ಹಸಿರು ಬಟ್ಟೆಯ ನಡುವೆ ಕಾಣದಂತಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತ : ಇದು ವೀರ ಸೈನಿಕನಿಗೆ ಮಾಡಿದ ಅವಮಾನ : ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ..!!! -ಕಹಳೆ ನ್ಯೂಸ್
ಪುತ್ತೂರು: ಈಶ್ವರಮಂಗಲದ ಹೃದಯ ಭಾಗದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ ದೇಶಕ್ಕಾಗಿ ಮಡಿದ ಸೈನಿಕನ ಹೆಸರೇ ಕಾಣದಂತೆ ಹಸಿರು ಬಟ್ಟೆ ಮುಚ್ಚಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಧಾರ್ಮಿಕ ಆಚರಣೆಗಳು ಎಲ್ಲಾ ಧರ್ಮಗಳಲ್ಲೂ ನಡೆಯುವಾಗ ಪೇಟೆ ಶೃಂಗಾರ ಮಾಡುವುದು ಸಾಮಾನ್ಯ ಆದರೇ ಯಾರೊಬ್ಬರ ಭಾವನೆಗಳಿಗೂ ಧಕ್ಕೆ ತರದ ರೀತಿಯಲ್ಲಿ ಮಾಡುವುದು ಉತ್ತಮ, ಆದ್ರೇ ಈಶ್ವರಮಂಗಲದ ವೃತ್ತದಲ್ಲಿ ದೇಶಕ್ಕಾಗಿ ಮಡಿದ ಸೈನಿಕನ ಹೆಸರು ಮುಚ್ಚಿದ್ದು ಮಾತ್ರ ಖಂಡನೀಯ, ಸಂಬಂಧಪಟ್ಟ ಅಧಿಕಾರಿಗಳು ಆ ಹಸಿರು ಬಟ್ಟೆ ತೆರವುಗೊಳಿಸಿ ಸೈನಿಕನ ಹೆಸರು ಕಾಣುವಂತೆ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ..
ದೇಶಕ್ಕಾಗಿ ಮಡಿದ ಸೈನಿಕನ ಹೆಸರೇ ಕಾಣದಂತೆ ಹಸಿರು ಬಟ್ಟೆ ಮುಚ್ಚಿರುವುದು ಸೈನ್ಯಕ್ಕೆ ಮತ್ತು ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಮಾಡಿರುವ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.