Saturday, January 25, 2025
ಸುದ್ದಿ

ಬೋಟಿನಿಂದ ಕಾಲು ಜಾರಿ ಕೆಸರಿಗೆ ಬಿದ್ದ ಮೀನುಗಾರನನ್ನು ರಕ್ಷಿಸಿದ ಈಶ್ವರ್ ಮಲ್ಪೆ -ಕಹಳೆ ನ್ಯೂಸ್

ಉಡುಪಿ : ಉಡುಪಿ ಮಲ್ಪೆಯ ಮೀನುಗಾರಿಕಾ ಬಂದರಿನ ಪಶ್ಚಿಮ ದಿಕ್ಕಿನ ಜೆಟ್ಟಿ ಸಮೀಪ ನಿಲ್ಲಿಸಲಾಗಿದ್ದ ಬೋಟಿನಿಂದ ಕಾಲು ಜಾರಿ ಕೆಸರು ನೀರಿಗೆ ಬಿದ್ದ ಮೀನುಗಾರ ಒಡಿಶಾದ ಮೂಲದ ಪ್ರಜ್ವಲ್‌ನನ್ನು ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ರಕ್ಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಆಳಸಮುದ್ರ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದು, ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ನಡೆದುಕೊಂಡು ಹೋಗುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.

ಇಲ್ಲಿನ ಮೀನುಗಾರಿಕಾ ದಕ್ಕೆಯಲ್ಲಿ ಕೆಸರು ತುಂಬಿಕೊಂಡಿದ್ದು, ಆತನ ಅರ್ಧ ದೇಹ ಕೆಸರಿನಲ್ಲಿ ಹೂತು ಹೋಗಿತ್ತು.

ಆತ ಬೋಟಿನಲ್ಲಿ ನೇತು ಹಾಕಿದ್ದ ಟಯರನ್ನು ಹಿಡಿದುಕೊಂಡು ರಕ್ಷಣೆಗಾಗಿ ಕೂಗುತ್ತಿದ್ದಾಗ ಸಮೀಪದಲ್ಲಿದ್ದ ಈಶ್ವರ್‌ ಮಲ್ಪೆ ಧಾವಿಸಿ ಬಂದು ಹಗ್ಗದ ನೆರವಿನಿಂದ ಆತನನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

ಈತ ಆಳಸಮುದ್ರ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದು, ಸೋಮವಾರ ಸಂಜೆ ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ನಡೆದುಕೊಂಡು ಹೋಗುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.