ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜು : ‘ಉತ್ಥಾನ’ ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ ಉದ್ಘಾಟನೆ – ಕಹಳೆ ನ್ಯೂಸ್
ಬಂಟ್ವಾಳ : ಶ್ರೀರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ ಇಲ್ಲಿನ ವಿದ್ಯಾರ್ಥಿನಿಯರ ‘ಉತ್ಥಾನ’ ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರವು ಅ. 09ರಂದು ಉದ್ಘಾಟನೆಗೊಂಡಿತು.
ಧರ್ಮ-ಸAಸ್ಕಾರವನ್ನು ತೊರೆದರೆ ಭಾರತವೊಂದು ಬರಡು ಭೂಮಿಯಾಗುವುದು, ತನ್ನ ಸತ್ವವನ್ನು ಕಳೆದುಕೊಳ್ಳುವುದು. ದೇಶಕ್ಕೆ ಚೈತನ್ಯ ಮೂಡಲು ಸಂಸ್ಕಾರದ ಅಗತ್ಯವಿದೆ. ಸಂಸ್ಕಾರವನ್ನು ಕೊಡುವುದು ಶಿಕ್ಷಣ ಸಂಸ್ಥೆಗಳ ಮೂಲಕ ಮಾತ್ರ ಸಾಧ್ಯ, ಈ ಶಿಬಿರವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಶ್ರೀ ವಂಸತ ಮಾಧವ ಸಂಚಾಲಕರು, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸ್ತ್ರೀಶಕ್ತಿಯ ಪರಿಕಲ್ಪನೆಯನ್ನು ಗೋ-ಪದ್ಯದ ಹೋಲಿಕೆಯೊಂದಿಗೆ ಬಹಳ ಅಚ್ಚುಕಟ್ಟಾಗಿ ವಿವರಿಸುತ್ತಾ, ಆಕೆಯಲ್ಲಿ ಹುದುಗಿರುವ ಸಾಮರ್ಥ್ಯ ಯಾವುದೇ ಪುರುಷನಿಗೂ ಕಡಿಮೆಯಿಲ್ಲ, ಅಂತೆಯೇ ಸನಾತನ ಧರ್ಮದ ಉಳಿವು ಮಾತೃತ್ವದಿಂದ ಮಾತ್ರ ಸಾಧ್ಯ ಎಂದು ಡಾ.ಮೀನಾಕ್ಷಿ ರಾಮಚಂದ್ರ ನಿವೃತ್ತ ಮುಖ್ಯಸ್ಥರು, ಕನ್ನಡ ವಿಭಾಗ ಬೆಸೆಂಟ್ ವಿಮೆನ್ಸ್ ಕಾಲೇಜು ಮಂಗಳೂರು ಇವರು ಶಿಬಿರವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಇವರು ವಹಿಸಿದರು. ಶಿಬಿರಾಧಿಕಾರಿಯಾದ ಶ್ರೀಮತಿ ಪ್ರಮಿತಾ ಆಡಳಿತಮಂಡಳಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು, ಆಡಳಿತ ಮಂಡಳಿಯ ಸದಸ್ಯೆಯಾದ ಶ್ರೀಮತಿ ಲಕ್ಮ್ಷೀರಘುರಾಜ್, ಶ್ರೀಮತಿ ಕಮಲಾ ಪ್ರಭಾಕರ್ ಭಟ್, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಶ್ರೀರಾಮ ಪದವಿ ವಿದ್ಯಾಲಯದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕೆ ಎನ್ ಉಪಸ್ಥಿತರಿದ್ದರು. ಶಿಬಿರದ ಕಾರ್ಯವಾಹಿಕ ಶ್ರೀಮತಿ ಶೋಭಾ ವಿ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.