Sunday, January 19, 2025
ಸಿನಿಮಾ

ಡಿಸೆಂಬರ್’ನಲ್ಲಿ ಬಾಹುಬಲಿ ಮದುವೆ !

ಹೈದರಾಬಾದ್: ಬಾಹುಬಲಿ ಖ್ಯಾತ ನಟರಾದ ಪ್ರಭಾಸ್​ ಹಾಗೂ ಅನುಷ್ಕಾ ಶೆಟ್ಟಿ ಡಿಸೆಂಬರ್​ನಲ್ಲಿ ಮದುವೆಯಾಗಲಿದ್ದಾರಂತೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಹಾಗೂ ಪ್ರಭಾಸ್‌ರ ಕೆಮೆಸ್ಟ್ರಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿತ್ತು. ಹೀಗಾಗಿ ಪ್ರಭಾಸ್​, ಅನುಷ್ಕಾ ನಡುವೆ ಲವ್​ ಇದೆ ಎಂದು ಗುಸುಗುಸು ಟಾಲಿವುಡ್​ನಲ್ಲಿ ಹರಿದಾಡಿತ್ತು.

ಈಗ ಇದೀಗ ಖ್ಯಾತ ಫಿಲ್ಮ್ ವಿಮರ್ಶಕ ಉಮೈರ್ ಸಿಂಧು ಟ್ವಿಟ್​ ಇದಕ್ಕೆ ಸಾಕ್ಷಿಯಾಗಿದೆ. ಪ್ರಭಾಸ್, ಅನುಷ್ಕಾ ಡಿಸೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಲವ್ ನಿಜ. ಪ್ರಭಾಸ್, ಅನುಷ್ಕಾರ ಕ್ಲೋಸ್ ಫ್ರೆಂಡ್‌ವೊಬ್ಬರು ನೀಡಿದ ವಿವರಗಳ ಅನ್ವಯ ನಾನು ಈ ಟ್ವಿಟ್ ಮಾಡುತ್ತಿದ್ದೇನೆ ಎಂದು ಉಮೈರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಉಮೈರ್‌ ಟ್ವೀಟ್ ಬಗ್ಗೆ ಪ್ರಭಾಸ್ ವಕ್ತಾರರನ್ನು ವಿಚಾರಿಸಿದ್ರೆ ಅವರು ‘ಇದೆಲ್ಲ ಸುಳ್ಳು’ ಎನ್ನುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು