Friday, January 24, 2025
ಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಚಮತ್ಕಾರದ ಗಣಿತ-ವಿಶೇಷ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: “ಗಣಿತವು ಸಂಖ್ಯೆ ಹಾಗೂ ಅಪರಿಮಿತ ಅವಕಾಶಗಳ ವಿಜ್ಞಾನ. ಗಣಿತ ಬದುಕಿಗೊಂದು ನಿರಂತರತೆಯನ್ನು ನಮ್ಮ ಸುತ್ತಲಿನ ಸಾಮಾಜಿಕ ನಿಲುವುಗಳಲ್ಲಿ ಮಾನವ ಸಂಬಂಧಗಳಲ್ಲಿ ನಿಖರತೆಯನ್ನು ತಂದು ಕೊಡುತ್ತದೆ.ಪ್ರಕೃತಿಯನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಜೀವನದಕ್ಲಿಷ್ಟಕರ ಸಮಸ್ಯೆಗಳನ್ನು ಸುಲಭವಾಗಿ ಅರಿತುಕೊಂಡು ಸುಲಲಿತವಾಗಿ ಬಗೆಹರಿಸಲು ಅವುಗಳನ್ನು ಸಂಕೇತಗಳ ಸಹಾಯದಿಂದ ಪ್ರಮಾಣಿಕರಿಸಲು ನೆರವಾಗುತ್ತದೆ. ”ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಪ್ರಕಾಶ್‍ರವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಜ್ಞಾನ ಸಂಘದಿಂದ ಆಯೋಜಿಸಿದ “ಚಮತ್ಕಾರದ ಗಣಿತ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಣಿತದ ಉದ್ದೇಶ ಕೇವಲ ಜ್ಞಾನ ,ಸೂತ್ರಗಳು ಮತ್ತುಯಾಂತ್ರಿಕ ವಿಧಿ ವಿಧಾನಗಳನ್ನು ಕಲಿಸುವುದಲ್ಲ. ಅದರ ಬದಲು ತಾರ್ಕಿಕ ಚಿಂತನೆ, ಸೂತ್ರೀಕರಿಸುವುದು , ಗಣತೀಕರಣದ ಜ್ಞಾನ ಪಡೆಯುವುದು ,ಸಮಸ್ಯೆಗಳನ್ನು ವಿವೇಚಿಸುವ ಸಾಮಥ್ರ್ಯವನ್ನು ಬೆಳೆಸುವುದು ಅದರ ಮೂಲ ಉದ್ದೇಶ. ಎಂದು ಹೇಳಿದರು.

ಗಣಿತದ ತಂತ್ರಗಳು ಮತ್ತು ವಿದ್ಯಾರ್ಥಿಗಳ ಗಣಿತ ಕೌಶಲ್ಯವನ್ನು ಪರೀಕ್ಷಿಸುವ ಸಲುವಾಗಿ ವಿವಿಧರೀತಿಯ ಚಟುವಟಿಕೆಗಳನ್ನು ನಡೆಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಶುೃತಿಕಾ ಸ್ವಾಗತಿಸಿ, ವಂದಿಸಿದರು.