Sunday, January 19, 2025
ಸುದ್ದಿ

ಸಿಪಿಎಂ ವಿರುದ್ಧ ಉರಿದು ಬಿದ್ಧ ಫಯರ್ ಬ್ಯಾಂಡ್ !

ಕೇರಳ : ಕೇರಳದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ  ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಯೋಜಿಸಿರುವ ಜನ ರಕ್ಷ ಯಾತ್ರೆಯಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದರು ಮತ್ತು ಕೇರಳ ಸಿಪಿಎಂ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗದುಕೊಂಡರು .

ಕೇರಳದ ಕಣ್ಣೂರಿನಲ್ಲಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿ ಬಿಜೆಪಿ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ,ಸಿಪಿಎಂ ಸರ್ಕಾರ ರಾಜ್ಯದಲ್ಲಿ ‘ಹತ್ಯೆ ರಾಜಕೀಯ ನಡೆಸುತ್ತಿದೆ ಈ ಕೂಡಲೇ ರಾಜಕೀಯ ಹತ್ಯೆಗಳನ್ನು ನಿಲ್ಲಿಸಬೇಕು’ ಎಂದು ಯೋಗಿ ಆಗ್ರಹಿಸಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಅವಕಾಶವಿಲ್ಲ ಈ ಯಾತ್ರೆಯು ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಕಮ್ಯೂನಿಸ್ಟ್ ಸರ್ಕಾರಗಳಿಗೆ ಹಿಡಿದ ಕನ್ನಡಿ ಆಗಿದೆ ಎಂದು ಕಮ್ಯುನಿಸ್ಟ್ ಪಕ್ಷಕ್ಕೆ ಯೋಗಿ ನೇರ ಟಾಂಗ್ ನೀಡಿದ್ದಾರೆ .
ಜನ ರಕ್ಷ ಯಾತ್ರೆ ಇದು ಕೋಮು ಸೌಹಾರ್ದ ಕೆಡಿಸುವ ಯಾತ್ರೆಯಲ್ಲ ಇದು ಜಿಹಾದಿ ಶಕ್ತಿಗಳ ವಿರುದ್ಧ ಜನರನ್ನು ಜಾಗ್ರತ ಗೊಳಿಸುವ ಯಾತ್ರೆಯಾಗಿದೆ ಎಂದರು .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು