರತ – ಭಟ್ಟಾರಕ ಸ್ವಾಮೀಜಿ -ಕಹಳೆ ನ್ಯೂಸ್
ಭರತ ಭೂಮಿ ಒಂದು ವನದಂತೆ, ಇಲ್ಲಿ ಎಲ್ಲವೂ ಅರಳಲು, ಪಸರಿಸಲು ವಿಶಾಲವಾದ ಆಗಸದಂತ ಹೃದಯ ವೈಶಾಲ್ಯವಿದೆ. ನಾವು ಎಲ್ಲರೂ ಅಖಂಡ ಭಾರತದ ಕನಸನ್ನು ನನಸು ಮಾಡಲು ಯತ್ನಿಸಬೇಕು. “ನೀನೂ ಬದುಕಿ ಉಳಿದವರನ್ನು ಬದುಕಲು ಬಿಡು” ಎಂಬ ತತ್ವವೇ ಭಾರತೀಯತೆ ಎಂದು ಮೂಡಬಿದ್ರೆ ಜೈನ ಮಠದ ಪರಮ ಪೂಜ್ಯ ಸ್ವಸ್ತೀಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿಯವರು ಎಕ್ಸಲೆಂಟ್ ವಿದ್ಯಾಸಂಸ್ಥೆಗಳು ಕಲ್ಲಬೆಟ್ಟು, ಮೂಡಬಿದಿರೆಯಲ್ಲಿ ನಡೆದ “ಸರ್ವ ಧರ್ಮ ಅರಿವು” ಕಾರ್ಯಕ್ರಮದಲ್ಲಿ ಮಾತನಾಡಿ ಆಶೀರ್ವಚನ ನೀಡಿದರು. ಮಾನವನು ಹಕ್ಕಿಯಂತೆ ಹಾರಲು ಕಲಿತಿದ್ದಾನೆ, ಮೀನಿನಂತೆ ಈಜುವ ಯಂತ್ರಗಳನ್ನು ಕಂಡುಹಿಡಿದೆದ್ದಾನೆ, ಅನ್ಯ ಗ್ರಹಗಳಿಗೆ ತಲುಪಿದ್ದಾನೆ ಆದರೆ ನಮಗೆ ಪರಸ್ಪರರನ್ನು ಅರಿಯುವಂತಹ ಕೆಲಸವನ್ನು ಕಲಿಸಿಕೊಡುವವರು ಬೇಕಾಗಿದ್ದಾರೆ. ಪರಧರ್ಮ ಸಹಿಸ್ಣುತೆಯೇ ಮಾನವೀಯತೆ. ಮನುಷ್ಯನಿಗೆ ಸಂಸ್ಕಾರವೇ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮ ವಿಚಾರಗಳಿಂದ ಪರಿಪೂರ್ಣಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ್ರೆöÊಸ್ತ ಧರ್ಮದ ಕುರಿತು ಉಪನ್ಯಾಸ ನೀಡಿದ ರೆ| ಫಾ| ಓನಿಲ್ ಡಿ’ಸೋಜಾ, ಧರ್ಮಗುರುಗಳು, ಪ್ಯಾರೀಸ್ ಪ್ರೀಸ್ಟ್ ಕೋರ್ಪಸ್ ಕ್ರಿಸ್ಟೀ ಚರ್ಚ್, ಮೂಡಬಿದಿರೆ ಅವರು ಪೋಪ್ ನಿಂದ ಹಿಡಿದು ತಮಗೆ ಕೆಡುಕು ಮಾಡಿದವರ ವಿರುದ್ಧ ಯಾವುದೇ ಸೇಡನ್ನು ತೀರಿಸಿಕೊಳ್ಳದೆ ಅವರಿಗೆ ಕೇಡನ್ನು ಬಯಸದೆ ಕ್ಷಮಾಪಣೆಯನ್ನು ನೀಡಿದ ಅನೇಕ ನಿದರ್ಶನಗಳನ್ನು ನಾವು ಕಂಡಿರುತ್ತೇವೆ. ಇದಕ್ಕೆ ಪ್ರೇರಣೆಯಾಗಿರುವುದು ಸಾವಿರಾರು ವರ್ಷಗಳ ಹಿಂದೆ ತನ್ನನ್ನು ಶಿಲುಬೆಗೇರೆಸಿದವರನ್ನು ಕ್ಷಮಿಸುವಂತೆ ಭಗವಂತನಲ್ಲಿ ಕೇಳಿಕೊಂಡ ಏಸು ಸ್ವಾಮಿ. ಇತರರಿಗೆ ಕೆಟ್ಟದನ್ನು ಬಯಸಬಾರದು ದ್ವೇಷ ಸಾಧನೆಗೋಸ್ಕರ ಕೆಡುಕನ್ನು ಉಂಟುಮಾಡಿದರೆ ಅದು ಕೆಡುಕಿಗೆ ಒಳಗಾದವರಿಗಿಂತ ಕೆಡುಕನ್ನು ಬಯಸಿದವರಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ. ದೇವರನ್ನು ಸಹಮಾನವರನ್ನು ಪ್ರೀತಿಸಬೇಕೆನ್ನುವುದೇ ಕ್ರೆöÊಸ್ತಧರ್ಮದ ತಿರುಳು ಎಂದರು.
ಹಿAದೂ ಧರ್ಮದ ಕುರಿತು ಡಾ ಭಾಸ್ಕರ ವೆಂಕಟರಮಣ ಭಟ್, ಸಂಸ್ಕöÈತ ಉಪನ್ಯಾಸಕರು ಮತ್ತು ಪ್ರವಚಕರು ಇವರು ಧರ್ಮ ಎನ್ನುವುದು ನಮ್ಮ ದೃಷ್ಟಿಯಲ್ಲಿ ಅತ್ಯಂತ ಶ್ರೇಷ್ಟವಾದ ಚಿಂತನೆ. ಧರ್ಮದ ಆಳಕ್ಕೆ ಇಳಿದು ಅಂತರAಗ ಸಂಶೋದನೆ ಮಾಡಿದಾಗ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ತಿಳಿಯುತ್ತದೆ.
ಪರೋಪಕಾರ ಹಿಂದು ಧರ್ಮದ ಅಂತರAಗ ಚಿಂತನೆ ಮತ್ತು ಜೀವನ ಶೈಲಿ. ಜಗತ್ತಿನ ಹಿತಕೋಸ್ಕರ ಹಿಂದು ಧರ್ಮ ನಿರಂತರ ಶ್ರಮಿಸುತ್ತಾ ಇರುತ್ತದೆ. ಆಶ್ರಯ ಬೇಡಿದವರನ್ನು ಭಾರತ ಯಾವತ್ತೂ ನಿರಾಕರಿಸಲಿಲ್ಲ. ಸಾಮರಸ್ಯದ ಶಿಕ್ಷಣ ಮಗು ತೊಟ್ಟಿಲಲ್ಲಿರುವಾಗಲೇ ಮಗುವಿಗೆ ದೊರಕುವುದು ಧರ್ಮದ ಶ್ರೇಷ್ಠತೆ. ಸಮಾಜಕ್ಕೆ ಹಿತವನ್ನು ಬಯಸುವ ಅಮೂಲ್ಯವಾದ ಬೋಧನೆ ಮಾಡಿದ್ದು ಹಿಂದು ಧರ್ಮ. ಭಾರತ ಚಿಂತನೆ ವಿಶ್ವಮಾನ್ಯವಾಗಿದೆ ಎಂದರು.
ಇಸ್ಲಾA ಧರ್ಮದ ಕುರಿತು ಜನಾಬ್ ಅಬುಸುಫಿಯಾನ್ ಹೆಚ್ ಐ ಇಬ್ರಾಹಿಂ ಮದನಿ, ಟ್ರಸ್ಟಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಪಂಪ್‌ವೆಲ್, ಮಂಗಳೂರು ಇವರು ಇಸ್ಲಾಂ ಎಂದರೆ ಕೇಳುವುದು ಮತ್ತು ಕೇಳಿ ಅನುಸರಿಸುವುದು.
ಅದೊಂದು ದೈವಿಕವಾದಂತಹ ಜೀವನ ಪದ್ದತಿ. ಆ ಪದ್ದತಿ ಬುದ್ದಿವಂತ ಮನುಷ್ಯನನ್ನು ಸಂಸ್ಕöÈತಿಯತ್ತ, ಸತ್ಕರ್ಮದತ್ತ ಕೊಂಡೊಯ್ಯುತ್ತದೆ. ದಿನಕ್ಕೆ ಐದು ಬಾರಿ ದೇವರ ಸ್ಮರಣೆಯನ್ನು ಮಾಡುವಾಗ ನಮ್ಮನ್ನು ಸತ್ಕರ್ಮದ ದಾರಿಯಲ್ಲಿ ಕೊಂಡೊಯ್ಯು ಎಂದು ಪ್ರಾರ್ಥಿಸುತ್ತೇವೆ. ಇದು ಈ ಜಗತ್ತಿನ ಶ್ರೇಷ್ಠ ಪುರುಷರ ದಾರಿ. ಮೋಸ ವಂಚನೆಯಿಲ್ಲದೆ ಎಲ್ಲರೊಂದಿಗೆ ಕರುಣೆ ಪ್ರೀತಿ ತೋರಿ ನಡೆದ ದಾರಿ. ಇದೇ ಧರ್ಮ ಎಂದರು.
ಸರ್ವಧರ್ಮ ಅರಿವು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜರವರು ಜಗತ್ತಿನ ಹಿತದೊಂದಿಗೆ ನಾವು ಮುನ್ನಡೆಯೋಣ. ಒಳ್ಳೆಯದನ್ನು ಎತ್ತಿ ಹಿಡಿಯುವುದೇ ಧರ್ಮ. ಧರ್ಮಗಳ ನಡುವಿನ ಬಾಂಧವ್ಯದ ಕಿಡಿ ವಿದ್ಯಾರ್ಥಿಗಳಲ್ಲಿ ಹಬ್ಬಿ ಸಹೋದರತ್ವದಿಂದ ಸಹಬಾಳ್ವೆ ನಡೆಸುವುದೇ ಮಾನವನ ಕರ್ತವ್ಯ ಎಂದು ತಿಳಿಸಿದರು.
ಸರ್ವ ಧರ್ಮಗಳ ಸಾರವೂ ಒಂದೇ ಅದು ಮನುಷ್ಯನ ಆತ್ಮೋದ್ಧಾರ. ಮೇಲು ಕೀಳುಗಳನ್ನು ದಾಟಿ ಶಾಂತಿ, ಪ್ರೀತಿಯಿಂದ ಬದುಕುವುದೇ ಆಗಿದೆ. ದೇವರ ದೃಷ್ಟ್ಠಿಯಲ್ಲಿ ಎಲ್ಲವೂ ಪವಿತ್ರ ಎಂದು ಭಾವಿಸಬೇಕು ಎಂದು ನುಡಿದರು.
ಪದವಿ ಪೂರ್ವ ಕಾಲೀಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಸ್ವಾಗತಿಸಿ, ಮುಖ್ಯೋಪಾಧ್ಯಾಯರು ಶಿವಪ್ರಸಾದ್ ಭಟ್ ಇವರು ವಂದಿಸಿದರು. ಡಾ ವಾಧಿರಾಜ್ ಕಲ್ಲೂರಾಯ ಇವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.