ಉಜಿರೆ: ‘ಈಶ ಕಲಾ ಪ್ರತಿಷ್ಟಾನ’ ನೃತ್ಯ ಸಂಸ್ಥೆಯ ಮೊದಲ ಶಾಖೆಯು ಉಜಿರೆಯ ಪ್ರೇರಣಾ ಸಭಾಂಗಣದಲ್ಲಿ ವಿಜಯದಶಮಿಯ ಶುಭ ಸಂದರ್ಭದಲ್ಲಿ ಶುಭಾರಂಭಗೊAಡಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿಯವರು ಶುಭ ಹಾರೈಕೆಯ ನುಡಿಗಳನ್ನಾಡಿದರು.
ಬಳಿಕ ಮಾತನಾಡಿದ ಉಜಿರೆ ಪಂಚಾಯತ್ ನ ಉಪಾಧ್ಯಕ್ಷರು ಆಗಿರುವ ಶ್ರೀಯುತ ರವಿಕುಮಾರ್ ಅವರು ಉಪಸ್ಥಿತರಿದ್ದು, ಸಂಸ್ಕಾರ ಬೆಳೆಸುವ ಇಂತಹ ಕಲೆಗಳು ಪ್ರಸ್ತುತ ಅನಿವಾರ್ಯವೆಂದು ನುಡಿದು ಸಂಸ್ಥೆಯು ಬೆಳವಣಿಗೆ ಕಾಣಲೆಂದು ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಕವಿತಾ ಉಮೇಶ್ ಉಪಸ್ಥಿತರಿದ್ದರು
ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಕೃತಿ ಮಾಯಾ ಕಾರ್ಯಕ್ರಮವನ್ನು ನಿರೂಪಿಸಿದರು. ‘ನಟರಾಜ ಪೂಜೆ ಯೊಂದಿಗೆ ನೃತ್ಯ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ‘ಗೆಜ್ಜೆಪೂಜೆ ‘ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಬಳಗ ಹಾಗೂ ಹೆತ್ತವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬಳಿಕ ಮಾತನಾಡಿದ ಉಜಿರೆ ಪಂಚಾಯತ್ ನ ಉಪಾಧ್ಯಕ್ಷರು ಆಗಿರುವ ಶ್ರೀಯುತ ರವಿಕುಮಾರ್ ಅವರು ಉಪಸ್ಥಿತರಿದ್ದು, ಸಂಸ್ಕಾರ ಬೆಳೆಸುವ ಇಂತಹ ಕಲೆಗಳು ಪ್ರಸ್ತುತ ಅನಿವಾರ್ಯವೆಂದು ನುಡಿದು ಸಂಸ್ಥೆಯು ಬೆಳವಣಿಗೆ ಕಾಣಲೆಂದು ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಕವಿತಾ ಉಮೇಶ್ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಉಮೇಶ್ ಜಿ. ಎಂ. ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಸ್ಥೆಯ ವಿದ್ಯಾರ್ಥಿನಿಯರಾದ ಪ್ರಾರ್ಥನ ಹಾಗೂ ಕೃಪಾ ಪ್ರಾರ್ಥಿಸಿದರು.