Friday, January 24, 2025
ಸುದ್ದಿ

ವಾಗ್ದೇವಿ ಸಂಗೀತ ಶಾಲೆಯ ಗುರುಗಳಾದ ಸವಿತಾ ಪುತ್ತೂರು ಅವರ ಸಾರಥ್ಯದ ನಾದ ಸುರಭಿ ತಿಂಗಳ ಸಂಗೀತ ಕಾರ್ಯಕ್ರಮ -ಕಹಳೆ ನ್ಯೂಸ್

ಪುತ್ತೂರು: ವಾಗ್ದೇವಿ ಸಂಗೀತ ಶಾಲೆಯ ಗುರುಗಳಾದ ಸವಿತಾ ಪುತ್ತೂರು ಅವರ ಸಾರಥ್ಯದ ನಾದ ಸುರಭಿ ತಿಂಗಳ ಸಂಗೀತ ಕಾರ್ಯಕ್ರಮವು ಸೆ.30ರಂದು ಸುನಾದ ಸಂಗೀತ ಕಲಾಶಾಲೆಯ ಗುರುಗಳಾದ ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಬಳಿಕ ತಿಂಗಳ ಕಾರ್ಯಕ್ರಮದ ಉದ್ದೇಶ ಪ್ರಯೋಜನ ಅವಕಾಶವನ್ನು ಕುರಿತು ಎಲ್ಲರಿಗೂ ಮನದಟ್ಟಾಗುವಂತೆ ಸುವಿಸ್ತಾರವಾಗಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತದ ನಂತರ ಮಾ. ಅದ್ವಿತ್, ಕು.ಅನಿಕ ಕುಂಜತಾಯ, ಕು.ಗಗನ,ಕು. ತನುಷ ಸೇರಿದಂತೆ ಎಲ್ಲಾ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ಸವಿತಾ ಪುತ್ತೂರು ಇವರಿಂದ ಕಾರ್ಯಕ್ರಮ ನಿರ್ವಹಣೆಗೊಂಡು ನಾದಸುರಭಿ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಆಚಾರ್ ಮತ್ತು ಉಪಾಧ್ಯಕ್ಷರಾದ ಶ್ರೀ ರಮೇಶ್ ರಾವ್ ಇವರು ಸ್ವಾಗತ ಹಾಗೂ ಧನ್ಯವಾದಗಳು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು, ಕುಂಬ್ರ, ಜಾಲ್ಸೂರು, ಕೌಡಿಚಾರ್ ಮಂಗಳೂರು ಶಾಖೆಯ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದರು.