Sunday, January 19, 2025
ಸುದ್ದಿ

ದ.ಕ. ಮತ್ತು ಉಡುಪಿ ಶಾಸಕರ ಸಭೆ ; ರಸ್ತೆಗಳ ದುರಸ್ತಿಗೆ 23ರ ಗಡುವು , ಸಿರಿಪಡಿಸಿದ ನಂತರವೂ ಸಮಸ್ಯೆ ಬಂದರೆ ಅಧಿಕಾರಿಗಳಿ ವಾಟ್ಸಾಪ್ ಮಾಡಿ – ಕಹಳೆ ನ್ಯೂಸ್

ದ.ಕ. / ಉಡುಪಿ : ಮಳೆ ಹಾನಿಯಿಂದ ತೀವ್ರ ಸ್ವರೂಪದಲ್ಲಿ ಹಾನಿಗೊಂಡ ದ.ಕ.ಜಿಲ್ಲೆಯ 112 ಹಾಗೂ ಉಡುಪಿಯ 119 ರಸ್ತೆಗಳ ಹೊಂಡ ಮುಚ್ಚಿ, ಜು.23ರಿಂದ ಸಮರೋಪಾದಿಯಲ್ಲಿ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಗರದ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ದ.ಕ.ಹಾಗೂ ಉಡುಪಿ ಜಿಲ್ಲೆಗಳ ಶಾಸಕರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಸದ್ಯ ಹೊಂಡ ಮುಚ್ಚುವ ಹಾಗೂ ಚರಂಡಿ ದುರಸ್ತಿಗೊಳಿಸುವ ಕಾರ್ಯ ತುರ್ತಾಗಿ ನಡೆಸಲಾಗುವುದು. ದುರಸ್ತಿ ಕಾಮಗಾರಿ ಬಳಿಕವೂ ರಸ್ತೆಯಲ್ಲಿ ಹೊಂಡಗುಂಡಿಗಳು ಕಂಡುಬಂದರೆ, ಅಧಿಕಾರಿಗಳ ಮೊಬೈಲ್‌ಗೆ ಫೋಟೊ ಸಮೇತ ವಾಟ್ಸಾಪ್ ಮಾಡಬಹುದು. ಅಧಿಕಾರಿಗಳು ಸ್ಪಂದಿಸದಿದ್ದರೆ ಮೇಲಧಿಕಾರಿಗಳ ಅಥವಾ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದರು.
ಶಾಸಕರಾದ ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ರಾಜೇಶ್ ನಾಕ್, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿ ಕ್ಷೇತ್ರಕ್ಕೆ 50 ಕೋಟಿ ರೂ.:  ಮಳೆಗಾಲದ ಬಳಿಕ ರಸ್ತೆಗಳ ಡಾಂಬರ್ ಹಾಕಲು ಕ್ರಮ ಕೈಗೊಳ್ಳಲಾಗುವುದು. ಕಳೆದ ಸಾಲಿನಲ್ಲಿ ಬಾಕಿ ಇರುವ ಹಾಗೂ ಅನುಮೋದನೆಗೊಂಡು ಆರಂಭವಾಗದ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲು ಸೂಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ರಸ್ತೆ ಅಭಿವೃದ್ಧಿ ಕುರಿತು 50 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗುವುದು. ಆದ್ಯತೆ ಮೇರೆಗೆ ರಸ್ತೆಗಳನ್ನು ಆಯ್ಕೆ ಮಾಡುವಂತೆ ಶಾಸಕರಿಗೆ ತಿಳಿಸಲಾಗಿದೆ. ಏಕ ಕಾಲ ಅಭಿವೃದ್ಧಿ ಯೋಜನೆಯಡಿ ಕೆಲವು ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಯಾಗಿ, ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಶಾಸಕರ ಜತೆ ಚರ್ಚೆ ಸಚಿವ ಖಾದರ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಲ್ಲರಪಟ್ಣಕ್ಕೆ ಪರ್ಯಾಯ ಸೇತುವೆ: ಮುರಿದು ಬಿದ್ದ ಮುಲ್ಲರಪಟ್ಣ ಸೇತುವೆಗೆ ಪರ್ಯಾಯವಾಗಿ 18 ಕೋಟಿ ರೂ.ವೆಚ್ಚದ ಹೊಸ ಸೇತುವೆ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಹಳೆ ಸೇತುವೆ ದುರಸ್ತಿ ಮಾಡುವುದಿದ್ದರೆ 7.5 ಕೋಟಿ ರೂ. ವೆಚ್ಚವಾಗಲಿದೆ. ಭೂಸೇನೆ ವತಿಯಿಂದ ತಾತ್ಕಾಲಿಕವಾಗಿ ಹಳೆ ಸೇತುವೆ ದುರಸ್ತಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಖಾದರ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್:  ಜಿಲ್ಲೆಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಲಾಗುವುದು. ಎಲ್ಲ ಶಾಸಕರು ಒಗ್ಗಟ್ಟಾಗಿ ಅಭಿವೃದ್ಧಿ ಯೋಜನೆಗಳ ರೂಪುರೇಷೆ ತಯಾರಿಸಲಾಗುವುದು. ಜಿಲ್ಲೆಗೆ ಕೇಂದ್ರದ ಯೋಜನೆಗಳನ್ನು ತರುವ ಬಗ್ಗೆ ಸಂಸದರ ಜತೆ ಕೇಂದ್ರಕ್ಕೆ ನಿಯೋಗ ಕರೆದೊಯ್ಯಲಾಗುವುದು.

ಆ.15ರಿಂದ ಆನ್‌ಲೈನ್ ಸೇವೆ: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ನಗರ ಯೋಜನಾ ಪ್ರಾಧಿಕಾರದಲ್ಲಿ ಎಲ್ಲ ನಾಗರಿಕ ಸೇವೆಗಳನ್ನು ಆನ್‌ಲೈನ್‌ಗೆ ಆಳವಡಿಸುವ ಪ್ರಕ್ರಿಯೆ ಆ.15ರಿಂದ ಆರಂಭವಾಗಲಿದೆ. ಬಳಿಕ ಎಲ್ಲ ರೀತಿಯ ನಾಗರಿಕ ಸೇವೆಗಳನ್ನು ಆನ್‌ಲೈನ್ ಮೂಲಕ ಮಾಡಿಸಿಕೊಳ್ಳಬಹುದು.

ಮನೆ ನಿರ್ಮಾಣಕ್ಕೆ ಪ್ರತ್ಯೇಕ ನಿಯಮ:  ಮಂಗಳೂರು ನಗರದ ಭೌಗೋಳಿಕ ಸ್ಥಿತಿಯನ್ನು ಗಮನದಲ್ಲಿರಿಸಿ ಇಲ್ಲಿಗೆ ಪ್ರತ್ಯೇಕ ಮನೆ ನಿರ್ಮಾಣ ನಿಯಮ ಜಾರಿಗೆ ತರಲು
ಚಿಂತನೆ ನಡೆಸಲಾಗುತ್ತಿದೆ. 9/11, ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೇರಿದಂತೆ ವಿವಿಧ ಸೇವೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ನಗರದ ಬೆಳವಣಿಗೆಯ ಜತೆಗೆ ನಾಗರಿಕರಿಗೆ ಸುಲಭದಲ್ಲಿ ಸೇವೆ ಲಭಿಸುವಂತಾಗಲು ಇವುಗಳನ್ನು ಸರಳೀಕೃತಗೊಳಿಸಲಾಗುತ್ತಿದೆ ಎಂದು ಖಾದರ್ ಹೇಳಿದರು.

ದುರಸ್ತಿ ಬಳಿಕವೂ ರಸ್ತೆ ಹೊಂಡ ಇದ್ದರೆ ವಾಟ್ಸಾಪ್ ಮಾಡಿ
ದ.ಕ.ಜಿಲ್ಲೆ :
ಮಂಗಳೂರು ವೃತ್ತ, ಮಂಗಳೂರು :
ಬಿ.ಟಿ.ಕಾಂತರಾಜ್ (ಎಸ್‌ಇ) -94483 19640
ಡಿ.ಸೂರ್ಯನಾರಾಯಣ (ತಾಂತ್ರಿಕ ಸಹಾಯಕರು ) -94483 52324
ಮಂಗಳೂರು ವಿಭಾಗ ಮಂಗಳೂರು :
ಯಶವಂತ ಕುಮಾರ್.ಎಸ್.(ಇಇ)-94836 14354
ಮಹಮ್ಮದ್ ಹನೀಫ್ (ತಾಂತ್ರಿಕ ಸಹಾಯಕರು)-94481 63789
ನಂ.1 ಉಪವಿಭಾಗ, ಮಂಗಳೂರು : ಕೆ.ವಿ.ರವಿಕುಮಾರ್ (ಎಇಇ)-98862-79916
ಪುತ್ತೂರು ಉಪವಿಭಾಗ : ಪ್ರಮೋದ್ (ಎಇಇ)-98867 98162
ಬಂಟ್ವಾಳ ಉಪ ವಿಭಾಗ : ಉಮೇಶ್ ಭಟ್ ವೈ (ಎಇಇ)-94488 44028
ಬೆಳ್ತಂಗಡಿ ಉಪ ವಿಭಾಗ : ಶಿವಪ್ರಸಾದ್ (ಎಇಇ)-94481 53223
ಸುಳ್ಯ ಉಪ ವಿಭಾಗ : ಸಣ್ಣೇ ಗೌಡ (ಎಇಇ)-94480 26644
ಸುಬ್ರಹ್ಮಣ್ಯ ಉಪ ವಿಭಾಗ : ಶ್ರೀಕಾಂತ್ ರಾವ್ ಟಿ.(ಎಇಇ)-97403 32429