Tuesday, January 21, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯ ಕಂಕನಾಡಿ ವಾರ್ಡಿನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಕಂಕನಾಡಿ ವಾರ್ಡಿನ ಪಲ್ಲತ್ತಕಡ್ಕ ಮೀನು ಮಾರುಕಟ್ಟೆಯ ಬಳಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಎಲ್ಲಾ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಸ್ತೆ, ಚರಂಡಿ, ರಾಜಕಾಲುವೆಗಳ ಅಭಿವೃದ್ಧಿಯೊಂದಿಗೆ ಈ ಭಾಗದ ಜನರ ಬೇಡಿಕೆಗಳನ್ನು ಈಡೇರಿಸುವ ನೆಲೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ‌.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕಿಲಾ ಕಾವಾ, ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ವೀಣಾ ಮಂಗಳ, ಶೋಭಾ ಪೂಜಾರಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ಕಿರಣ್ ರೈ ಬಜಾಲ್, ಭರತ್ ರಾಜ್ ಶೆಟ್ಟಿ, ಸುಕೇಶ್ ಅಳಪೆ,ಸುಮತಿ ಚಂದ್ರ‌ಶೇಖರ್, ಸುಜಾತಾ ಕೊಟ್ಟಾರಿ, ಚೇತನ್ ನೆಕ್ಕರೆಮಾರ್, ವಸಂತ್ ಜೆ ಪೂಜಾರಿ, ಯಶೋಧಾ ಗಟ್ಟಿ, ಮಾನಸ ರೈ, ವೀಣಾ ರೈ, ಸವಿತಾ, ಜಯ ಬಜಾಲ್, ಡಾ. ಗೀತಾ ರೈ, ಗಣೇಶ್ ಪಂಡಿತ್, ಮಮತಾ ಪಂಡಿತ್, ರಾಘವೇಂದ್ರ ಶೆಟ್ಟಿ, ನಾಗೇಶ್, ಮಾಧವ ನಾಯಕ್, ಅರುಣ್ ಪೆರ್ಜಿಲ, ಹೈಮಾವತಿ ಶೆಟ್ಟಿ, ಹರೀಶ್ ಕೊಟ್ಟಾರಿ, ಲೋಕೇಶ್ ಕುಡ್ತಡ್ಕ ಮುಂತಾದವರು ಉಪಸ್ಥಿತರಿದ್ದರು.