Friday, November 22, 2024
ಸುದ್ದಿ

ಬೆಳ್ತಂಗಡಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಸಂಘಟನಾ ಮೇಳ – ಕಹಳೆ ನ್ಯೂಸ್

ಬೆಳ್ತಂಗಡಿ: ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ ದ್ವಿದಶಕ ಪೂರ್ತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಲಾದ ಹಿಂದೂ ಸಂಘಟನಾ ಮೇಳವು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿನಾಕಿ ಸಭಾಭವನದಲ್ಲಿ ಅಕ್ಟೋಬರ್ 15 ರಂದು ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ ಮಾತನಾಡುತ್ತಾ ಒಂದು ವರದಿಯ ಪ್ರಕಾರ ಪ್ರಸ್ತುತ ನಮ್ಮ ದೇಶದಲ್ಲಿ 36,000 ಹಿಂದೂ ದೇವಸ್ಥಾನಗಳು ಮುಸಲ್ಮಾನ ಆಕ್ರಮಣಕಾರರ ಕೈಯಲ್ಲಿದೆ, ಅದರಲ್ಲಿ ಒಂದು ರಾಮ ಮಂದಿರ ಪಡೆಯಬೇಕಾದರೆ 500 ವರ್ಷಗಳ ಹೋರಾಟ ಮಾಡಬೇಕಾಯಿತು.
ಕರ್ನಾಟಕದಲ್ಲಿ 32000 ದೇವಸ್ಥಾನ ಸರಕಾರದ ಅಧೀನದಲ್ಲಿದೆ. ಆದರೆ ಚರ್ಚ್ ಮಸೀದಿಗಳು ಸರಕಾರದ ನಿಯಂತ್ರಣದಲ್ಲಿ ಇಲ್ಲ. ನಮ್ಮ ದೇಶದ ಸಂವಿಧಾನದಲ್ಲಿ
ಹಿಂದೂಗಳಿಗೆ ವಿರುದ್ಧವಾದ ಅನೇಕ ಕಾನೂನುಗಳಿವೆ ಅದರಲ್ಲಿ ಒಂದು ಉದಾಹರಣೆ ಆರ್ಟಿಕಲ್ 28 ರಲ್ಲಿ ಯಾವುದೇ ಸರ್ಕಾರಿ ಅನುದಾನದಲ್ಲಿ ಧರ್ಮದ ಆಧಾರದ ಮೇಲೆ ನಡೆಸುವ ಹಕ್ಕು ಯಾರಿಗೂ ಇಲ್ಲ ಆದರೆ ಆರ್ಟಿಕಲ್ 30 ರಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ರಿಗೆ ಸರ್ಕಾರಿ ಅನುದಾನದಲ್ಲಿ ಧರ್ಮದ ಆಧಾರದ ಮೇಲೆ ನಡೆಸುವ ಹಕ್ಕು ಇದೆ. ಅಂದರೆ ಎಲ್ಲಿಯೂ
ಹಿಂದೂಗಳಿಗೆ ಧರ್ಮ ಶಿಕ್ಷಣ ಕೊಡುವ ಅವಕಾಶವೇ ಇಲ್ಲವಾಗಿದೆ,
ಆದ್ದರಿಂದ ಜಾತ್ಯಾತೀತ ಪ್ರಜಾಪ್ರಭುತ್ವಕ್ಕಿಂತ ಧರ್ಮದ ಅಧಿμÁ್ಠನದಿಂದ ನಡೆಯುವ ರಾಜ್ಯ ವ್ಯವಸ್ಥೆಯೇ ಬೇಕು ಹಾಗೂ
ಹಿಂದುಗಳಿಗೆ ಶಾಲೆಗಳಲ್ಲಿ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಎಲ್ಲಿಯೂ ಧರ್ಮ ಶಿಕ್ಷಣ ಸಿಗುತ್ತಿಲ್ಲ. ಆದುದರಿಂದ ಹಿಂದುಗಳ ಅನೇಕ ಸಮಸ್ಯೆಗಳಿಗೆ ಒಂದೇ ಪರಿಹಾರ ಹಿಂದೂರಾಷ್ಟ್ರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಅಭಿನವ ಭಾರತ ಮಿತ್ರ ಮಂಡಳಿಯ ನವೀನ್ ಕುಲಾಲ್ ಇವರು ಮಾತನಾಡುತ್ತ ಸಾರ್ವಜನಿಕ ಉತ್ಸವದ ಮೆರವಣಿಗೆಯಲ್ಲಿ ನಡೆಯುವ ಅನಾಚಾರಗಳನ್ನು ಸಮಿತಿಯು ಅನೇಕ ವರ್ಷಗಳಿಂದ ಕಾನೂನು ಮಾರ್ಗವಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದೆ ನಾವು ಕೂಡ ಅದರಲ್ಲಿ ಕೈಜೋಡಿಸಬೇಕು, ಅದೇ ರೀತಿ ಹಲಾಲ್ ಜಿಹಾದ್
ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ, ಇದರ ಗಂಭೀರತೆಯನ್ನು ಹಿಂದೂ ಜನಜಾಗೃತಿ ಸಮಿತಿಯು ನಮ್ಮ ಗಮನಕ್ಕೆ ತಂದು ಕೊಟ್ಟಿದೆ. ಅದರಿಂದಾಗಿ ಪ್ರತಿಯೊಂದು ಹಿಂದೂಗಳು ಹಲಾಲ್ ಮಾರ್ಕ್ ಇರುವ ವಸ್ತುಗಳನ್ನು ಖರೀದಿಸಬಾರದು,
ಮತ್ತು ಅಂತಹ ವಸ್ತುಗಳು ಗಮನಕ್ಕೆ ಬಂದರೆ ಕೂಡಲೇ ಹಿಂದುಗಳ ಅಂಗಡಿಯವರಿಗೂ ತಿಳಿಸಿ ಪ್ರತಿಯೊಂದು ಹಿಂದುಗಳ ಗಮನಕ್ಕೆ ತಂದುಕೊಡಬೇಕೆಂದು ತಿಳಿಸಿದರು.
ಮೆಖಾಲೆ ಶಿಕ್ಷಣ ಪದ್ದತಿಯಿಂದಾಗಿಯೇ ಹಿಂದೂಗಳು ಧರ್ಮದ ಮೇಲಿನ ಅಭಿಮಾನ ಕಳೆದುಕೊಂಡಿದ್ದಾರೆ, ಹಿಂದೂ ಜನಜಾಗೃತಿ ಸಮಿತಿಯು ಧರ್ಮಶಿಕ್ಷಣದ ಮೂಲಕ ಜಾಗೃತಿ ಮಾಡುವುದರಿಂದ ಭಾರತವು ಖಂಡಿತವಾಗಿಯೂ ಹಿಂದೂ ರಾಷ್ಟ್ರವಾಗುವುದು ಎಂದು ತಿಳಿಸಿದರು.
ಸನಾತನ ಸಂಸ್ಥೆಯ ಸಾಧಕಿ ಸೌ. ಹೇಮಲತಾ ಕಲ್ಲಾಜೆ ಯವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.