ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಶಶಿಕಲಾರಿಗಾಗಿ ಬಿಜೆಪಿಯಿಂದ ಮನೆ ನಿರ್ಮಾಣ : ಮನೆಯನ್ನು ಹಸ್ತಾಂತರಿಸಿದ ಶಾಸಕ ವೇದವ್ಯಾಸ್ ಕಾಮತ್ -ಕಹಳೆ ನ್ಯೂಸ್
ಮಂಗಳೂರು ಮಹಾನಗರ ಪಾಲಿಕೆಯ ಮಿಲಾಗ್ರೀಸ್ ವಾರ್ಡಿನ ಮಿತ್ತಮುಗೇರ್ ಲಲಿತಾ ಕಾಂಪೌಂಡಿನ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಶಶಿಕಲಾ ಎಂಬವರಿಗಾಗಿ ಶಾಸಕ ವೇದವ್ಯಾಸ್ ಕಾಮತ್ ಅವರ ಸಹಕಾರದೊಂದಿಗೆ ವಾರ್ಡಿನ ಬಿಜೆಪಿ ಕಾರ್ಯಕರ್ತರು ನಿರ್ಮಿಸಿದ ಮನೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಹಸ್ತಾಂತರಿಸಿದರು.
ಈ ಕುರಿತು ಮಾತನಾಡಿರುವ ಶಾಸಕ ವೇದವ್ಯಾಸ್ ಕಾಮತ್, ಮಿತ್ತಮುಗೇರು ಲಲಿತಾ ಕಾಂಪೌಡಿನ ಶಶಿಕಲಾ ಅವರು ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿರುವುದನ್ನು ಅರಿತು ಸ್ಥಳೀಯ ಬಿಜೆಪಿ ನಾಯಕರಾದ ಮೋಹನ್ ಪೂಜಾರಿ ಅವರ ನೇತೃತ್ವದಲ್ಲಿ ವಾರ್ಡಿನ ಕಾರ್ಯಕರ್ತರು ಪಂಡಿತ್ ದೀನದಯಾಳ್ ಉಪಾಧ್ಯಯರ ಅಂತ್ಯೋದಯ ಪರಿಕಲ್ಪನೆಯಂತೆ ಮನೆ ನಿರ್ಮಿಸಿಕೊಡುವ ಕುರಿತು ಚಿಂತನೆ ನಡೆಸಿದ್ದರು. ಸಮರ್ಪಕವಾದ ದಾಖಲೆಗಳಿಲ್ಲದ ಕಾರಣ ಸರಕಾರದಿಂದ ಮನೆ ನಿರ್ಮಾಣಕ್ಕೆ ಸಹಕಾರ ಸಿಗದೆ ಇರುವ ಕಾರಣ ಕಾರ್ಯಕರ್ತರೆ ಸುಮಾರು 4.5 ಲಕ್ಷ ರೂಪಾಯಿ ಸಂಗ್ರಹಿಸಿ ಮನೆ ನಿರ್ಮಾಣದ ಜವಬ್ದಾರಿ ಹೊತ್ತು ಯಶಸ್ವಿಯಾಗಿ ಇಂದು ಮನೆಯನ್ನು ಶಶಿಕಲಾ ಅವರಿಗೆ ಹಸ್ತಾಂತರಿಸಲಾಯಿತು.
ಈಗಾಗಲೇ ತೀರಾ ಆರ್ಥಿಕವಾಗಿ ಹಿಂದುಳಿದ ಕೆಲವೊಂದು ಕುಟುಂಬಗಳ ಮನೆ ನಿರ್ಮಾಣದ ಜವಾಬ್ದಾರಿಯನ್ನು ನಮ್ಮ ಕಾರ್ಯಕರ್ತರೇ ಹೊತ್ತು ಮನೆ ಕಟ್ಟಿಕೊಟ್ಟಿದ್ದಾರೆ. ಪ್ರದಗಾನಿಶ್ರೀ ನರೇಂದ್ರ ಮೋದಿಯವರು ಹೇಳಿದ ಸೇವಾ ಹೀ ಸಂಘಟನ್ ಎಂಬ ಘೋಷಣೆಗೆ ಅರ್ಥ ತುಂಬುವ ದೃಷ್ಟಿಯಿಂದ ನಮ್ಮ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಮಿಲಾಗ್ರೀಸ್ ವಾರ್ಡಿನ ಎಲ್ಲಾ ಕಾರ್ಯಕರ್ತರಿಗೂ ಶಾಸಕ ಕಾಮತ್ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಪಾಲಿಕೆ ಸದಸ್ಯರಾದ ಭರತ್ ಕುಮಾರ್ ಎಸ್, ರೇವತಿ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರೂಪಾ ಡಿ. ಬಂಗೇರಾ, ಸುರೇಂದ್ರ ಜೆ., ದೀಪಕ್ ಪೈ, ರಮೇಶ್ ಹೆಗ್ಡೆ, ಅಜಯ್ ಕುಲಶೇಖರ, ಮೋಹನ್ ಕೆ. ಪೂಜಾರಿ, ಮೀರಾ ಕರ್ಕೇರಾ, ಅಜಿತ್ ಡಿಸಿಲ್ವ, ಉಮನಾಥ್ ಬೋಳಾರ್, ನಿಲೇಶ್ ಕಾಮತ್, ರಘುವೀರ್ ಬಾಬುಗುಡ್ಡ, ಲಲೇಶ್ ಕುಮಾರ್, ಅಶ್ವಿತ್ ಕೊಟ್ಟಾರಿ, ಅನಿಲ್ ಕುಮಾರ್ ಹೊಯಿಗೆ ಬಜಾರ್, ಫೆಡ್ರಿಕ್ ಪೌಲ್, ರೂಪಾ ಕೆ.ಎಸ್, ಮಾಲತಿ ಶೆಟ್ಟಿ, ಮಂಜುನಾಥ್, ಶಬರೀಶ್ ಎಂ. ಎಸ್, ಘನಶ್ಯಾಮ ಆಚಾರ್ಯ, ಗುರು ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.