Friday, January 24, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

” ಧರ್ಮ ಮತಗಳನ್ನು ಒಡೆದವರು ಕಾಂಗ್ರೆಸ್ ; ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಮಾಡ್ತಿದ್ದಾರೆ ” ನಳೀನ್ ಕುಮಾರ್ ಕಟೀಲ್ ಕಿಡಿ – ಕಹಳೆ ನ್ಯೂಸ್

ಹಾವೇರಿ: ಕರ್ನಾಟಕದಲ್ಲಿ (Karnataka) ಸಿದ್ದರಾಮಯ್ಯ (Siddaramaiah) ಟಿಪ್ಪು ಜಯಂತಿ ಮಾಡಿ ಹಿಂದೂ ಮುಸ್ಲಿಮರನ್ನು ಒಡೆದರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದರು. ಧರ್ಮ ಮತಗಳನ್ನು ಒಡೆದವರು ಕಾಂಗ್ರೆಸ್ (Congress). ಈಗ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಭಾರತ್ ಜೋಡೋ (Bharat Jodo Yatra) ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾವೇರಿ (Haveri) ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಪೇಜ್ ಪ್ರಮುಖರು, ಮೇಲ್ಪಟ್ಟ ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು. ಜನರು ಕಾಂಗ್ರೆಸ್ ಕುಟುಂಬ ಹಠಾವೋ, ಗಾಂಧಿ ಕುಟುಂಬ ಹಠಾವೋ ಅಂತಿದ್ದಾರೆ. ಕಾಂಗ್ರೆಸ್‌ನವರು ಭಾರತ್ ಜೋಡೋ ನಾಟಕ ಪ್ರಾರಂಭ ಮಾಡಿದ್ದಾರೆ. ಅದು ಭಾರತ್ ಜೋಡೋ ಅಲ್ಲ, ಭಾರತ್ ತೋಡೋ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಇವತ್ತು ನಾಶ ಆಗ್ತಿದೆ. ಜೋಡೋಗಳ ಮಧ್ಯೆ ಜಗಳಗಳು ಜಾಸ್ತಿ ಆಗ್ತಿದೆ. ರಾಹುಲ್ ಗಾಂಧಿ ಯಾತ್ರೆ ಪ್ರಾರಂಭ ಆಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜಗಳವೂ ಜೋರಾಗಿದೆ. ಸಿದ್ದರಾಮಯ್ಯ ಮೀಟಿಂಗ್‌ಗೆ ಡಿಕೆಶಿ ಹೋಗೋದಿಲ್ಲ, ಡಿಕೆಶಿ ಮೀಟಿಂಗ್‌ಗೆ ಸಿದ್ದರಾಮಯ್ಯ ಹೋಗೋದಿಲ್ಲ. ಪಾದಯಾತ್ರೆಯಲ್ಲಿ ಡಿಕೆಶಿ ದಿಲ್ಲಿಗೆ, ಸಿದ್ದರಾಮಣ್ಣ ಗಲ್ಲಿಗೆ ಹೋಗುತ್ತಾರೆ. ರಾಹುಲ್ ಗಾಂಧಿ ಕೈ ಹಿಡ್ಕೊಂಡು ಓಡ್ತಾರೆ ಎಂದು ವ್ಯಂಗ್ಯವಾಡಿದರು. 

ಡಿಕೆಶಿಗೆ ಅಲ್ಲಿ ಟೆನ್ಷನ್ ಶುರುವಾಗಿದೆ. ಚುನಾವಣೆಗೆ ಮುಂಚೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದು. ಸಿದ್ದರಾಮಯ್ಯ ಪಾರ್ಟಿ, ಡಿಕೆಶಿ ಪಾರ್ಟಿ ಎರಡು ಹೋಳಾಗುತ್ತೆ. ಇನ್ನೊಂದು ಮೂರನೇ ಶಕ್ತಿ ಕೇಂದ್ರ ನಿರ್ಮಾಣವಾಗುತ್ತಿದೆ. ಅದ್ಯಾವುದು ಅಂದರೆ ಖರ್ಗೆ ಗ್ಯಾಂಗ್. ಖರ್ಗೆ ಅಧ್ಯಕ್ಷರಾದ್ಮೇಲೆ ಸಿದ್ದರಾಮಯ್ಯನಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಯಾಕಂದ್ರೆ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಅಡ್ಡಗಾಲಿಟ್ಟು, ಖರ್ಗೆಯನ್ನು ಸೋಲಿಸಿದ್ದವರೇ ಈ ಸಿದ್ದರಾಮಯ್ಯ. ಈ ಬಾರಿ ಸಿದ್ದರಾಮಯ್ಯನನ್ನು ಖರ್ಗೆ ಸೋಲಿಸುತ್ತಾರೆ. ಸಿದ್ದರಾಮಯ್ಯ ಕಾಡಿಗೆ, ಡಿಕೆಶಿ ಬಂಡೆ ಒಡೆಯಲಿಕ್ಕೆ, ಬಿಜೆಪಿ ಅಧಿಕಾರಕ್ಕೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದೇ ಇದ್ದು, ಖುರ್ಚಿಗಳು ಖಾಲಿ ಖಾಲಿಯಿದ್ದವು. ಆದರೂ ಅರ್ಧ ಗಂಟೆಗೂ ಅಧಿಕ ಸಮಯ ಜೋಷ್‌ನಲ್ಲಿಯೇ ನಳೀನ್ ಕುಮಾರ್ ಕಟೀಲ್ ಭಾಷಣ ಮಾಡಿದರು.