Tuesday, January 21, 2025
ಸುದ್ದಿ

ನಿಯಂತ್ರಣ ತಪ್ಪಿ ರೈಲು ಹಳಿಯ ಮೇಲೆ ಬಿದ್ದ ಲಾರಿ – ಕಹಳೆ ನ್ಯೂಸ್

ನಿಯಂತ್ರಣ ಕಳೆದುಕೊಂಡು ಲಾರಿಯೊಂದು ರೈಲು ಹಳಿಯ ಮೇಲೆ ಬಿದ್ದ ಘಟನೆ‌ ಬೈಕಂಪಾಡಿ ಸಮೀಪದ ಅಂಗರಗುಂಡಿ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಿಂದ ಲಾರಿಯ ಚಾಲಕನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗೆ ಬಂದಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರೈಲು ಹಳಿಯ ಮೇಲೆ ಬಿದ್ದಿದೆ.

ಘಟನೆಗೆ ಸಂಬಂಧಿಸಿ ಅಸಮಾಧಾನ ವ್ಯಕ್ತಪಡಿಸಿರುವ ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಣ ಬಿ.ಕೆ. ಇಂಮ್ತಿಯಾಝ್, ಐದು ವರ್ಷದ ಹಿಂದೆ ರೈಲ್ವೇ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆ ಕುರಿತು ಡಿವೈಎಫ್ಐ ಅದೇ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಅನಾಹುತಕ್ಕೆ ರೈಲ್ವೆ ಮತ್ತು ಕೆಐಎಡಿಬಿಯ ನಿರ್ಲಕ್ಷ್ಯವೇ ಕಾರಣ. ಇದು ರೈಲ್ವೆ ಭೂಮಿ ಅತಿಕ್ರಮಣದ ಪ್ರತಿಫಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.