Saturday, November 23, 2024
ಸುದ್ದಿ

ಅನಧಿಕೃತ ಎಕ್ಸ್ ಪ್ರೆಸ್ ಬಸ್ ನಿಲ್ಲಿಸಿ , ಕಾಲೇಜು ಸಮಯದಲ್ಲಿ ಲೋಕಲ್ ಬಸ್ ಹೆಚ್ಚಿಸಿ ; ರಸ್ತೆತಡೆದು ಆಕ್ರೋಶ ಹೊರಹಾಕಿದ ರಾಮಕುಂಜದ ಎಬಿವಿಪಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ರಾಮಕುಂಜ: ಉಪ್ಪಿನಂಗಡಿ ರಾಮಕುಂಜ – ಕಡಬ- ಸುಬ್ರಹ್ಮಣ್ಯ ಮಾರ್ಗದಲ್ಲಿ ಸಂಚರಿಸುವ ಸಾಮಾನ್ಯ ಬಸ್ ಗಳನ್ನು ಎಕ್ಸ್ ಪ್ರೆಸ್ ಬಸ್ ಗಳಾಗಿ ಪರಿವರ್ತಿಸಿ ಕಾಲೇಜು ಸಮಯದಲ್ಲಿ ಲೋಕಲ್ ಬಸ್ ವ್ಯವಸ್ಥೆ ಕಲ್ಪಿಸದ ಕೆ .ಎಸ್ .ಆರ್. ಟಿ .ಸಿ ಅಧಿಕಾರಿಗಳ ವಿರುದ್ದ ರಾಮಕುಂಜ ಪದವಿ ಕಾಲೇಜು ವಿದಾರ್ಥಿಗಳು ಸೋಮವಾರ ಸಂಜೆ ರಾಮಕುಂಜದಲ್ಲಿ ರಸ್ತೆ ತಡೆನಡೆಸಿ ಎಚ್ಚರಿಕೆ ನೀಡಿದ್ದಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಯಂಕಾಲ 3:30ರ ಬಳಿಕ ಬಸ್ ವ್ಯವಸ್ಥೆ ಅಗತ್ಯವಾಗಿದ್ದು ಆ ಸಮಯದಲ್ಲಿ ಹೆಚ್ಚೆದಂದರೆ ಮೂರು ಬಸ್ ಗಳನ್ನು ಬಿಡುತ್ತಾರೆ. ಕಾಲೇಜು ಬಿಡುವ ಮುನ್ನ ಏಳಕ್ಕಿಂತ ಹೆಚ್ಚು ಬಸ್ ಓಡಿಸುತ್ತಿರುವ ಕೆ .ಎಸ್ .ಆರ್. ಟಿ .ಸಿ ಅಧಿಕಾರಿಗಳ ವಿದ್ಯಾರ್ಥಿಗಳ ಕಷ್ಟ ಅರಿತುಕೊಳ್ಳ ಬೇಕು ಎಂದು, ಎಬಿವಿಪಿ ಘಟಕದ ಅಧ್ಯಕ್ಷರಾದ ಪ್ರಶಾಂತ್ ಮತ್ತು ಕಾರ್ಯದರ್ಶಿ ಪ್ರಶ್ವಿತ್ ವಿವರಿಸಿದರು. ಅದಲ್ಲದೆ ಅಗತ್ಯ ಸಮಯದಲ್ಲಿ ಬಸ್ ಗಳನ್ನು ಬಿಡದೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳು ಮನೆಗೆ ತಲುಪುವುದು ತಡ ರಾತ್ರಿಯಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಸಮಯದಲ್ಲಿ ಖಾಸಗಿ ವಾಹನಗಳ ಮೂಲಕ ಅಧಿಕ ದರ ನೀಡಿ ಹೋಗಬೇಕಾಗಿದೆ ಎಂದು ವಿದ್ಯಾರ್ಥಿ ಮುಖಂಡರು ವಿವರಿಸಿದ್ದಾರೆ. ಸುಮಾರು 700 ವಿದ್ಯಾರ್ಥಿಗಳು ನಿತ್ಯ ಸಂಚರಿಸುವ ಈ ರಸ್ತೆಯಲ್ಲಿ , ವಿದ್ಯಾರ್ಥಿ ಗಳನ್ನು ಗಮನಿಸಿ ಎಕ್ಸಪ್ರೆಸ್ ಬಸ್ಗಳನ್ನು ನಿಲ್ಲಿಸುತ್ತಿಲ್ಲ, ಅಲ್ಲದೆ ಬಸ್ ಪಾಸ್ ನಿರಾಕರಿಸಲಾಗುತ್ತಿದೆ. ಬಸ್ ನಲ್ಲಿ ನಿತ್ಯ ನೂಕುನುಗ್ಗಲು ಆಗುತ್ತಿದ್ದು, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.