Thursday, January 23, 2025
ಸುದ್ದಿ

ಕರೋಲಿ ಬೀಕರ ಕಾಯಿಲೆಗೆ ತುತ್ತಾದ ೩ವರ್ಷದ ಪುಟ್ಟ ಬಾಲಕ ಅರವ್ : ವಿಶ್ವಹಿಂದೂಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದಿಂದ ನೆರವು – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯ ಸಂತೋಷ್ ಮತ್ತು ಭವ್ಯ ಇವರ ಮಗನಾದ ಅರವ್ ಎನ್ನುವ ೩ವರ್ಷದ ಪುಟ್ಟ ಬಾಲಕ ಕರೋಲಿ ಎನ್ನುವ ಬೀಕರ ಕಾಯಿಲೆಗೆ ತುತ್ತಾಗಿದ್ದಾರೆ. ಪುಟ್ಟ ಮಗು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ೨೫ ಲಕ್ಷದವರೆಗೆ ಖರ್ಚು ಆಗಲಿದೆ ಎಮದು ವೈಧ್ಯರು ತಿಳಿಸಿದ್ದರೆ, ಬಡತನದಲ್ಲಿರುವ ಕುಟುಂಬಕ್ಕೆ ಈ ವಿಚಾರ ತಿಳಿದು ಆಕಾಶವೇ ತಲೆಯ ಮೇಲೆ ಬಿದ್ದಂತಾಗಿ ದಿಕ್ಕೇ ತೋಚದಂತಾಗಿದೆ.
ಮಗುವಿನ ಚಿಕಿತ್ಸೆಗಾಗಿ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ವಿಶ್ವಹಿಂದೂಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಕಾರ್ಯಕರ್ತ ಅವರಿಗೆ ಪರಿಚಯದ ದೀಪಕ್ ನಾಯ್ಕ್ ಪೂಪಾಡಿಕಟ್ಟೆ ಅವರಲ್ಲಿ ಕೇಳಿಕೊಂಡಾಗ ನಾವು ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡುತ್ತೇವೆಂದು ಭರವಸೆ ನೀಡಿದಂತೆ ಭಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಕಾರ್ಯಕರ್ತರೆಲ್ಲ ಒಟ್ಟು ಸೇರಿ ನೆರವಿನ ಹಸ್ತ ಚಾಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಾನವೇ ಧರ್ಮದ ಮೂಲ ಎಂಬ ದ್ಯೇಯ ವಾಕ್ಯದಂತೆ ಭವತಿ ಬಿಕ್ಷಾಂದೇಹಿ ಟೀಮ್ ರಚಿಸಿ ನವರಾತ್ರಿಯ ದಿನದಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಹಾಗೂ ಮಂಗಳಾದೇವಿ ಕ್ಷೇತ್ರದಲ್ಲಿ ಮತ್ತು ಮಹಾದೇವಿ ಮಹಾಮ್ಮಯಿ ದೆವಸ್ಥಾನ ಕೂಡಿಬೈಲು ಕ್ಷೇತ್ರದಲ್ಲಿ ಅರವ್‌ನ ಚಿಕಿತ್ಸೆಗಾಗಿ ಸಹಾಯ ಹಸ್ತಯಾಚಿಸಲಾಯಿತು. ದೇವರ ದಯೆಯೋ ಮಗುವಿನ ಪುಣ್ಯವೋ ಸುಮಾರು ೧ಲಕ್ಷ ೭೫೦೦೦ ಹಣವನ್ನು ಒಟ್ಟುಗೂಡಿಸಲಾಯಿತು.

ಆ ಹಣವನ್ನು ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ಸಮ್ಮುಖದಲ್ಲಿ ಅರವ್ ತಂದೆ ತಾಯಿಯ ಕೈಗೆ ಹಸ್ತಾಂತರ ಮಾಡಲಾಯಿತು. ಮೂಡಬಿದ್ರೆಯ ಸೋಮಾನಾತ್ ಕೋಟ್ಯಾನ್ ಭಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ ಶಿವಪ್ರಸಾದ್ ತುಂಬೆ ದೀಪಕ್ ಅಜೆಕಲ ಸಂತೋಷ್ ಸರಪಾಡಿ ಪ್ರಸಾದ್ ಬೆಂಜನಪದವು ಅಭಿನ್ ರೈ ಭಜರಂಗದಳ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ಘಟಕದ ಸದಸ್ಯರು ಹಾಗೂ ಬೆಳುವಾಯಿ ಭಜರಂಗದಳ ಸ್ಥಳೀಯ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು