ಕೋಸ್ಟಲ್ ಗಾರ್ಡ್ ಬೋಟ್ ಎಡವಟ್ಟು: ಮಲ್ಪೆಯಲ್ಲಿ ಪರ್ಸೀನ್ ಬೋಟ್ ನ ಲಕ್ಷಾಂತರ ಮೌಲ್ಯದ ಮೀನಿನ ಬಲೆಗೆ ಹಾನಿ – ಕಹಳೆ ನ್ಯೂಸ್
ಕೋಸ್ಟಲ್ ಗಾರ್ಡ್ ಬೋಟ್ ಎಡವಟ್ಟಿನಿಂದ ಪರ್ಸೀನ್ ಬೋಟ್ ನ ಲಕ್ಷಾಂತರ ಮೌಲ್ಯದ ಮೀನಿನ ಬಲೆಗೆ ಹಾನಿಯಾದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆಯ ಗರುಡ ಎಂಬ ಬೋಟ್ ಮೀನುಗಾರಿಕೆ ತೆರಳಿತ್ತು. ಈ ಸಂದರ್ಭದಲ್ಲಿ ಮಂಗಳೂರಿನ ಕೋಸ್ಟಲ್ ಗಾರ್ಡ್ ಬೋಟ್ ವೊಂದು ಹಾದು ಹೋಗಿದೆ. ಇದರಿಂದ ಬೋಟ್ ಪ್ಯಾನ್ ಗೆ ಪರ್ಸಿನ್ ಬೋಟ್ ನ ಬಲೆ ಸಿಲುಕಿ ತುಂಡು ತುಂಡಾಗಿದೆ ಎನ್ನಲಾಗಿದೆ.
ಕೋಸ್ಟಲ್ ಗಾರ್ಡ್ ಬೋಟ್ ಅಜಾರೂಕತೆಯಿಂದ ಲಕ್ಷಾಂತರ ರೂ. ಬಲೆ ಹಾನಿಗೀಡಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಬೆಂಗಳೂರು : ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೆ. ಆರ್. ಜಿ. ಹಾಲ್, ಭಾರತೀಯ ವಿದ್ಯಾಭವನದಲ್ಲಿ ಅಕ್ಟೋಬರ 16 ರಂದು ಸಂಜೆ 5 ಗಂಟೆಗೆ ‘ಹಲಾಲ್ ವಿರೋಧಿ ಸಮ್ಮೇಳನ ಹಾಗೂ ‘ಹಲಾಲ್ ಜಿಹಾದ್ ?’ ಎಂಬ ಗ್ರಂಥದ ಲೋಕಾರ್ಪಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ, ಯುವಾ ಬ್ರಿಗೇಡ್‌ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ಕಿರಣ ಬೆಟ್ಟದಾಪುರರವರು ಉಪಸ್ಥಿತರಿದ್ದರು. ಜೊತೆಯಲ್ಲಿ ಹಿಂದವೀ ಜಟ್ಕಾ ಮೀಟ್‌ನ ಸಂಸ್ಥಾಪಕರಾದ ಶ್ರೀ. ಮುನೆಗೌಡ, ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಎಸ್. ಭಾಸ್ಕರನ್, ಸ್ವರ್ಣಭೂಮಿ ಗೋಶಾಲೆಯ ಸಂಸ್ಥಾಪಕರು ಹಾಗೂ ಉದ್ಯಮಿಗಳಾದ ಶ್ರೀ. ಡಿ. ಎಸ್. ರಾಘವೇಂದ್ರ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ಅಮೃತೇಶ ಎನ್. ಪಿ, ಶ್ರೀರಾಮ ಸೇನೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀ. ಚಂದ್ರಶೇಖರ, ಹಿಂದೂ ಹೆಲ್ಪಲೈನ್‌ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಟಿ. ವಿಜಯ ಕುಮಾರ ರೆಡ್ಡಿ ಮುಂತಾದ ಗಣ್ಯರು ಸಹ ಸಹಭಾಗಿಯಾಗಿದ್ದರು.
‘ಹಲಾಲ್ ಜಿಹಾದ್ ಇದು ಭಾರತೀಯ ಅರ್ಥವ್ಯವಸ್ಥೆಗೆ ಸಂಕಟ ! – ಚಕ್ರವರ್ತಿ ಸುಲಿಬೆಲೆ, ಸಂಸ್ಥಾಪಕ, ಯುವ ಬ್ರಿಗೇಡ್
ಸಮಯ ಕಳೆದಂತೆ ನಮ್ಮ ಸಂಸ್ಕೃತಿಯ ಮೇಲಿನ ಆಘಾತಗಳ ಸ್ವರೂಪ ಬದಲಾಗುತ್ತಿದೆ. ಹಿಂದೆ ದೈಹಿಕ ದಾಳಿಗಳಿದ್ದವು, ನಂತರ ಮಾನಸಿಕ, ಬೌದ್ಧಿಕ ದಾಳಿಗಳಾದವು. ಇಂದು ಇವೆಲ್ಲಕ್ಕಿಂತಲೂ ಅಪಾಯಕಾರಿಯಾದ ಆರ್ಥಿಕ ವ್ಯವಸ್ಥೆಯ ಯುದ್ಧ ನಡೆದಿದೆ. ಇಂದು ದೇವಸ್ಥಾನದ ಪ್ರಸಾದಕ್ಕೆ ಬಳಕೆಯಾಗುವ ಬೆಲ್ಲವೂ ಹಲಾಲ್ ಪ್ರಮಾಣಿತವಾಗಿರುವುದು ಕಂಡು ಬರುತ್ತಿದೆ. ನಮ್ಮ ಪ್ರತಿಯೊಂದು ಆಚರಣೆಗಳ ಮೇಲೆ ಪ್ರಶ್ನೆಗಳನ್ನು ಮಾಡಲಾಗುತ್ತದೆ, ಆದರೆ ಇಸ್ಲಾಮಿನ ಯಾವುದೇ ಆಚರಣೆಗಳ ಮೇಲೆ ಯಾರೂ ಯಾವುದೇ ಪ್ರಶ್ನೆಯನ್ನು ಮಾಡುವುದಿಲ್ಲ. ಹಲಾಲ್‌ನಿಂದಾಗಿ ಭಾರತದ ಮಾಂಸದ ಉದ್ಯಮದಲ್ಲಿರುವ ದಲಿತರನ್ನು ಬಹಿಷ್ಕರಿಸಲಾಗುತ್ತಿದೆ. ಈ ಆರ್ಥಿಕ ಯುದ್ಧವನ್ನು ನಾವೆಲ್ಲರೂ ಜಾಗೃತರಾಗಿ ಎದುರಿಸಬೇಕಿದೆ. ಹಲಾಲ್ ಜಿಹಾದ್ ಇದು ಭಾರತೀಯ ಅರ್ಥವ್ಯವಸ್ಥೆಗೆ ಸಂಕಟವಾಗಿದ್ದು ಈ ದೀಪಾವಳಿಯನ್ನು ಹಲಾಲ ಮುಕ್ತವಾಗಿ ಆಚರಿಸೋಣ ಎಂದು ಯುವಾ ಬ್ರಿಗೇಡಿನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆಯವರು ಕರೆ ನೀಡಿದ್ದಾರೆ.
ಹಲಾಲ್ ಮೂಲಕ ವಿಶ್ವದ ಮೇಲೆ ಸಂಪೂರ್ಣ ನಿಯಂತ್ರಣ ಮಾಡುವ ಪ್ರಯತ್ನವಾಗಿದೆ ! – ಶ್ರೀ. ರಮೇಶ ಶಿಂದೆ, ‘ಹಲಾಲ್ ಜಿಹಾದ್ ?’ ಗ್ರಂಥದ ಸಂಕಲನಕಾರರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು
‘ಹಲಾಲ್’ ಕೇವಲ ಧರ್ಮಕ್ಕೆ ಸಂಬಂಧಿಸಿರದೇ ಇಂದು ಇಸ್ಲಾಮಿ ಆರ್ಥಿಕ ವ್ಯವಸ್ಥೆಯಾಗುತ್ತಿದೆ. ಹಲಾಲ್ ಮೂಲಕ ವಿಶ್ವದ ಮೇಲೆ ಸಂಪೂರ್ಣ ನಿಯಂತ್ರಣ ಮಾಡುವ ಪ್ರಯತ್ನವಾಗಿದೆ. ಭಾರತದಲ್ಲಿ ಪರ್ಯಾಯ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ. ಮಾಂಸದಿಂದ ಪ್ರಾರಂಭವಾದ ಹಲಾಲ್ ಇಂದು ಔಷಧಿ, ಕಟ್ಟಡ, ಬಟ್ಟೆ, ಪ್ರವಾಸೊದ್ಯಮ, ಸ್ಟಾಕ್ ಮಾರ್ಕೆಟ್, ಹೀಗೆ ಎಲ್ಲ ಕ್ಷೇತ್ರವನ್ನು ವ್ಯಾಪಿಸಿ ವಿಶ್ವದ 2 ಯುಎಸ್ ಟ್ರಿಲಿಯನ್ ಡಾಲರ್ ಎಕನಾಮಿಯಾಗಿದೆ. ಭಾರತದಲ್ಲಿ 4 ಲಕ್ಷ ಕೋಟಿ ಮಾಂಸದ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಭಾರತದಲ್ಲಿ FSSAI, FDA ನಂತರ ಪ್ರಮಾಣಪತ್ರ ನೀಡುವ ಸರಕಾರಿ ಸಂಸ್ಥೆಗಳು ಇರುವಾಗ ಪ್ರತ್ಯೇಕ ಮತದ ಆಧಾರದ ಮೇಲೆ ಪ್ರಮಾಣಪತ್ರ ನೀಡಿ, ಹಣ ಸಂಗ್ರಹ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ಹಣ ಭಯೋತ್ಪಾಧನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ. ಇದು ಹಿಂದೂಗಳ ಮೇಲೆ ಮಾಡಿದ ಜಿಜಿಯಾ ತಲೆದಂಡವಾಗಿದೆ.
ಹಿಂದೂಗಳು ಕುಂಭಕರ್ಣನ ನಿದ್ದೆಯಿಂದ ಎದ್ದು ಹಲಾಲ್ ಷಡ್ಯಂತ್ರವನ್ನು ನಾಶ ಮಾಡಬೇಕಿದೆ – ನ್ಯಾಯವಾದಿ ಕಿರಣ ಬೆಟ್ಟದಾಪುರ, ಕರ್ನಾಟಕ ಉಚ್ಚ ನ್ಯಾಯಾಲಯ
ಹಲಾಲ ಪ್ರಮಾಣಪತ್ರವನ್ನು ಯಾವುದೇ ಸರಕಾರಿ ಸಂಸ್ಥೆಗಳು ನೀಡದೇ ಅವುಗಳನ್ನು ಖಾಸಗೀ ಸಂಸ್ಥೆಗಳು ನೀಡುತ್ತಿವೆ. ಹಲಾಲ್ ಅರ್ಥವ್ಯವಸ್ಥೆಯಲ್ಲಿ ಮುಸಲ್ಮಾನರು ಇರುವುದು ಖಡ್ಡಾಯವಾಗಿದೆ ಇದು ಭಾರತೀಯ ಸಂವಿಧಾನದ ವಿರುದ್ಧವಾಗಿದೆ. ಇದು ಸಂವಿಧಾನದ ಸಮಾನತೆಯನ್ನು ಗೌರವಿಸುವುದಿಲ್ಲ. ಪ್ರತಿಯೊಬ್ಬರೂ ಈ ಗ್ರಂಥವನ್ನು ಖರೀದಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಚೆನ್ನೈನಲ್ಲಿ ಜೈನ ಬೇಕರಿಯಲ್ಲಿ ಜೈನ ರೀತಿಯಲ್ಲಿ ಆಹಾರ ತಯಾರಿಸಲಾಗುತ್ತಿದೆ, ನಾವು ಮೊಟ್ಟೆಯನ್ನು ಬಳಸುವುದಿಲ್ಲ ಎಂದು ಹೇಳಲಾದಾಗ ಆ ಬೇಕರಿಯ ಮೇಲೆ ಕಾರ್ಯಾಚರಣೆಯಾಯಿತು, ಹೀಗಿರುವಾಗ ಹಲಾಲ್‌ನ ವಿಷಯದಲ್ಲೂ ಏಕೆ ಕಾರ್ಯಾಚರಣೆ ಆಗಬಾರದು. ನಾವು ಕುಂಭಕರ್ಣನ ನಿದ್ದೆಯಿಂದ ಎದ್ದು ಈ ಷಡ್ಯಂತ್ರವನ್ನು ನಾಶ ಮಾಡಬೇಕಿದೆ