Wednesday, January 22, 2025
ಸುದ್ದಿ

ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್‌ಗೆ ವಿರೋಧವಾಗುತ್ತಿರುವಾಗ, ಭಾರತದ ಹಿಜಾಬ್ ಬೆಂಬಲಿಗರು ಎಲ್ಲಿದ್ದಾರೆ ? : ವಕೀಲೆ ರಚನಾ ನಾಯ್ಡು – – ಕಹಳೆ ನ್ಯೂಸ್

ಕೆಲವು ತಿಂಗಳುಗಳ ಹಿಂದೆ, ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಪ್ರವೇಶಿಸುವ ವಿಷಯದಲ್ಲಿ ಮುಸ್ಲಿಂ ಹುಡುಗಿಯರ ಪ್ರಕರಣವು ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪಿತ್ತು. ಪ್ರಸ್ತುತ ಹಿಜಾಬ್‌ಅನ್ನು ವಿರೋಧಿಸುತ್ತಿರುವ ಇರಾನ್ ಮತ್ತು ಇತರ ಇಸ್ಲಾಮಿಕ್ ದೇಶಗಳಲ್ಲಿನ ಮಹಿಳೆಯರ ಭಾವನೆಗಳನ್ನು ಏಕೆ ಪರಿಗಣಿಸಲಾಗುತ್ತಿಲ್ಲ ? ಭಾರತದಲ್ಲಿನ ಘಟನೆಗಳು ಮತ್ತು ಜಗತ್ತಿನಾದ್ಯಂತದ ಈ ರೀತಿಯ ಘಟನೆಗಳನ್ನು ನೋಡಿದಾಗ, ಕೆಲವುಕಡೆಗಳಲ್ಲಿ ಆಕ್ರೋಶ ಕಂಡುಬರುತ್ತದೆ. ಯಾವಾಗಲೂ ವಿವಿಧ ಘಟನೆಗಳ ಬಗ್ಗೆ ವಿದೇಶಗಳ ಉದಾಹರಣೆಯನ್ನು ನೀಡುವವರು ಸದ್ಯ ಜಗತ್ತಿನಾದ್ಯಂತ ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್‌ಗೆ ವಿರೋಧ ವ್ಯಕ್ತವಾಗುತ್ತಿರುವಾಗ ಭಾರತದಲ್ಲಿ ಹಿಜಾಬ್‌ನ ಬೆಂಬಲಿಗರು ಎಲ್ಲಿದ್ದಾರೆ ಎಂದು ಛತ್ತೀಸಗಢದ ದುರ್ಗ ಇಲ್ಲಿನ ವಕೀಲೆ ರಚನಾ ನಾಯ್ಡು ಇವರು ಪ್ರಶ್ನಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಜಗತ್ತಿನಲ್ಲಿ ಹಿಜಾಬ್‌ಗೆ ವಿರೋಧ ಆದರೆ ಭಾರತದಲ್ಲಿ ಹಿಜಾಬ್‌ಗಾಗಿ ಆಂದೋಲನ !’ ಎಂಬ ವಿಷಯದ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಸಂಗಮ್ ಟಾಕ್ಸ್’ ನ ಸಂಪಾದಕಿ ತಾನ್ಯಾ ಇವರು ಮಾತನಾಡುತ್ತಾ, ಹಿಜಾಬ್ ಕಡ್ಡಾಯಗೊಳಿಸುವುದು ಇಸ್ಲಾಮಿಕ್ ದೇಶಗಳ ರಾಜಕೀಯ ಕಾರ್ಯಕ್ರಮವಾಗಿದೆ. ಕೆಲವು ತಿಂಗಳ ಹಿಂದೆ ನಮ್ಮ ದೇಶದ ಕೆಲವು ರಾಜ್ಯಗಳ ಶಾಲೆಗಳಲ್ಲಿ ಹಿಜಾಬ್ ಗೆ ವಿರೋಧವಾಯಿತು ಎಂದು ಮುಸ್ಲಿಂ ಹುಡುಗಿಯರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ವಿಡಿಯೋವನ್ನು ಕ್ರಮಬದ್ಧವಾಗಿ ಜನರ ವರೆಗೆ ತಲುಪಿಸಲಾಯಿತು. ಶಾಲೆಯಲ್ಲಿ ಹಿಜಾಬ್ ಧರಿಸಿಯೇ ಬರಬೇಕು, ಎಂಬ ಬೇಡಿಕೆಗಾಗಿ ಈ ಶಾಲೆಯ ಹುಡುಗಿಯರಿಗೆ ವಕೀಲರೂ ಸಹಜವಾಗಿಯೇ ಸಿಕ್ಕಿದರು ಮತ್ತು ಅವರು ಸರ್ವೋಚ್ಚ ನ್ಯಾಯಾಲಯದ ವರೆಗೆ ತಲುಪಿದರು. ಇವರಿಗೆ ಮುಸ್ಲಿಂ ಸಂಘಟನೆಗಳ ಬೆಂಬಲವೂ ಸಿಕ್ಕಿತು. ನಮ್ಮ ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಹಿಜಾಬ್ ವಿಷಯವನ್ನು ಎತ್ತಿಹಿಡಿಯಲಾಗಿದೆ ಎಂದು ಹೇಳಿದರು.
ಸನಾತನ ಸಂಸ್ಥೆಯ ಸೌ. ಕ್ಷಿಪ್ರಾ ಜುವೇಕರ್ ಇವರು ಮಾತನಾಡುತ್ತಾ, ‘ಪಾರ್ಸಿ ಸಹೋದರರ ಪರ್ಷಿಯಾ ದೇಶ ಇರಾನ್ ಆಯಿತು. ಇರಾನ್‌ನಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ತೆಗೆದು ಬಲವಾಗಿ ವಿರೋಧಿಸಿದ್ದಾರೆ. ಕೆಲವು ತಥಾಕಥಿತ ಉದಾರವಾದಿಗಳು ಪಿತೂರಿಯ ಮೂಲಕ ಹಿಜಾಬ್ ಅನ್ನು ಬೆಂಬಲಿಸುತ್ತಿದ್ದಾರೆ. ನಾರಿ ಶಕ್ತಿ ಒಂದಾದರೆ, ಏನಾಗಬಹುದು, ಎಂಬುದು ಜಗತ್ತಿನಾದದ್ಯಂತದ ಮಹಿಳೆಯರಿಂದ ಹಿಜಾಬ್‌ಗೆ ಆಗುತ್ತಿರುವ ವಿರೊಧದಿಂದ ಗಮನಕ್ಕೆ ಬರುತ್ತದೆ. ಇರಾನ್‌ನಂತಹ ಅನೇಕ ಇಸ್ಲಾಮಿಕ್ ದೇಶಗಳಲ್ಲಿ, ಮುಸ್ಲಿಂ ಮಹಿಳೆಯರು ತಮ್ಮ ದಬ್ಬಾಳಿಕೆಯ ಕಾನೂನುಗಳಿಂದ ತುಳಿತಕ್ಕೊಳಗಾಗಿದ್ದಾರೆ, ಅದನ್ನು ಈಗ ವಿರೋಧಿಸಲಾಗುತ್ತಿದೆ. ಹಿಂದೂ ಧರ್ಮವು ಮಹಿಳೆಯರನ್ನು ದೇವಿಯೆಂದು ಪರಿಗಣಿಸುತ್ತದೆ, ಈ ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪನೆಯಾದಾಗ ಮಹಿಳೆಯರು ಖಂಡಿತವಾಗಿಯೂ ಸುರಕ್ಷಿತವಾಗಿರುತ್ತಾರೆ ಎಂದು ಹೇಳಿದರು.