Monday, November 25, 2024
ಸುದ್ದಿ

ಅಕ್ರಮ ಗಾಂಜಾ ಸಾಗಾಟ : ಇಬ್ಬರನ್ನ ಬಂಧಿಸಿದ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ, ಮತ್ತು ಸಿಬ್ಬಂದಿಗಳು –ಕಹಳೆ ನ್ಯೂಸ್

ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ, ಮತ್ತು ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳ ಜಿಲ್ಲೆಯ ಕಾಸರಗೋಡ್ ತಾಲೂಕಿನ ವರ್ಕಾಡಿ ಗ್ರಾಮದ ಮಂಜೇಶ್ವರ ಮಚ್ಚಂಪಾಡಿ ಕೋಡಿ ಹೌಸ್, ಅಯಿಷಾ ಅಪಾರ್ಟ್ ಮೆಂಟ್ ನಿವಾಸಿ 34 ವರ್ಷದ ಮಹಮ್ಮದ್ ಅಶ್ರಫ್, ಹಾಗೂ ಕೇರಳ ಜಿಲ್ಲೆಯ ಕಾಸರಗೋಡ್ ತಾಲೂಕಿನ ವರ್ಕಾಡಿ ಗ್ರಾಮದ ಮಂಜೇಶ್ವರ ಫಾತಿಮಾ ಸ್ಕೂಲ್ ಪಾವೂರು ಕ್ವಾಟ್ರಸ್ 36 ವರ್ಷದ ಅಬ್ದುಲ್ ಲತೀಪ್ ಕೆ ಬಂಧಿತ ಆರೋಪಿಗಳು.

ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ವಾಹನ ನಂಬ್ರ ಕೆಎ19.ಎಡಿ.16488ನೇ ನಂಬರ್‌ನ ಗೂಡ್ಸ್ ಅಟೋರಿಕ್ಷಾ ವಾಹನ ಬಮದಿದೆ. ತಡೆದು ನಿಲ್ಲಿಸಿ ವಿಚಾರಿಸಿದಾಗ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿತರಿಂದ ಸುಮಾರು 3೦,೦೦೦ ರೂಪಾಯಿ ಮೌಲ್ಯದ 805.00 ಗ್ರಾಂ ತೂಕದ ಮಾದಕ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಅಂದಾಜು ರೂ2,೦೦,೦೦೦ ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಈ ಪ್ರಕರಣದ ಕಾರ್ಯಚರಣೆಯು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನವಣೆ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಆಧೀಕ್ಷಕರಾದ ಡಾ. ಶ್ರೀ ಕುಮಾರಚಂದ್ರ ರವರ ನಿರ್ದೇಶನದಂತೆ, ಮಾನ್ಯ ಬಂಟ್ವಾಳ ಡಿ.ವೈಎಸ್.ಪಿ ಪ್ರಥಾಪ್ ಸಿಂಗ್ ತೊರಾಟ್‌ರವರ ಸೂಚನೆಯಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ಹಾಗೂ ವೇಣೂರು ಠಾಣಾ ಪಿ.ಎಸ್.ಐ ಸೌಮ್ಯ ಜೆ, ಮತ್ತು ವೃತ್ತ ಕಛೇರಿಯ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಇಬ್ರಾಹಿಂ, ಚೌಡಪ್ಪ, ಸುನಿಲ್ ಹಪ್ಪಳ್ಳಿ, ಮತ್ತು ಜೀಪು ಚಾಲಕ ಮಹಮ್ಮದ್ ಅಸೀಫ್, ಲಾರೆನ್ಸ್ ಹಾಗೂ ವೇಣೂರು ಠಾಣಾ ಸಿಬ್ಬಂದಿಗಳಾದ ವೆಂಕಟೇಶ್ ನಾಯ್ಕ್, ರವೀಂದ್ರ, ಪಂಪಾಪತಿ, ಕೇಶವತಿ, ಶಶಿಕುಮಾರ್, ಶ್ರೀನಿವಾಸ, , ತ್ರಿಮೂರ್ತಿ, ಹನುಮಂತ, ಲತಾರವರು ಭಾಗವಹಿಸಿದ್ದರು.