Sunday, January 19, 2025
ಸಿನಿಮಾ

ಇಂದು ಬಿಡುಗಡೆಯಾಗಲಿದೆ ಸನ್ನಿ ಜೀವನ ಚರಿತ್ರೆ – ಕಹಳೆ ನ್ಯೂಸ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕಾಯ್ತಿದ್ದ  ಜೀವನ ಚರಿತ್ರೆ Karenjit Kaur: The Untold Story Of Sunny Leone ಇಂದು ವೆಬ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಪ್ರೀಮಿಯರ್ ಶೋ ಜುಲೈ 16ರಂದು ಅಂದ್ರೆ ಇಂದು ಪ್ರದರ್ಶನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುಟ್ಯೂಬ್ ನಲ್ಲಿ ಸನ್ನಿ ಲಿಯೋನ್ ಚಿತ್ರದ ಟ್ರೈಲರ್ ಈಗಾಗಲೇ ಧಮಾಲ್ ಮಾಡಿದೆ. ಟ್ರೈಲರ್ ನ್ನು 1 ಕೋಟಿ 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸನ್ನಿ ಲಿಯೋನ್ ಜೀವನ ಚರಿತ್ರೆ Karenjit Kaur: The Untold Story Of Sunny Leone ಟ್ರೈಲರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ತನ್ನ ಪಾತ್ರಕ್ಕೆ ತಾನೇ ಜೀವ ತುಂಬಿದ್ದಾಳೆ ಸನ್ನಿ.

ಜಾಹೀರಾತು
ಜಾಹೀರಾತು
ಜಾಹೀರಾತು

ZEE 5 ಆ್ಯಪ್ ನಲ್ಲಿ ಸನ್ನಿಯ Karenjit Kaur: The Untold Story Of Sunny Leone ಶುರುವಾಗಲಿದೆ.

ಆದಿತ್ಯ ದತ್ ಇದನ್ನು ನಿರ್ದೇಶನ ಮಾಡಿದ್ದಾರೆ. ವೆಬ್ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದ್ದಂತೆ ವಿವಾದವೊಂದು ಹುಟ್ಟಿಕೊಂಡಿತ್ತು. ಸನ್ನಿ ಲಿಯೋನ್ ಚಿತ್ರಕ್ಕೆ Karenjit Kaur ಎಂಬ ಹೆಸರಿಟ್ಟಿರುವ ಬಗ್ಗೆ ವಿವಾದವೆದ್ದಿತ್ತು. ಸನ್ನಿ ಧರ್ಮ ಬದಲಾವಣೆ ಮಾಡಿದ್ದು ಈಗ Karenjit Kaur ಎಂದು ಹೆಸರಿಡುವುದು ತಪ್ಪು ಎನ್ನಲಾಗ್ತಿದೆ. ಆದ್ರೆ ಇದಕ್ಕೆ ಸನ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.