Monday, January 20, 2025
ಸುದ್ದಿ

ಉಡುಪಿ: “ಆರೋಪ ಸಾಬೀತು ಪಡಿಸಿ ಇಲ್ಲವೇ ರಾಜಕೀಯ ನಿವ್ರತ್ತಿ ಘೋಷಿಸಿ” : ವಿನಯ್ ಕುಮಾರ್ ಸೊರಕೆಗೆ SDPI ಜಿಲ್ಲಾಧ್ಯಕ್ಷ ಶಾಹಿದ್ ಅಲೀ ಆಗ್ರಹ -ಕಹಳೆ ನ್ಯೂಸ್

ಉಡುಪಿ: ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ವೋಟಿಂಗ್ ಬ್ಯಾಂಕ್ ಆಗಿ ಮಾತ್ರ ಇಟ್ಟುಕೊಂಡು ವಿಶೇಷವಾಗಿ ಮುಸ್ಲಿಮರ ರಾಜಕೀಯ ಭವಿಷ್ಯದ ತೇಜೋವಧೆ ಮಾಡುತ್ತಾ ತಮ್ಮ ರಾಜಕೀಯದ ಬೇಳೆ ಬೇಯಿಸುವುದನ್ನು ಈಗಲೂ ಬಿಡಲಿಲ್ಲ ಎನ್ನುವುದು ನಿನ್ನೆಯ ಪತ್ರಿಕಾ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆಯವರು ಸಾಬೀತು ಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಸ್ಲಿಮರ ರಾಜಕೀಯ ಚಿಂತನೆಯು ದಿನದಿಂದ ದಿನಕ್ಕೆ ಬೆಳೆಯುವುದು ಸಹಿಸದೆ ತಮ್ಮ ಕ್ಷೇತ್ರದಲ್ಲಿ ತಮ್ಮ ಮುಂದೆ ಬರುವ ದಿನಗಳಲ್ಲಿ ಚುನಾವಣೆಗೆ ಪ್ರತಿಸ್ಪರ್ದಿಯಾಗಿ SDPI ನಿಲ್ಲುವುದು ತಿಳಿದು ಹೇಗಾದರು ಮಾಡಿ SDPI ಯನ್ನು ನಿರ್ನಾಮ ಮಾಡುವ ಉದ್ದೇಶದಿಂದ ಇಂತಹ ಹೇಳಿಕೆ ಕೊಡುವುದು ನಾಯಕರಾದ ಇವರಿಗೆ ತಕ್ಕುದಲ್ಲ. ಸಂವಿಧಾನದ ಮೇಲೆ ನಂಬಿಕೆ ಇಟ್ಟ ಜನಪರ ಪ್ರಾಮಾಣಿಕ ಪ್ರಜಾಸಾತ್ತಾತ್ಮಕ ಜಾತ್ಯತೀತ ಪಕ್ಷ ವನ್ನು ಮುಗಿಸಲು ಹೊರಟ ಇವರಿಗೆ ಪ್ರಜಾಪ್ರಭುತ್ವ ದ ಮೇಲೆ ಇರುವ ನಂಬಿಕೆ ಎಷ್ಟುಯೆಂದು ಇದರಿಂದ ತಿಳಿಯುತ್ತದೆ.

ಇವರು ಮಾಡುತಿರುವ ಆರೋಪಗಳೆಲ್ಲವನ್ನು ಸಾಬೀತುಪಡಿಸಲು ನೀವು ಸಿದ್ದರಾಗಿ, ಅಲ್ಲಿಗೆ ಯಾವ ಸಮಯಕ್ಕೆ ನಾವು ಬರಬೇಕೆಂದು ತಿಳಿಸಿ,ಇಲ್ಲವೇ ರಾಜಕೀಯ ಜೀವನದಿಂದ ನಿವ್ರತ್ತಿ ಘೋಷಿಸಿ.

ಸುಳ್ಳು ಆರೋಪಿಸಿ ಜನತೆಯ ದಾರಿ ತಪ್ಪಿಸುವ ಬುದ್ಧಿ ಬಿಟ್ಟುಬಿಡಿ ಮತ್ತು ನಿಮ್ಮದೇ ಪಕ್ಷದವರು ದಿನನಿತ್ಯ ಬಿಜೆಪಿಗೆ ಹೋಗುವುದನ್ನು ತಡೆಯಿರಿ, ಕಾಲಹರಣ ಮಾಡಿದಷ್ಟು ಮುಂದೆ ನೀವು ಬಿಜೆಪಿಗೆ ಹೋಗುವುದನ್ನು ನಾವೆಲ್ಲ ನೋಡಬೇಕಾದೀತು ಎಂದು SDPI ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲೀ ಎಚ್ಚರಿಕೆ ನೀಡಿದ್ದಾರೆ.