Sunday, January 19, 2025
ಸುದ್ದಿ

ಒಂದೇ ವರ್ಷದಲ್ಲಿ ಗೋಹತ್ಯೆ ಪ್ರಮಾಣದಲ್ಲಿ ಭಾರೀ ಇಳಿಕೆ, ರಾಘವೇಶ್ವರ ಶ್ರೀ ಸಂತಸ.

ಹುಬ್ಬಳ್ಳಿ: ಗೋ ಸಂರಕ್ಷಣಾ ಜಾಗೃತಿಯ ಆಂದೋಲನದ ಪರಿಣಾಮ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಗೋಹತ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ರಾಮಚಂದ್ರಾ– ಪುರ ಮಠದ ರಾಘವೇಶ್ವರ ಭಾರತೀ ಶ್ರೀ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಟ್ಕಳ ಮುಸ್ಲಿಮರ ಹೇಳಿಕೆಯನ್ನು ಆಧರಿಸಿಯೇ ನಾವು ಈ ವಿಷಯ ಹೇಳುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅರ್ಧದಷ್ಟು ಗೋವುಗಳು ವಧಾಲಯಕ್ಕೆ ಸಿಕ್ಕಿಲ್ಲ ಎಂದು ಅವರು ಹೇಳುತ್ತಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಬೆಂಗಳೂರಿನ ಶಿವಾಜಿನಗರದಲ್ಲಿ ಕಳೆದ ವರ್ಷ 15 ಸಾವಿರ ಗೋವುಗಳನ್ನು ಹತ್ಯೆ ಮಾಡಲಾಗಿತ್ತು. ಅಲ್ಲಿ ಈ ವರ್ಷ ಕೇವಲ ಎರಡೂವರೆ ಸಾವಿರ ಗೋವುಗಳನ್ನು ಮಾತ್ರ ಹತ್ಯೆ ಮಾಡಲಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು