Thursday, January 23, 2025
ಸುದ್ದಿ

98 ಲಕ್ಷ ಮೊತ್ತದಲ್ಲಿ ಪಡುಪೆರಾರ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರಾದ ಡಾ.ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ಕ್ಷೇತ್ರದ ಪಡುಪೆರಾರ ಪಂಚಾಯತ್ ವ್ಯಾಪ್ತಿಯಲ್ಲಿ ಮೂಡುಪೆರಾರ ಗ್ರಾಮದ ಮುರ ಮತ್ತು ಪಡುಪೆರಾರ ಗ್ರಾಮದ ಪಡೀಲು ಎಂಬಲ್ಲಿ ಒಟ್ಟು 98 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ.ಭರತ್ ಶೆಟ್ಟಿಯವರು ನೆರವೇರಿಸಿದರು. ಶಾಸಕರ ಜೊತೆಗೆ ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಅಮಿತಾ ಶೆಟ್ಟಿ, ಉಪಾಧ್ಯಕ್ಷರಾದ ಸೇಸಮ್ಮ, ಪಂ.ಸದಸ್ಯರಾದ ದೇವಪ್ಪ ಶೆಟ್ಟಿ, ಯಶವಂತ ಪೂಜಾರಿ, ಗಣೇಶ, ವಿನೋದ್ , ಗಣೇಶ ಮುಂದೆ, ಮೀನಾಕ್ಷಿ, ಸುಜಾತ, ವನಿತಾ,ಜಯಂತ ಪೂಜಾರಿ, ಸೀತಾರಾಮ ಗೌಡ, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನಿಲ್ ಕುಮಾರ್, ಶಕ್ತಿ ಕೇಂದ್ರ ಪ್ರಮುಖ್ ಗುರು ಪ್ರಸಾದ್, ಬೂತ್ ಅಧ್ಯಕ್ಷರಾದ ದೀಪಕ್ ಗೌಡ, ರಾಕೇಶ್ ಪೂಜಾರಿ, ಜಿಲ್ಲಾ ಯುವ ಮೋರ್ಚಾ ಸದಸ್ಯರಾದ ಅನುರಾಜ್, ಪಿ.ಡಿಓ ಉಗ್ಗಪ್ಪ ಮೂಲ್ಯ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು