Recent Posts

Tuesday, January 21, 2025
ಕ್ರೈಮ್ಸುದ್ದಿ

18 ಶಾಸಕರು ಸೇರಿದಂತೆ 25 ಶ್ರೀಮಂತ ವ್ಯಕ್ತಿಗಳ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಬ್ಯೂಟಿ ಅರ್ಚನಾ ನಾಗ್ – ಪಾರ್ಲರ್‌ ಜೊತೆಗೆ ವೇಶ್ಯಾವಾಟಿಕೆ ದಂಧೆ.! ; ಬೆಚ್ಚಿಬಿದ್ದ ಪೊಲೀಸರು – ಕಹಳೆ ನ್ಯೂಸ್

ಭುವನೇಶ್ವರ: 18 ಶಾಸಕರು ಸೇರಿದಂತೆ 25 ಶ್ರೀಮಂತ ವ್ಯಕ್ತಿಗಳಿಗೆ ಹನಿಟ್ರ್ಯಾಪ್ ಮಾಡಿದ್ದ ಅರ್ಚನಾ ನಾಗ್ ಬ್ಲ್ಯಾಕ್‌ಮೇಲ್ ಮಾಡಿಯೇ ಕೋಟಿ ಕೋಟಿ ಸಂಪಾದಿಸಿದ್ದಾಳೆ. ಈಕೆಯ ಐಷಾರಾಮಿ ಜೀವನ ಕಂಡು ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಒಡಿಶಾದಕಾಳಹಂಡಿ ಜಿಲ್ಲೆಯ 26 ವರ್ಷದ ಅರ್ಚನಾ ನಾಗ್‍ಳನ್ನು ಪ್ರಭಾವಿಗಳಿಗೆ ಬ್ಲ್ಯಾಕ್‍ಮೇಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶ್ರೀಮಂತರು, ಪ್ರಭಾವಿಗಳ ಖಾಸಗಿ ಕ್ಷಣಗಳ ಚಿತ್ರಗಳನ್ನಿಟ್ಟುಕೊಂಡು, ಬೆದರಿಸಿ ಹಣ ವಸೂಲಿ ಮಾಡಿದ ಆರೋಪ ಹೊತ್ತಿರುವ ಈಕೆಯ ಬಗ್ಗೆ ಆಘಾತಕಾರಿ ವಿಷಯಗಳು ಬಹಿರಂಗವಾಗುತ್ತಿವೆ. ಅರ್ಚನಾ ನಾಗ್ ಬಲೆಗೆ ಬಿದ್ದಿರುವ ಬಹುತೇಕ ಶಾಸಕರು ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದವರು ಎಂದು ತಿಳಿದುಬಂದಿದೆ

ಕಳೆದ ವಾರವೇ ಬಂಧನಕ್ಕೊಳಗಾಗಿರುವ ಈ ಚಾಲಾಕಿಯ ವಿರುದ್ಧ ವಸೂಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ತಿನ್ನಲು ಪರದಾಡಬೇಕಾದ ಪರಿಸ್ಥಿತಿಯಲ್ಲಿದ್ದ ಅರ್ಚನಾಳ ಬಳಿ ಇದೀಗ ಭವ್ಯ ಬಂಗಲ, ಐಷಾರಾಮಿ ಕಾರುಗಳು ಸೇರಿದಂತೆ ಕೋಟಿ ಕೋಟಿ ಆಸ್ತಿ ಇದೆ. ಈಕೆಯ ಮನೆಯ ಆಂತರಿಕ ವಿನ್ಯಾಸಕ್ಕೆ ವಿದೇಶಗಳಿಂದ ತರಿಸಲಾದ ವಸ್ತುಗಳನ್ನು ಬಳಸಲಾಗಿದೆಯಂತೆ. ಐಷಾರಾಮಿ ಕಾರುಗಳು, ಹೈಬ್ರಿಡ್‌ ಶ್ವಾನಗಳು, 1 ಬಿಳಿ ಬಣ್ಣದ ಕುದುರೆ ಸೇರಿದಂತೆ ಸಕಲ ಸೌಕರ್ಯಗಳ ಜೊತೆಗೆ ಈಕೆಯ ಐಷಾರಾಮಿ ಜೀವನ ನಡೆಸುತ್ತಿದ್ದಾಳಂತೆ.

ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ 18 ಶಾಸಕರು ಸೇರಿದಂತೆ 25ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಈ ಸುಂದರಿ ಹನಿಟ್ರ್ಯಾಪ್ ಮಾಡಿದ್ದಾಳೆಂದು ತಿಳಿದುಬಂದಿದೆ. ಈ ವಿಷಯವು ಈಗ ಧಾಮ್‌ನಗರ ಕ್ಷೇತ್ರಕ್ಕೆ ನಡೆಯಲಿರುವ ನಿರ್ಣಾಯಕ ಉಪಚುನಾವಣೆಗೂ ಮುನ್ನ ರಾಜ್ಯದ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಈ ಪ್ರಕರಣವನ್ನು ಪೊಲೀಸರು ಗುಟ್ಟಾಗಿ ನಿಭಾಯಿಸಿದ ಬಗ್ಗೆ ಇದೀಗ ಪ್ರಶ್ನೆಗಳು ಎದ್ದಿದ್ದರೆ, ಕಮಿಷನರೇಟ್ ಪೊಲೀಸರು ತನಿಖೆಯನ್ನು ಮುಂದುವರಿಸಲು ಕಷ್ಟಕರ ಪರಿಸ್ಥಿತಿಯಲ್ಲಿದ್ದಾರೆಂದು ತಿಳಿದುಬಂದಿದೆ.

ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್ ಬಂಧಿಸಿ 1 ವಾರ ಕಳೆದರೂ ಆಕೆಯನ್ನು ವಿಚಾರಣೆಗೆ ಏಕೆ ತೆಗೆದುಕೊಳ್ಳಲಿಲ್ಲವೆಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಖಂಡಗಿರಿ ಪೊಲೀಸ್ ಠಾಣೆಯಲ್ಲಿ ಅರ್ಚನಾ ವಿರುದ್ಧ ಬಾಲಕಿಯೊಬ್ಬಳು ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ತನಿಖೆ ಮಾಡಲು ಮತ್ತು ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಲು ಯಾವುದೇ ಆಸಕ್ತಿ ತೋರಿಲ್ಲವಂತೆ.

ಅರ್ಚನಾ ನಾಗ್ ಮತ್ತು ಅವರ ಪತಿ ಜಗಬಂಧು ಚಂದ್ ಅವರು ಅನೇಕ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲವು ರಾಜಕಾರಣಿಗಳು ಅರ್ಚನಾರ ಪರಿಚಯವನ್ನು ಒಪ್ಪಿಕೊಂಡಿದ್ದರೆ, ಇನ್ನು ಕೆಲವರು ಆಕೆಯ ಜೊತೆಗೆ ತಮಗೆ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಆದರೆ, ಪೊಲೀಸರು ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಅರ್ಚನಾ ಮತ್ತು ಅವರ ಪತಿ ಸೇರಿ ಪ್ರಭಾವಿ ವ್ಯಕ್ತಿಗಳಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡಿ, ಅವರನ್ನು ಬ್ಲಾಕ್‍ಮೇಲ್ ಮಾಡಿ ಕೋಟ್ಯಂತರ ಹಣ ಗಳಿಸಿದ್ದಾರಂತೆ.

ಬ್ಯೂಟಿ ಪಾರ್ಲರ್‌ ಜೊತೆಗೆ ವೇಶ್ಯಾವಾಟಿಕೆ ದಂಧೆ!

2015ರಲ್ಲಿ ಭುವನೇಶ್ವರಕ್ಕೆ ಬಂದಿದ್ದ ಅರ್ಚನಾ ನಾಗ್ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದ್ದಳು. ನಂತರ ಬ್ಯೂಟಿಪಾರ್ಲರ್‌ ತೆರೆದಿದ್ದ ಆಕೆ 2018ರಲ್ಲಿ ಜಗಬಂಧು ಚಂದ್‌ ಎಂಬುರ ಜೊತೆ ಮದುವೆಯಾಗಿದ್ದಳು. ಬ್ಯೂಟಿ ಪಾರ್ಲರ್‌ ಜೊತೆಗೆ ಆಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ಅನ್ನೋ ಆರೋಪ ಕೇಳಿಬಂದಿದೆ. ಜಗಬಂಧು ಹಳೆಯ ಕಾರುಗಳ ಶೋರೂಂ ನಡೆಸುತ್ತಿದ್ದ. ಹೀಗಾಗಿ ಆತನಿಗೆ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಪ್ರಭಾವಿಗಳ ಸಂಪರ್ಕವಿತ್ತು. ಇದೇ ಸಂಪರ್ಕವನ್ನು ಬಳಸಿಕೊಂಡ ಅರ್ಚನಾ ಶಾಸಕರು, ಸಚಿವರು, ಶ್ರೀಮಂತರು, ಪ್ರಭಾವಿಗಳಿಗೆ ಹೆಣ್ಣುಮಕ್ಕಳನ್ನು ಪೂರೈಸುತ್ತಿದ್ದಳಂತೆ. ಅವರು ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಚಿತ್ರಗಳು, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳಂತೆ.

ಈ ಬಗ್ಗೆ ಸಿನಿಮಾ ನಿರ್ಮಾಪಕರೊಬ್ಬರು ದೂರು ನೀಡಿ ತನ್ನಿಂದ ಅರ್ಚನಾ 3 ಕೋಟಿ ರೂ. ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಅ.6ರಂದು ಅರ್ಚನಾಳನ್ನು ಬಂಧಿಸಲಾಗಿದೆ. ಇದಲ್ಲದೆ ಅರ್ಚನಾಳ ಈ ಬ್ಲಾಕ್‍ಮೇಲ್ ಕಥಾವಸ್ತುವನ್ನೇ ಇಟ್ಟುಕೊಂಡು ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಮುಂದಾಗಿದ್ದಾರೆಂದು ವರದಿಯಾಗಿದೆ.