Sunday, January 26, 2025
ಸುದ್ದಿ

ಗೋವಾ ಜಲಪಾತದಲ್ಲಿ ಕಾಲಿಗೆ ಹಾವು ಕಚ್ಚಿ ಉಡುಪಿಯ ಯುವಕ ಸಾವು – ಕಹಳೆ ನ್ಯೂಸ್

ಉಡುಪಿ : ರಜೆಯ ಮಜಾ ಸವಿಯಲು ಗೋವಾಕ್ಕೆ ಬಂದಿದ್ದ ಉಡುಪಿಯ ಯುವಕ ಆದಿತ್ಯ ಶೆಟ್ಟಿ (28) ಪಾಡಿ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದಿತ್ಯ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದು, ಪಾಡಿ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಯುವಕನ ಶವವನ್ನು ಹೊರತೆಗೆದಾಗ ಆದಿತ್ಯ ಕಾಲಿಗೆ ಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ. ನೀರಿಗೆ ಇಳಿದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಯುವಕರು ಕಳೆದ ಎರಡು ದಿನಗಳ ಹಿಂದೆ ಗೋವಾಕ್ಕೆ ಬಂದು ಕಾಣಕೋಣದ ಹೋಟೆಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.