ಹಿಂದೂ ಗ್ರಾಹಕರಿಗೆ ಒತ್ತಾಯದಿಂದ ‘ಹಲಾಲ್’ ವಸ್ತುಗಳನ್ನು ನೀಡಬೇಡಿ !: ಹಿಂದೂ ಜನಜಾಗೃತಿ ಸಮಿತಿಯಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಚಾಲನೆ – ಕಹಳೆ ನ್ಯೂಸ್
ಬೆಂಗಳೂರು : ದೇಶದ ಕೇವಲ 15 ಶೇ. ದಷ್ಟಿರುವ ಮುಸಲ್ಮಾನ ಸಮಾಜಕ್ಕೆ ಇಸ್ಲಾಂ ಮಾನ್ಯ ‘ಹಲಾಲ್’ ತಿನ್ನಲಿಕ್ಕಿದೆ ಎಂದು 85% ಸಮಾಜದ ಮೇಲೆ ‘ಹಲಾಲ್’ಅನ್ನು ಹೇರಲಾಗುತ್ತಿದೆ. ಕೆಎಫ್ ಸಿ, ಮ್ಯಾಕ್ಡೋನಾಲ್ಡ್ ಕಂಪನಿಗಳಲ್ಲಿ 100 ಶೇ. ಹಲಾಲ್ ಯುಕ್ತ ಪದಾರ್ಥವನ್ನು ನೀಡಲಾಗುತ್ತಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ಈ ಕಂಪೆನಿಗಳ ಮೆನು ಕಾರ್ಡನಲ್ಲಿ ‘ಹಲಾಲ್’ ಮತ್ತು ‘ನಾನ್ ಹಲಾಲ್’ ಎಂದು ವರ್ಗೀಕರಣ ಮಾಡಿ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ಬಸವೆಶ್ವರ ನಗರದ ಮ್ಯಾಕ್ಡೋನಾಲ್ಡ್ ಹಾಗೂ ಕೆ.ಎಫ್.ಸಿ ರೆಸ್ಟೋರೆಂಟ್ ಗಳ ಮುಖ್ಯಸ್ಥರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀ. ಚಂದ್ರಶೇಖರ್, ಹಿಂದವೀ ಜಟ್ಕಾ ಮೀಟ್ ನ ಸಂಸ್ಥಾಪಕರಾದ ಶ್ರೀ. ಮುನೇಗೌಡ, ವಿಶ್ವ ಸನಾತನ ಪರಿಷತ್ ಅಧ್ಯಕ್ಷರಾದ ಶ್ರೀ. ಎಸ್. ಭಾಸ್ಕರನ್, ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಮೃತೇಶ್ ಎನ್.ಪಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ, ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ, ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಇವರು ಮಾತನಾಡಿ, ಸದ್ಯ ಭಾರತೀಯ ಮುಸಲ್ಮಾನರಿಂದ ಪ್ರತಿಯೊಂದು ಪದಾರ್ಥ, ವಸ್ತು ಇಸ್ಲಾಂಗನುಸಾರ ಅರ್ಥಾತ್ ‘ಹಲಾಲ್’ ಇರಬೇಕೆಂದು ಬೇಡಿಕೆಯಾಗುತ್ತಿದೆ. ಈ ಬೇಡಿಕೆಯು ಕೇವಲ ಮಾಂಸಕ್ಕಾಗಿ ಸೀಮಿತವಾಗಿರದೇ ಧಾನ್ಯ, ಹಣ್ಣು, ಸೌಂದರ್ಯಪ್ರಸಾಧನಗಳು, ಔಷಧಿಗಳು ಮುಂತಾದ ಉತ್ಪಾದನೆಗಳು ಸಹ ಹಲಾಲ್ ಪ್ರಮಾಣಿಕೃತವಾಗಿರಬೇಕು ಎಂದು ಮುಸಲ್ಮಾನರ ಬೇಡಿಕೆಯಿದೆ. ಅದಕ್ಕಾಗಿ ತಮ್ಮಂತಹವರು ಅವಶ್ಯಕತೆಯಿಲ್ಲದಿದ್ದರೂ ಪ್ರತಿಯೊಂದು ಉತ್ಪಾದನೆಗಾಗಿ 50 ರಿಂದ 60 ಸಾವಿರ ರೂ. ಗಳನ್ನು ತುಂಬಿಸಿ ‘ಹಲಾಲ್’ ಪ್ರಮಾಣಪತ್ರ ಪಡೆಯಬೇಕಾಗುತ್ತಿದೆ, ಅತ್ಯಂತ ಮಹತ್ವದ್ದೇನೆಂದರೆ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ‘ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ (FSSAI) ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಸ್ವತಂತ್ರ ವಾದಂತಹ ‘ಆಹಾರ ಮತ್ತು ಔಷಧಿ ಆಡಳಿತ’ ವಿಭಾಗ (FDA) ಅಸ್ತಿತ್ವದಲ್ಲಿರುವಾಗ ಇದನ್ನು ಮುಸಲ್ಮಾನ ಸಂಘಟನೆಗಳಿಂದ ನೀಡಲಾಗುತ್ತಿದೆ. ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಧಾರದಲ್ಲಿ ಸರ್ಟಿಫಿಕೇಶನ್ ಇದು ಕಾನೂನುಬಾಹಿರವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ಕಠೋರ ಶಬ್ದಗಳಲ್ಲಿ ನಿಷೇಧಿಸುತ್ತಿದೆ. ಹಿಂದೂಗಳಿಗೆ ಒತ್ತಾಯಪೂರ್ವಕ ‘ಹಲಾಲ್’ ಪದಾರ್ಥಗಳನ್ನು ತಿನ್ನಿಸಿ ನೀವು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಅಧಿಕಾರಕ್ಕೆ ಗದಾ ಪ್ರಹಾರ ಮಾಡುತ್ತಿದ್ದೀರಿ. ಇದಕ್ಕಾಗಿ ತಮ್ಮ ಕಂಪನಿಯಲ್ಲಿ ಹಿಂದೂ ಗ್ರಾಹಕರಿಗಾಗಿ ‘ಹಲಾಲ್’ ರಹಿತ ಪದಾರ್ಥಗಳನ್ನು ತಕ್ಷಣ ಒದಗಿಸಿ ಕೊಡಬೇಕು, ‘ಹಲಾಲ್’ ಮತ್ತು ‘ನಾನ್ ಹಲಾಲ್’ ಎಂಬ ವರ್ಗೀಕರಣ ಮಾಡಿ ಒದಗಿಸಿ ಕೊಡಬೇಕು, ಮೆನು ಕಾರ್ಡನಲ್ಲಿ ‘ಹಲಾಲ್’ ಮತ್ತು ‘ನಾನ್ ಹಲಾಲ್’ ಎಂದು ವರ್ಗೀಕರಣ ಮಾಡಿ ಒದಗಿಸಿ ಕೊಡಬೇಕು, ಈ ಬಗ್ಗೆ ನಮ್ಮ ಬೇಡಿಕೆಗಳನ್ನು ಮನ್ನಿಸಿ ನಮಗೆ ಒಂದು ವಾರದೊಳಗೆ ತಿಳಿಸಬೇಕು. ಇಲ್ಲವಾದರೆ ನಮಗೆ ಬೇರೆ ಪರ್ಯಾಯವಿಲ್ಲದೇ ನಾವು ತಮ್ಮ ದೇಶದಾದ್ಯಂತವಿರುವ ‘ಔಟ್ ಲೆಟ್’ಗಳ ಮೇಲೆ ಹಿಂದೂ ಸಮಾಜವು ಬಹಿಷ್ಕರಿಸುವಂತೆ ಬೇಡಿಕೆ ಮಾಡಬೇಕಾಗುವುದು’ ಎಂದು ಎಚ್ಚರಿಕೆ ನೀಡಿದರು.