Friday, November 22, 2024
ಸುದ್ದಿ

ಪ್ರಸಾದ್ ನೇತ್ರಾಲಯದ ಆಧುನಿಕ ಸೌಲಭ್ಯ ಜನತೆಗೆ ಅನುಕೂಲ : ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್  – ಕಹಳೆ ನ್ಯೂಸ್

ಉಡುಪಿ : ನೇತ್ರ ಚಿಕಿತ್ಸೆ ಸೌಲಭ್ಯಗಳಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಪ್ರಸಾದ್ ನೇತ್ರಾಲಯದ ಆಧುನಿಕ ಸೌಲಭ್ಯಗಳಿಂದ ಜನತೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಝೈಸ್ ಅಡ್ವಾನ್ಸ್ ಕ್ಯಾಟ್ರಾಕ್ಟ್ ಸರ್ಜರಿ ಡಿಜಿಟಲ್ ಸಿಸ್ಟಂ ನೂತನ ವಿಭಾಗ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಬದ್ಧತೆ ಶ್ಲಾಘನೀಯ ಕಳೆದ ಸುಮಾರು ಒಂದು ದಶಕದಲ್ಲಿ ಪ್ರಸಾದ್ ನೇತ್ರಾಲಯವನ್ನು ಎತ್ತರಕ್ಕೆ ಬೆಳೆಸುವುದರ ಜೊತೆಗೆ ಲಕ್ಷಾಂತರ ಮಂದಿ ಬಡವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿರುವ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದು ಗೋವಾ ಮುಖ್ಯಮಂತ್ರಿ ಸಾವಂತ್ ಪ್ರಶಂಸಿಸಿದರು.

ಕರ್ನಾಟಕದಲ್ಲಿ ಕೇವಲ ಮೂರು ಕಡೆಗಳಲ್ಲಿ ಮಾತ್ರ ಲಭ್ಯವಿರುವ ಅಡ್ವಾನ್ಸ್ ಕ್ಯಾಟ್ರಾಕ್ಟ್ ಸರ್ಜರಿ ಡಿಜಿಟಲ್ ಸಿಸ್ಟಮ್ ಸೌಲಭ್ಯ ಇದೀಗ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಲಭಿಸುತ್ತಿರುವುದು ಕರಾವಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕರ್ನಾಟಕದಲ್ಲಿ ಕೇವಲ ಮೂರು ಕಡೆಗಳಲ್ಲಿ ಮಾತ್ರ ಲಭ್ಯವಿರುವ ಅಡ್ವಾನ್ಸ್ ಕ್ಯಾಟ್ರಾಕ್ಟ್ ಸರ್ಜರಿ ಡಿಜಿಟಲ್ ಸಿಸ್ಟಮ್ ಸೌಲಭ್ಯ ಇದೀಗ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಲಭಿಸುತ್ತಿರುವುದು ಕರಾವಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಗೋವಾ ಸರ್ಕಾರದ ಅಭಿನಂದನೆ ಕರ್ನಾಟಕ ಮಾತ್ರವಲ್ಲ ನೆರೆಯ ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲೂ ಡಾ. ಕೃಷ್ಣಪ್ರಸಾದ್ ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ಗೋವಾದಲ್ಲಿ 30 ಸಾವಿರ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಗೋವಾ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಪ್ರಮೋದ್ ಸಾವಂತ್ ತಿಳಿಸಿದರು.

ನಿರಂತರ ಮುಂದುವರಿಯಲಿ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೇತ್ರ ತಪಾಸಣೆ ಶಿಬಿರದ ಪ್ರಯೋಜನ ತಲುಪಿಸಿರುವ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.

ರಾಷ್ಟ್ರೀಯ ಗೌರವ ಪ್ರಾಪ್ತವಾಗಲಿ ಉಡುಪಿ ಶಾಸಕ ರಘುಪತಿ ಭಟ್, ಕಣ್ಣಿನ ಶಸ್ತ್ರಚಿಕಿತ್ಸೆಗೆ ಜಾಗತಿಕ ಮಟ್ಟದ ತಂತ್ರಜ್ಞಾನ ಅಳವಡಿಸಿಕೊಂಡಿರುವ ಪ್ರಸಾದ್ ನೇತ್ರಾಲಯದ ಸೇವೆ ಕರಾವಳಿ ಮಂದಿಗೆ ದೊರೆಯಲಿ.

ಆಸ್ಪತ್ರೆಯಲ್ಲಿ ಆಯೋಜಿಸುತ್ತಿರುವ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಗುಣಮಟ್ಟದ ಚಿಕಿತ್ಸೆ ಹಾಗೂ ಪರಿಕರಗಳನ್ನು ವಿತರಿಸುವ ಮೂಲಕ ಶೇ. 100ರಷ್ಟು ಫಲಿತಾಂಶ ಪಡೆಯುವ ಮೂಲಕ ಸಂಸ್ಥೆ ಜನಪರ ಕಾಳಜಿ ಪ್ರದರ್ಶಿಸಿದೆ. ಅವರ ಸೇವೆಗೆ ರಾಷ್ಟ್ರೀಯ ಪುರಸ್ಕಾರ ಸಿಗುವಂತಾಗಲಿ ಎಂದು ಆಶಿಸಿದರು.

ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಸ್ವಾಗತಿಸಿದರು. ಸಂಸ್ಕೃತಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ತನ್ಮಯ್ ಗೋಸ್ವಾಮಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ನ್ಯಾಷನಲ್ ಅಕೌಂಟ್ ಮತ್ತು ಸ್ಟಾಟ್ಸ್ ಹಿರಿಯ ಸಲಹೆಗಾರ ರಾಮಚಂದ್ರ ಭಟ್, ಪ್ರಸಾದ್ ನೇತ್ರಾಲಯದ ನಿರ್ದೇಶಕರಾದ ರಘುರಾಮ ರಾವ್ ಮತ್ತು ರಶ್ಮಿ ಕೃಷ್ಣಪ್ರಸಾದ್ ಇದ್ದರು.