Monday, January 27, 2025
ಸುದ್ದಿ

ಮಂಗಳೂರು : ಅಪಾರ್ಟ್‌ ಮೆಂಟ್‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ದಂಪತಿ -ಕಹಳೆ ನ್ಯೂಸ್

ಮಂಗಳೂರು : ನವ ವಿವಾಹಿತ ದಂಪತಿಗಳ ಮೃತ ದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮಂಗಳೂರು ನಗರದ ಆಡು ಮರೋಳಿಯ ಅಪಾರ್ಟ್ಮೆಂಟ್ ನಲ್ಲಿ ಅ 10 ರಂದು ಪತ್ತೆಯಾಗಿದೆ. ಬೆಳಗಾವಿ ಮೂಲದ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದ ಮಲ್ಲಿಕಾರ್ಜುನ (34), ಪತ್ನಿ ಸೌಮ್ಯ(35) ಮೃತಪಟ್ಟವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೈಕಿ ಮಲ್ಲಿಕಾರ್ಜುನ್‌ ಫ್ರಿ ಲಾನ್ಸ್‌ ವೆಬ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದ. ಯುವತಿ ನಗರದ ಖಾಸಗಿ ಐಟಿಐ ಕಾಲೇಜಿನಲ್ಲಿ ಲೆಕ್ಚರ್‌ ಆಗಿದ್ದರು. ಒಂದು ವರ್ಷದ ಹಿಂದೆಯಷ್ಟೆ ಅವರು ಮಂಗಳೂರಿಗೆ ಬಂದು ನೆಲೆಸಿದ್ದರು ಎಂದು ತಿಳಿದು ಬಂದಿದೆ. ದಂಪತಿಯ ಮೃತದೇಹ ತಾವು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನ ಕೋಣೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವರು ಒಂದೂವರೆ ವರ್ಷದ ಹಿಂದೆ ವಿವಾಹ ಆಗಿದ್ದರು ಎನ್ನಲಾಗಿದೆ.

ಇಬ್ಬರು ಎರಡು ದಿನಗಳ ಹಿಂದೆ ಕೊಡಗಿಗೆ ಪ್ರವಾಸ ಹೋಗಿದ್ದರು, ನಿನ್ನೆ ರಾತ್ರಿ ವಾಪಸ್ಸು ಮನೆಗೆ ಬಂದಿದ್ದಾರೆ. ಮೊದಲು ಯುವಕ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಯುವತಿ ತನ್ನ ಸಂಬಂಧಿಕರಿಗೆ ವಿಷಯ ಫೋನ್‌ ಮಾಡಿ ತಿಳಿಸಿದ್ದಾರೆ. ಸಂಬಂಧಿಕರು ಬರುವುದರೊಳಗೆ ಆಕೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.