Tuesday, January 21, 2025
ಸುದ್ದಿ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ಕ್ಷೇತ್ರಿಯ ಮಟ್ಟದ ಜ್ಞಾನ-ವಿಜ್ಞಾನ ಮೇಳಕ್ಕೆ ಆಯ್ಕೆ – ಕಹಳೆ ನ್ಯೂಸ್

ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಜ್ಞಾನ-ವಿಜ್ಞಾನ ಮೇಳವು ಹುಣಸೂರಿನ ಶಾಸ್ತ್ರಿ ಪಬ್ಲಿಕ್ ಸ್ಕೂಲ್ ನಲ್ಲಿ ಸೆ.30 ಹಾಗೂ ಸ.1 ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗಣಿತ ಮಾದರಿ ತಯಾರಿಯಲ್ಲಿ 7ನೇ ತರಗತಿ ಯಶಮನ್ ( ಶ್ರೀನಿತ್ಯಾನಂದ. ಕೆ ಮತ್ತು ಶ್ರೀಮತಿ ಸಂಧ್ಯಾ. ಕೆ ಇವರ ಪುತ್ರ ) ಪ್ರಥಮ ಸ್ಥಾನ ಹಾಗೂ 7ನೇತರಗತಿಯ ಪ್ರೀತಿ.ಪಿ.ಪ್ರಭು (ಶ್ರೀ ಪುಂಡಲೀಕ ಪ್ರಭು ಮತ್ತು ನಾಗಾಮಣಿ ಪ್ರಭು ಇವರ ಪುತ್ರಿ) ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಹೈದರಾಬಾದಿನಲ್ಲಿ ನಡೆಯುವ ಕ್ಷೇತ್ರಿಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಬಾಲ ವರ್ಗದ ವೇದ ಗಣಿತ ರಸಪ್ರಶ್ನೆಯಲ್ಲಿ 7ನೇ ತರಗತಿಯ ನಿರೀಕ್ಷಿತ್ ಹೆಗ್ಡೆ (ಶ್ರೀ ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ಇವರ ಪುತ್ರ), 8ನೇತರಗತಿಯ ಶ್ರೇಯ ಸ್ವರಂಬಳ್ಳಿತ್ತಾಯ (ಶ್ರೀಎಂ.ಶ್ರೀನಿವಾಸ ವರಂಬಳ್ಳಿತ್ತಾಯ ಮತ್ತು ಸಂಧ್ಯಾ ವರಂಬಳ್ಳಿತ್ತಾಯ ಇವರಪುತ್ರ) ಮತ್ತು 6ನೇತರಗತಿಯ ಶುಶಾಂತ್.ಎ (ಶ್ರೀದಾಮೋದರ ಮತ್ತು ಸುನೀತಾ ಇವರ ಪುತ್ರ) ಅವರ ತಂಡ ಪ್ರಾಂತ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ.

ಕಿಶೋರ ವರ್ಗದ ಇನ್ನೋವೇಟಿವ್ ಮಾಡೆಲ್ಸ್ ಸ್ಪರ್ಧೆಯಲ್ಲಿ 10ನೇತರಗತಿಯ ಪೃಥ್ವಿರಾಜ್ ಪ್ರಭು (ಶ್ರೀಪುಂಡಲೀಕ ಪ್ರಭು ಮತ್ತು ನಾಗಾಮಣಿ ಪ್ರಭು ಇವರ ಪುತ್ರ ) ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಅದರಂತೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇತರಗತಿಯ ಧನುಷ್ ರಾಮ್ (ಶ್ರೀದಿನೇಶ್ ಪ್ರಸನ್ನ ಮತ್ತು ಶ್ರೀಮತಿ ಉಮಾ. ಡಿ ಪ್ರಸನ್ನ ಇವರ ಪುತ್ರ), 10ನೇತರಗತಿಯ ಅಭಿರಾಮ್ (ಶ್ರೀನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ ಕಾವೇರಿ ಇವರ ಪುತ್ರ) ಹಾಗೂ 9ನೇತರಗತಿಯ ಅಜಯರಾಮ್ (ಶ್ರೀಕೇಶವಮೂರ್ತಿ ಮತ್ತು ಗೀತಾಲಕ್ಷ್ಮೀ ಇವರ ಪುತ್ರ ) ತಂಡ, ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ 10ನೇತರಗತಿಯ ಅರ್ಚನಾಕಿಣಿ (ಶ್ರೀಹರೀಶ್ ಕಿಣಿ ಮತ್ತು ವಿನಯಕಿಣಿ ಇವರ ಪುತ್ರಿ), ಅಟಲ್ ಟಲಿಂಕರಿAಗ್ ಮಾದರಿ ತಯಾರಿಯಲ್ಲಿ 10ನೇತರಗತಿಯ ಯುಕ್ತಶ್ರೀ (ಶ್ರೀ.ಪಿ.ಹೇಮಚಂದ್ರ ಮತ್ತು ಹೈಮಿತಾ ಇವರ ಪುತ್ರಿ) ಹಾಗೂ ನೇಹ.ಜಿ.ಹೆಗ್ಡೆ (ಶ್ರೀಗಣೇಶ್.ಎಂ. ಹೆಗ್ಡೆ ಮತ್ತು ಪ್ರತಿಭಾ. ಜಿ. ಹೆಗ್ಡೆ ಇವರ ಪುತ್ರಿ) ತಂಡ, 8ನೇತರಗತಿಯ ಚಿನ್ಮಯಿ.ಎಲ್ (ಶ್ರೀ .ಎಲ್. ಕೃಷ್ಣಪ್ರಸಾದ್ ಮತ್ತು ಅಮೃತಾ. ಕೆ.ಪ್ರಸಾದ್ ಇವರ ಪುತ್ರಿ) ಹಾಗೂ ದಿಹರ್ಷ (ಶ್ರೀಎಸ್.ಶಿವಕುಮಾರ್ ಮತ್ತು ಎಸ್. ಪೊನ್ನಿ ಇವರ ಪುತ್ರಿ ) ಪ್ರಾಂತೀಯ ಮಟ್ಟದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಸತೀಶ್ ಕುಮಾರ್ ರೈ ಅವರು ತಿಳಿಸಿದ್ದಾರೆ.