Monday, January 20, 2025
ಸುದ್ದಿ

ಕಟೀಲು ಮೇಳದ ಖ್ಯಾತ ಮದ್ದಳೆಗಾರ, ಯುವ ಕಲಾವಿದ ಚಿದಾನಂದ ಕುದ್ಕುಳಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು : ಕಟೀಲು ಮೇಳದ ಖ್ಯಾತ ಮದ್ದಳೆಗಾರ, ಯುವ ಕಲಾವಿದ ಚಿದಾನಂದ ಕುದ್ಕುಳಿಯವರು (28) ಅವರು ಕೆಲ ದಿನಗಳ ಹಿಂದೆ ಜಾಂಡೀಸ್ ಖಾಯಿಲೆಗೆ ತುತ್ತಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.

ದಿ. ಮೋಂಟಪ್ಪ ಗೌಡ ಕುದ್ಕುಳಿಯವರ ಪುತ್ರರಾದ ಚಿದಾನಂದರವರು ಮೂಲತ: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕುದ್ಕುಳಿಯವರು. ಅವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನೆಲೆಸಿದ್ದರು. ಮೃತರು ಅವಿವಾಹಿತರಾಗಿದ್ದು, ಸಹೋದರ ಮಂಗಳೂರಿನಲ್ಲಿ ನೆಲೆಸಿರುವ ರತ್ನಾಕರ ಗೌಡ , ಸಹೋದರಿ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಸುಮಾರು 15 ವರ್ಷಕ್ಕೂ ಅಧಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ತೆಂಕುತಿಟ್ಟಿನ ಖ್ಯಾತ ಭಾಗವತ ಸತೀಶ್‌ ಶೆಟ್ಟಿ ಪಟ್ಲರವರು ಕಟೀಲ್‌ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಅವರ ಭಾಗವತಿಕೆಗೂ ಮದ್ದಳೆ ನುಡಿಸಿದ ಹೆಗ್ಗಳಿಕೆ ಇವರದು.

ಚಿದಾನಂದರವರು ಹಿರಿಯ ಯಕ್ಷಗಾನ ಗುರು ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜರವರ ಮಾರ್ಗದರ್ಶನದಲ್ಲಿ ಮದ್ದಳೆ ಕಲಿತು ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. ಬಳಿಕ ಮೇಳದಲ್ಲಿ ಭಾಗವತರಾಗಿ, ನಾಟ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಆದರೇ ಮದ್ದಳೆ ಕಲಾವಿದರಾಗಿ ಪ್ರಸಿದ್ದಿಯನ್ನು ಪಡೆದಿದ್ದರು.