Saturday, November 23, 2024
ಸುದ್ದಿ

ಮತ್ಸ್ಯ ಪ್ರಿಯರಿಗೊಂದು ಸಿಹಿ ಸುದ್ದಿ : ಇನ್ಮುಂದೆ ವಿಮಾನದ ಮೂಲಕ ಮನೆ ಬಾಗಿಲಿಗೆ ಬರಲಿದೆ ಸೀಫುಡ್ – ಕಹಳೆ ನ್ಯೂಸ್

ಮಂಗಳೂರು: ಮತ್ಸ್ಯ ಪ್ರಿಯರಿಗೊಂದು ಸಿಹಿ ಸುದ್ದಿ.. ಇನ್ಮುಂದೆ ತಾಜಾ ಮೀನುಗಳು ಶೀಘ್ರವಾಗಿ ಮನೆ ಬಾಗಿಲಿಗೆ ಬರೋ ಹೊಸ ಯೋಜನೆ ಆರಂಭವಾಗಲಿದೆ. ಹೌದು.. ಸೀಗರ್ ಸೀಫುಡ್ ಲಾಜಿಸ್ಟಿಕ್ಸ್ ಸಂಸ್ಥೆಯು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಯೋಜನೆ ಹಮ್ಮಿಕೊಂಡಿದೆ. ಜೊತೆಗೆ ಮೀನಿನ ಉತ್ಪನ್ನಗಳನ್ನೂ ಶೀಘ್ರವಾಗಿ ಮನೆ ಬಾಗಿಲಿಗಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ತಾಜಾ ಮೀನನ್ನು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿಸಿ, 243 ಚಿಲ್ಲರೆ ಮಳಿಗೆಗಳ ಮೂಲಕ ಮತ್ತು ಶೀಘ್ರ್ ಆಪ್ ಮೂಲಕ ಜನರ ಮನೆ ಬಾಗಿಲಿಗೆ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ತಲುಪಿಸುವ ಯೋಜನೆ ಇದಾಗಿದೆ.

ಈ ಯೋಜನೆ ಜನವರಿಯಿಂದ ಕರ್ನಾಟಕದಾದ್ಯಂತ ಆರಂಭವಾಗಲಿದ್ದು, ಇದನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೀನಗಾರಿಕೆ ಇಲಾಖೆ ಹಾಗೂ ಫ್ರೀಡಂ ಆಪ್ ಸಹಯೋಗದೊಂದಿಗೆ ಸಚಿವ ಎಸ್ ಅಂಗಾರ ಅವರ ಮುತುವರ್ಜಿಯೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶ ನಡಯಿತು. ಸಮಾವೇಶವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದ್ರು.

ಸಮಾವೇಶದಲ್ಲಿ ಪಂಟಿಯಸ್ ಕರ್ನಾಟಿಕಸ್, ಕೋಯಿ ಕಾರ್ಪ್, ಫಿದರ್ ಬ್ಯಾಕ್ಸ್, ಮಹಶೀರ್, ಗಿಪ್ಟ್ ತಿಲಾಪಿಯಾ, ಡೆನಿಸೋನಿ ಬಾರ್ಬ್, ಡಾಕ್ಟರ್ ಗರ‍್ರಾ, ಗೈನ್ ತೇರಿ, ಸಿಂಘಿ, ಸ್ನೇಕ್ ಹೆಡ್ ಹೀಗೆ ವಿಭಿನ್ನ ಮೀನುತಳಿಗಳ ಪರಿಚಯ ಮಾಡಿಸಲಾಯಿತು.