Friday, January 24, 2025
ಸುದ್ದಿ

ಉಡುಪಿ ಅಂಚೆ ವಿಭಾಗದಿಂದ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಫಿಲಾಟಲಿ ದಿನಾಚರಣೆ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕ ತೆಗೆದು ತೇರ್ಗಡೆಯಾಗುವುದು ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಆಸಕ್ತಿ ವಹಿಸಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾಗಬೇಕು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಅಭಿಪ್ರಾಯ ಪಟ್ಟರು.

ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅಂಚೆ ಚೀಟಿ ಸಂಗ್ರಹಣಾ ದಿನದಂದು ಶಿರ್ವ ವಿದ್ಯಾವರ್ಧಕ ಶಾಲೆಯಲ್ಲಿ ಅಂಚೆ ಚೀಟಿ ಪ್ರದರ್ಶನ ಹಾಗು ಫಿಲಾಟಲಿ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಾ ಕಲಿಕೆಯೊಂದಿಗೆ ಇಂತಹ ವಿಶೇಷ ಹವ್ಯಾಸಗಳನ್ನು ಬೆಳೆಸಲು ಅವಕಾಶ ಮಾಡಿಕೊಡುವ ಶಾಲಾ ಕಾಲೇಜುಗಳು ಪ್ರಶಂಸನೀಯ ಎಂದು ಶ್ಲಾಘಿಸಿದರು.

ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ್ ಭಟ್ ರವರು ಅಂಚೆ ಚೀಟಿ ಸಂಗ್ರಹಣಾ ಹವ್ಯಾಸದ ಬಗ್ಗೆ ಮಾಹಿತಿ ನೀಡಿದರು .ಶಾಲಾ ಪ್ರಾಂಶುಪಾಲೆ ಸಹನಾ ಹೆಗಡೆಯವರು ವಿದ್ಯಾರ್ಥಿ ದೆಸೆಯಲ್ಲಿ ಇಂತಹ ವಿಶಿಷ್ಟ ಹವ್ಯಾಸಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು. ಈ ಸಂದರ್ಭದಲ್ಲಿ ಫಿಲಾಟಲಿ ಕ್ಲಬ್ ಅನ್ನು ವಿದ್ಯಾವರ್ಧಕ ಶಾಲೆಯಲ್ಲಿ ಆರಂಭಿಸಲಾಯಿತು .

ಸಹ ಪ್ರಾಂಶುಪಾಲರಾದ ನೀತಾ ಶೆಟ್ಟಿ ಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಡುಪಿ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ ನಡೆಯಿತು .ಉಡುಪಿ ಅಂಚೆ ವಿಭಾಗದ ವಿಭಾಗಿಯ ಕಚೇರಿ ಸಹಾಯಕ ಪ್ರಜ್ವಲ್ ವಿ ಉಪಸ್ಥಿತರಿದ್ದರು. ಶೋವಿನ್ ಕುಮಾರ್ ರನ್ನು ಶಾಲಾ ಫಿಲಾಟಲಿ ಕ್ಲಬ್ ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು .ಸಹ ಶಿಕ್ಷಕಿ ಲವೀನಾ ಕಾರ್ಯಕ್ರಮ ನಿರ್ವಹಿಸಿದರು.