Tuesday, January 21, 2025
ಸುದ್ದಿ

ಬಂಟ್ವಾಳ: Tikka ಪಾರ್ಸೆಲ್ ಪಡೆಯಲು ಬಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ -ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ:ಬಂಟ್ವಾಳ: ಕಲ್ಲಡ್ಕದಲ್ಲಿ ಚಿಕನ್‌ ಟಿಕ್ಕ ಪಾರ್ಸೆಲ್ ಪಡೆಯಲು ಟಿಕ್ಕ ಶಾಪ್ ಗೆ ಬಂದಿದ್ದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಕಲ್ಲಡ್ಕ-ವಿಟ್ಲ ರಸ್ತೆಯಲ್ಲಿರುವ ಟಿಕ್ ಪಾಯಿಂಟ್ ಮಾಲಕ ಮಹಮ್ಮದ್ ಆಶ್ರಫ್ ಬಂಧಿತ ಆರೋಪಿ.

ಕಲ್ಲಡ್ಕದಲ್ಲಿರುವ ಟಿಕ್ಕಪಾಯಿಂಟ್ ಗೆ ಅಪ್ರಾಪ್ತ ಬಾಲಕ ಚಿಕನ್‌ ಟಿಕ್ಕ ಪಾರ್ಸೆಲ್ ತರಲು ಬಂದಿದ್ದಾನೆ. ಆದ್ರೆ ಈ ವೇಳೆ ಟಿಕ್ಕ ಪಾರ್ಸೆಲ್ ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿಯ ಒಳಗೆ ಬರುವಂತೆ ಹೇಳಿ, ಆತ ಪ್ಲಾಸ್ಟಿಕ್ ಚೀಲ ತರಲು ಒಳಗೆ ಹೋದ ವೇಳೆ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇಷ್ಕಕ್ಕೆ ಸುಮ್ಮನಾಗದ ಆರೋಪಿ ಘಟನೆ ನಡೆದು ಎರಡು ತಿಂಗಳ ಬಳಿಕ ಮತ್ತೆ ಅತ್ಯಾಚಾರಕ್ಕೆ ಯತ್ನ ಮಾಡಿ, ಆತ ವಿರೋಧ ವ್ಯಕ್ತಪಡಿಸಿದಾಗ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೂಡ ನಡೆದಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ನೇತೃತ್ವದ ಪೋಲಿಸರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.