Thursday, January 23, 2025
ಸುದ್ದಿ

“ಕಾಂತಾರ ಸಿನಿಮಾ ನೋಡಿ ಮೂಕವಿಸ್ಮಿತನಾದೆ” ; ಕಿಚ್ಚ ಸುದೀಪ್‌ – ಕಹಳೆ ನ್ಯೂಸ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ತೆರೆಗೆ ಬಂದು 10 ದಿನ ಕಳೆದರೂ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ವೀಕೆಂಡ್​ನಲ್ಲಿ ಬಹುತೇಕ ಶೋಗಳು ಸೋಲ್ಡ್​​ಔಟ್ ಆಗಿವೆ. ಕಾಂತಾರ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಮತ್ತೊಂದು ಗೆಲುವು ಕಂಡು ಬಂದಿದ್ದು, ಇದೀಗ ಕಿಚ್ಚ ಸುದೀಪ್‌ ಅವರು ಕಾಂತಾರ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂತಾರ ಸಿನಿಮಾ ನೋಡಿರುವ ಕಿಚ್ಚ ಸುದೀಪ್ ಅವರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಈ ಸಿನಿಮಾ ಹೇಗಿತ್ತು ಎಂಬ ವಿಚಾರವನ್ನು ತಮ್ಮದೇ ಶಬ್ದಗಳಲ್ಲಿ ವಿವರಿಸಿದ್ದಾರೆ.

ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ. ಇನ್ನೂ ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ. ನಮ್ಮನ್ನು ಆ ಚಿತ್ರಗಳು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ. ರಿಷಬ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸಿಗೆ ಹತ್ತಿರವಾಗುತ್ತಾರೆ. ಚಿತ್ರ ನೋಡಿ ನನಗನಿಸಿದ್ದೆಂದರೆ, ಇಂಥದ್ದೊಂದು ಚಿತ್ರ ಮಾಡಲು ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅಂಥನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ ಎಂದು ರಿಷಬ್ ಶೆಟ್ಟಿ ಕೆಲಸವನ್ನು ಹೊಗಳಿದ್ದಾರೆ.

ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಬ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ ನಮನ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಸಂಗೀತ ನಿರ್ದೇಶಕ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೂ ನನ್ನ ಕೃತಜ್ಞತೆಗಳು. ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗೆ ತಕ್ಕ ಹಾಗೆ ಚಿತ್ರ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ ಅಲ್ಲ, ನಮ್ಮ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ.