Sunday, November 24, 2024
ಸುದ್ದಿ

“ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ ದೀಪ ಪೂಜನ್ – ಕಹಳೆ ನ್ಯೂಸ್

‘ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರದ ಅಂಗವಾಗಿ ಅ.11 ರಂದು ಶ್ರೀರಾಮ ಪದವಿ ವಿಭಾಗದ ಆಜಾದ್ ಸಭಾಭವನದಲ್ಲಿ ನಡೆದ ಸಾಮೂಹಿಕ ದೀಪ ಪೂಜನ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾದ ಶ್ರೀಮತಿ ಕಮಲಾ ಪ್ರಭಾಕರ್ ಭಟ್ ಹಾಗೂ ಶಿಬಿರಾಧಿಕಾರಿಯಾದ ಶ್ರೀಮತಿ ಪ್ರಮಿತಾ ಚಾಲನೆಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಬಿರದಲ್ಲಿ ದೀಪ ಪೂಜನದ ಮಹತ್ವ ಏನೆಂದರೆ ಜೀವನದಲ್ಲಿ ಶಿಬಿರದ ಬೆಳಕು ಜ್ಞಾನದಲ್ಲಿ ಸ್ಥಾಯಿಯಾಗಿರಲಿ ಎಂಬ ಉದ್ದೇಶ. ನಮ್ಮದು ಮಾತೃ ಪ್ರಧಾನವಾದ ಸಮಾಜ. ಇಲ್ಲಿ ನಾವು ತಾಯಿಯನ್ನು ಪೂಜಿಸಬೇಕು. ಮನಸ್ಸಿಗೆ ಪ್ರೇರಣೆ ಕೊಡುವುದು ಬುದ್ಧಿ. ದೀಪಾರಾಧನೆಯಿಂದ ಮನೆಗೆ ಮತ್ತು ಸಮಾಜಕ್ಕೆ ನೀವು ಬೆಳಕಾಗಬೇಕು. ಬೆಳಕಿನಿಂದ ಸಾರ್ಥಕ ಜೀವನ ಸಾಧ್ಯ. ವಿದ್ಯೆ, ಬುದ್ಧಿ, ಜ್ಞಾನ, ವಿನಯ, ಸದ್ಗುಣಗಳನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ನಮ್ಮೊಳಗಿನ ಅಜ್ಞಾನ ದೂರವಾಗಿ ಜ್ಞಾನದ ಜ್ಯೋತಿ ಬೆಳಗುವಂತಾಗಲಿ ಎಂದು ಪುರೋಹಿತರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಪೂಜನವನ್ನು ನೆರವೇರಿಸಿ, ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ದಿಶಾ ಬಾರತ್ ಸದಸ್ಯರಾದ ಶ್ರೀಮತಿ ರಾಧ, ಕುಮಾರಿ ತೇಜಸ್ವಿನಿ, ಶ್ರೀ ಸಂದೇಶ್ ಉಪಸ್ಥಿತರಿದ್ದರು. ಕುಮಾರಿ ದೀಪಿಕಾ ಕೆ ಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.