Friday, January 24, 2025
ಸುದ್ದಿ

ಶಾರದೋತ್ಸವ ಫ್ಲೆಕ್ಸ್‌ಗಳಿಗೆ ಹಾನಿ: ಮೂವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ವಾಮಂಜೂರು ಜಂಕ್ಷನ್‌ನ ಆಸುಪಾಸಿನಲ್ಲಿ ಶಾರದೋತ್ಸವ ಬಗ್ಗೆ ವಾಮಂಜೂರು ಫ್ರೆಂಡ್ಸ್‌ ಸಂಘಟನೆ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ಅ.8ರಂದು ರಾತ್ರಿ ಹರಿದು ಹಾಕಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಿತ್‌ ಹೆಗ್ಡೆ(25), ಯತೀಶ್‌ ಪೂಜಾರಿ (24) ಮತ್ತು ಪ್ರವೀಣ್‌ ಪೂಜಾರಿ(24) ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಲಿ ವೇಷ ತಂಡಗಳ ನಡುವಿನ ವೈಷಮ್ಯ ಎರಡು ಹುಲಿವೇಷ ತಂಡಗಳ ನಡುವಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ವಾಮಂಜೂರಿನಲ್ಲಿ ವಾಮಂಜೂರು ಫ್ರೆಂಡ್ಸ್‌ ಹುಲಿ ವೇಷ ತಂಡದವರು ದಸರಾ ಸಂದರ್ಭ ಮತ್ತು ವಾಮಂಜೂರು ಟೈಗರ್ಸ್‌ ತಂಡದವರು ಗಣೇಶೋತ್ಸವ ಸಂದರ್ಭ ಹುಲಿ ವೇಷ ಹಾಕುತ್ತಿದ್ದರು.

ಬಂಧಿತ ಆರೋಪಿಗಳು ವಾಮಂಜೂರು ಟೈಗರ್ಸ್‌ ತಂಡದ ಸದಸ್ಯರು. ಧಾರ್ಮಿಕ ಭಾವನೆಗೆ ಧಕ್ಕೆ ತಂದು ಶಾಂತಿ ಕದಡುವ ಹುನ್ನಾರವೂ ಆರೋಪಿಗಳದ್ದಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.