ನಿಧಿಗಾಗಿ ಹಿಂದೂ ಹೆಣ್ಣುಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿ ಬಲಿಕೊಡುತ್ತಿದ್ದ ಈ ಅನಿಲ್ ; ಹಿಂದೂ ಜಾಗರಣಾ ವೇದಿಕೆಯಿಂದ ಈ ಕುಕೃತ್ಯಕ್ಕೆ ಬಿತ್ತು ಬೇಕ್ – ಕಹಳೆ ನ್ಯೂಸ್
ಕಡಬ, ಜುಲೈ 17 : ದಕ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿಯ ಕ್ರಿಶ್ಚಿಯನ್ ಧರ್ಮದ ವ್ಯಕ್ತಿಯೊಬ್ಬ ನಿಧಿ ಪಡೆಯಲು ಹಿಂದೂ ಮಹಿಳೆಯನ್ನು ಅಪಹರಿಸಿ ,ಮತಾಂತರಿಸಿ, ಆಕೆಯನ್ನು ಬಲಿ ಕೊಡಲು ಯತ್ನಿಸಿದ ,ಹಾಗೂ ಆ ಯತ್ನವನ್ನು ಮಂಗಳೂರಿನ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ವಿಫಲಗೊಳಿಸಿ ಆ ಮಹಿಳೆಯನ್ನು ರಕ್ಷಿಸಿದ್ದಾರೆ.
ದಕ ಜಿಲ್ಲೆಯಂತಹ ವಿದ್ಯಾವಂತರ ಜಿಲ್ಲೆಯಲ್ಲಿ ಇಂತಾಹದೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ನಡೆದದ್ದು ಎಲ್ಲರನ್ನೂ ಆತಂಕಕ್ಕೆ ದೂಡಿದೆ. 21 ನೇ ಶತಮಾನದಲ್ಲೂ ನಿಧಿಯಂತಹ ಮೂಢ ನಂಬಿಕೆಗೆ ಹಂಬಲಿಸುವುದು , ಅದಕ್ಕಾಗಿ ಮನುಷ್ಯ ಜೀವವನ್ನೇ ಬಲಿ ಕೊಡುವಂತಹ ಅಮಾನವೀಯ ಕೃತ್ಯ ನಡೆಯುತ್ತದೆ ಎನ್ನುವುದು ದುರಂತವೇ ಸರಿ.
ಹಿಂದೂ ಸಂಘಟನೆಗಳು ಸಕಾಲದಲ್ಲಿ ಸ್ಪಂದಿಸಿದ ಕಾರಣ ಕಡಬ ಮೂಲದ ಮಹಿಳೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ ಘಟನೆ ಹಾಸನದ ಪೆನ್‌ಷನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಬಂಧಿತ ಆರೋಪಿಯನ್ನು ಉಪ್ಪಿನಂಗಡಿಯ ಇಚಿಲಂಪಾಡಿಯ ನಿವಾಸಿ ಅನಿಲ್ ಕೆ.ಪಿ ಎಂದು ಗುರುತಿಸಲಾಗಿದೆ. ಆರೋಪಿಯು ನೆಲ್ಯಾಡಿಯಲ್ಲಿ ಜೆಸಿಬಿ ಮತ್ತು ಕಲ್ಲಿನಕೊರೆ ಉದ್ಯಮ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಹಿನ್ನೆಲೆ :
ಆರೋಪಿ ಅನಿಲ್ ತನ್ನ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿಯನ್ನು ಅವರ ಇಬ್ಬರು ಮಕ್ಕಳೊಂದಿಗೆ ಜುಲೈ 11 ರಂದು ನೆಲ್ಯಾಡಿಯಿಂದ ಅಪಹರಿಸಿದ್ದ. ಆರೋಪಿ ಅನಿಲ್ ತನ್ನ ಗೆಳೆಯ ಉಪ್ಪಿನಂಗಡಿಯ ನೂರುದ್ದೀನ್ ಸಹಾಯದಿಂದ ಮಹಿಳೆ ಮತ್ತು ಮಕ್ಕಳನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಕ್ರಿಶ್ಚಿಯನ್ ಗೆ ಮತಾಂತರ ಮಾಡಿದ್ದರು ಎನ್ನಲಾಗಿದೆ. ಹಾಸನ ಮೂಲದ ಸ್ವಾಮಿಯೊಬ್ಬನ ಮಾತಿನಿಂದ ಮಹಿಳೆಯನ್ನು ಅಪಹರಿಸಿದ್ದ. ನಿಧಿಗಾಗಿ ಅಪಹರಣ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಅಮಾವಾಸ್ಯೆಯಂದು ಜನಿಸಿದವರನ್ನು ಬಲಿ ನೀಡಿದರೆ ನಿಧಿ ಸಿಗುವುದಾಗಿ ಸ್ವಾಮೀಜಿ ಸೂಚಿಸಿದ್ದರಿಂದ ಅಪಹರಣ ಮಾಡಲಾಗಿತ್ತು. ಅವರನ್ನು ಅಪಹರಿಸಿ ಹಾಸನದ ತಣ್ಣೀರಹಳ್ಳಿ ಮನೆಯೊಂದರಲ್ಲಿ ಕೂಡಿಹಾಕಲಾಗಿತ್ತು. ಈ ಮಾಹಿತಿಯನ್ನು ಆಧರಿಸಿ ಹಾಸನದ ಪೊಲೀಸರೊಂದಿಗೆ ಸೇರಿಕೊಂಡು ಮಂಗಳೂರಿನ ವಾಮಂಜೂರಿನ ಹಿಂದೂ ಸಂಘಟನೆಯಿಂದ ಕೂಡಿ ಹಾಕಿದ್ದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಇದೀಗ ಆರೋಪಿ ಅನಿಲ್ ಪೊಲೀಸರ ಅತಿಥಿಯಾಗಿದ್ದಾನೆ.