Wednesday, January 22, 2025
ಸುದ್ದಿ

ಸ್ವಾತಂತ್ರ‍್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಭಿತ್ತಬೇಕಿತ್ತು; ಪ್ರಮೋದ್ ಮುತಾಲಿಕ್- ಕಹಳೆ ನ್ಯೂಸ್

ಬಂಟ್ವಾಳದಲ್ಲಿ ‘ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ’ ಎಂಬ ಪಿಎಫ್ ಐ ಗೋಡೆ ಬರಹ ವಿಚಾರಕ್ಕೆ ಸಂಬAಧಿಸಿ ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಪಿ ಎಫ್ ಐ ಬ್ಯಾನ್- ಬಂಧನದಿAದ ಇವರ ಆಟ ಮುಗಿಯೋದಿಲ್ಲ. ಪಿಎಫ್‌ಐನ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ ಷಡ್ಯಂತ್ರ ದೇಶದ್ರೋಹಿ ಪ್ರವೃತ್ತಿ ಬ್ಯಾನ್ ನಿಂದ ತಡೆಯಲು ಸಾಧ್ಯವಿಲ್ಲ. ಪಿ ಎಫ್ ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ಪೊಲೀಸ್ ಗುಪ್ತಚರ ಇಲಾಖೆ ಸರಕಾರ ಅಲರ್ಟ್ ಆಗಬೇಕು. ಬಂಟ್ವಾಳದ ಬರಹ ಒಂದು ಎಚ್ಚರಿಕೆಯಾಗಿದೆ. ಪಿಎಫ್‌ಐ ಇನ್ನೂ ಆಕ್ಟಿವ್ ಆಗಿದೆ ಅನ್ನೋದರ ಸಂಕೇತ ಇದು. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದರು. ಇನ್ನು ಸ್ವಾತಂತ್ರ‍್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ ರಾಷ್ಟ್ರೀಯತೆ ಭಿತ್ತಬೇಕಿತ್ತು. ತುಷ್ಟೀಕರಣ ಮಾಡಿ ಕಾಂಗ್ರೆಸ್ ಅವರನ್ನು ದಾರಿ ತಪ್ಪಿಸಿದ ಪರಿಣಾಮ ಇದು. ಕಾಂಗ್ರೆಸ್ ಮುಸ್ಲಿಮರನ್ನು ಪ್ರತ್ಯೇಕವಾಗಿ ಬೆಳೆಸಿದ್ದು ಇದಕ್ಕೆ ಕಾರಣ. ಭಯೋತ್ಪಾಧನ ಕೊಲೆ ಗಲಭೆ ಕಾಂಗ್ರೆಸ್‌ನ ತುಷ್ಟೀಕರಣದ ಕೊಡುಗೆ. ಮುಸ್ಲಿಮರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂಬ ಶೇ. 99 ನಂಬಿಕೆ ನನ್ನಲ್ಲಿಲ್ಲ. ಇನ್ನು ಆರ್ ಎಸ್ ಎಸ್ ನಾಯಕರು ಮಸೀದಿಗೆ ಭೇಟಿ ಕೊಟ್ಟು ಮನಪ್ರವರ್ತನೆ ಆಗುತ್ತದೆ ಎಂದು ನಾನು ಒಪ್ಪಲ್ಲ. ನಮ್ಮ ಶತ್ರು ಯಾರು ಮಿತ್ರ ಯಾರು ಎಂದು ಹಿಂದೂ ಸಮಾಜಕ್ಕೆ ಸ್ಪಷ್ಟ ಕಲ್ಪನೆ ಇಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂಗಳು ಸಾವಿರಾರು ವರ್ಷದಿಂದ ಸೌಹಾರ್ದತೆಯಲ್ಲೇ ಇದ್ದೇವೆ. ಹಿಂದೂ ಸಮಾಜದಲ್ಲಿ ಆಕ್ರಮಣ ಮಾಡುವ ಮಾನಸಿಕತೆ ಇಲ್ಲ. ಮಸೀದಿ ಮದರಸಕ್ಕೆ ಹೋಗಿ ಮನವರಿಕೆ ಮಾಡುತ್ತೇವೆ ಎಂಬುದು ಅಸಾಧ್ಯದ ಮಾತು. ಹಿಂದೂ ಬಲಕ್ಕೆ ಪ್ರತಿ ಬಲವಾಗಿ ಬೆಳೆಯಬೇಕು ಎಂದ್ರು. ದೇಶದಲ್ಲಿ ಆರ್ಥಿಕ ಅಸಮಾನತೆ ಎಂಬ ಆರ್ ಎಸ್ ಎಸ್ ನ ಮುಖಂಡ ಹೊಸಬಾಳೆ ಹೇಳಿಕೆಕೆ ಸಂಬAಧಿಸಿ ಪ್ರತಿಕ್ರಿಯಿಸಿದ ಮುತಾಲಿಕ್ ಅವರು, ದತ್ತಾತ್ರೇಯ ಹೊಸಬಾಳೆ ಆರ್‌ಎಸ್‌ಎಸ್ 2ನೇ ಸ್ಥಾನ ಹೊಂದಿರುವ ವ್ಯಕ್ತಿ. ಅಧ್ಯಯನ ಮಾಡಿಯೇ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಹೇಳಿದ್ದಾರೆ. ಯಾವುದೇ ಟೀಕೆ, ದ್ವೇಷ ಮಾಡಲು ಅವರು ರಾಜಕೀಯ ವ್ಯಕ್ತಿಯಲ್ಲ. ದೇಶದ ಬಗ್ಗೆ ಕಳಕಳಿ ಮತ್ತು ವೇದನೆಯಿಂದ ಹೇಳಿದ್ದಾರೆ. ಸಿಟ್ಟು ಮತ್ತು ತಪ್ಪು ಸಂದೇಶ ನೀಡುವ ಉದ್ದೇಶ ಹೊಸಬಾಳೆಗೆ ಇರುವುದಿಲ್ಲ. ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿಯ ಒಳಗೆ ಆಗುವ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಲೇಬೇಕು. ನಡೆದದ್ದೇ ದಾರಿ ಎಂದು ಬಿಜೆಪಿ ಭಾವಿಸುವ ಅಪಾಯವಿದೆ. ಆರ್ಥಿಕ ಅಸಮಾನತೆ ವಿಚಾರದಲ್ಲಿ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಹೊಸಬಾಳೆ ಹೇಳಿಕೆಯನ್ನು ಸ್ವೀಕರಿಸಿ ಸುಧಾರಣೆ ಹಾದಿಯಲ್ಲಿ ಬಿಜೆಪಿ ಬೆಳೆಯಬೇಕು. ಎಂದು ಉಡುಪಿಯಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ರು.